ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಎಷ್ಟಿದೆಯೆಂದು ಎಲ್ಲರಿಗೂ ಗೊತ್ತು. ಕೆಲವರು ಇದನ್ನೇ ಲಾಭಕ್ಕೆ ಬಳಸಿಕೊಂಡು ಕಚೇರಿಗೆ ತಡವಾಗಿ ಹೋಗಿ ಟ್ರಾಫಿಕ್ ಗೆ ದೂರುವುದು ಇದೆ. ಆದರೆ ಇಲ್ಲೊಬ್ಬ ವ್ಯಕ್ತಿ ಏನು ಮಾಡಿದ್ದಾನೆ ಗೊತ್ತಾ?
ಇನ್ನೇನು ವರ್ಷದ ಕೊನೆ ಬಂತು. ಈಗ ಕಚೇರಿಗಳಲ್ಲಿ ವೇತನ ಏರಿಕೆ, ಪ್ರಮೋಷನ್ ಕೊಡುವ ಪ್ರಕ್ರಿಯೆಗಳೂ ಜಾರಿಯಲ್ಲಿರುತ್ತವೆ. ಈ ಐಟಿ ಉದ್ಯೋಗಿಯೊಬ್ಬ ಬೆಂಗಳೂರಿನ ಟ್ರಾಫಿಕ್ ಹೆಸರು ಹೇಳಿಕೊಂಡು ಉದ್ಯೋಗದಲ್ಲಿ ಬಡ್ತಿ ಪಡೆದಿದ್ದಾನೆ!
ಅಶ್ವಿನ್ ಎನ್ನುವ ಈ ವ್ಯಕ್ತಿ ಕಳೆದ ಐದು ವರ್ಷಗಳಿಂದ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಬಾರಿ ವೇತನ ಏರಿಕೆ ಪ್ರಕ್ರಿಯೆ ಸಂದರ್ಭದಲ್ಲಿ ಆತ ತನ್ನ ಕೆಲಸದ ಬಗ್ಗೆ ವಿವರಣೆ ಕೊಡುವಾಗ ಬೆಂಗಳೂರಿನ ಟ್ರಾಫಿಕ್ ಮಧ್ಯೆಯೂ ಸರಿಯಾದ ಸಮಯಕ್ಕೆ ಕಚೇರಿಗೆ ತಲುಪುತ್ತಿದ್ದೆ ಎಂದು ವಿವರಣೆ ಬರೆದಿದ್ದ.
ಆತನ ಸಂಸ್ಥೆಯವರೂ ಆತನ ಈ ವಿಶೇಷ ಒಕ್ಕಣೆ ನೋಡಿ ಫುಲ್ ಖುಷ್! ವೇತನ ಏರಿಕೆ ಜತೆಗೆ ಪ್ರಮೋಷನ್ ಕೂಡಾ ಸಿಕ್ಕಿತು. ಈಗ ಆತ ಟೀಮ್ ಲೀಡರ್ ಹುದ್ದೆಗೆ ಬಡ್ತಿ ಪಡೆದಿದ್ದಾನೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ