ಹತ್ತು‌ ನಿಮಿಷಗಳ ಕಾಳಗದ ಹೊಡೆದಾಟದಲ್ಲಿ ಚೆಲ್ಲಿದ್ದ ನೆತ್ತರು

Webdunia
ಸೋಮವಾರ, 31 ಜುಲೈ 2023 (16:52 IST)
ಜೀವನ ಕಟ್ಟಿಕೊಳ್ಳಲು ಆತ ದೇಶ ಬಿಟ್ಟು ಬಂದಿದ್ದ, ಓನರ್ ಕೂಡ ಆತನಿಗೆ ರೂಮ್ ಮಾಡಿಕೊಟ್ಟಿದ್ದ ,ಇತ್ತ ತನ್ನ  ಸಂಬಂಧಿಗೂ ಕೂಡ ಅದೇ ರೂಮ್ ನಲ್ಲಿ‌ ಇರ್ಲಿ ಅಂತ ಜಾಗ ಕೊಟ್ಟಿದ್ದ ಆದ್ರೆ ನಿನ್ನೆ ಕುಡಿದ ಮತ್ತಿನಲ್ಲಿ ಮಾಡಿಕೊಂಡ ಅವಾಂತರಕ್ಕೆ ಹತ್ತು ನಿಮಿಷಗಳ ಕಾಳಗದಲ್ಲಿ ಒಂದು ಜೀವವೇ ಬಲಿಯಾಗಿದೆ.ರೀ ಬೈಕ್ ಕೀಗೋಸ್ಕರ ಯುವಕನೊಬ್ಬನನ್ನ ಕೊಲೆ ಮಾಡಿರೋ ಘಟನೆ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ  ತಡ ರಾತ್ರಿ ನಡೆದಿದೆ. ಸುಮಾರು 25 ವರ್ಷದ ತಿಲಕ್ ಚಂದ್ ಎಂಬಾ ನೇಪಾಳ ಮೂಲದ ಯುವಕನನ್ನ ಕೊಲೆ ಮಾಡಲಾಗಿದೆ.. ಮಂಡ್ಯ ಮೂಲದ ಸಿದ್ದರಾಜು ಎಂಬಾತ ಕೊಲೆ ಮಾಡಿ ಗಿರಿನಗರ ಠಾಣೆಗೆ ಶರಣಾಗಿದ್ದಾನೆ.

ರೂಮಿನ ನೆಲದ ಮೇಲೆ ಚೆಮ್ಮಿರುವ ರಕ್ತ, ಒಂದು ಮರ್ಡರ್ ಕಹಾನಿಯ ಒಂದು ಇಂಟ್ರಾಸ್ಟಿಂಗ್ ಕಥೆ ಹೇಳ್ತಿದೆ.  ಅಂದ್ಹಾಗೆ ಗಿರಿನಗರ ಠಾಣಾ ವ್ಯಾಪ್ತಿಯ ಸುಧಾನಗರದ ಪ್ರತಾಪ್ ಎಂಬುವರ ಕೋಳಿ ಅಂಗಡೀಲಿ ಒಟ್ಟು ಆರು ಜನ ಕೆಲಸ ಮಾಡ್ತಿದ್ರು.. ಅದ್ರಲ್ಲಿ ಇವ್ರಿಬ್ರೂ ಕೂಡ.. ಎಲ್ರಿಗೂ ಉಳಿದುಕೊಳ್ಳೋಕೆ ಒಂದೇ ರೂಮ್ ಕೊಟ್ಟಿದ್ದ ಓನರ್ ಇವ್ರಿಗೆ ಓಡಾಡೋಕೆ ಅಂತಾ ಒಂದು ಬೈಕ್ ಕೂಡ ಕೊಟ್ಟಿದ್ದ.. ಆಗಾಗ ಬೈಕ್ ವಿಚಾರಕ್ಕೆ ಎಲ್ಲರ ಮಧ್ಯೆ ಜಗಳ ಆಗ್ತಿತ್ತು.. ಓನರ್ ಬಂದು ಬುದ್ದಿ ಹೇಳ್ತಿದ್ರು..ನಿನ್ನೆ ರಾತ್ರಿ ಸಿದ್ದರಾಜು ಮತ್ತು ತಿಲಕ್ ಇಬ್ರೂ ಹೊಸಕೆರೆ ಹಳ್ಳಿಯ ಬಾರ್ ವೊಂದಕ್ಕೆ ಕುಡಿಯೋಕೆ ಹೋಗಿದ್ರು.. ಕುಡಿದು ಹನ್ನೊಂದು ಗಂಟೆ ಸುಮಾರಿಗೆ ರೂಮ್ ಗೆ ಬಂದವರ ಮಧ್ಯೆ ಜಗಳ ಆಗಿದೆ.. ಊಟ ತರೋಕೆ ಹೋಗ್ತೀನಿ ಬೈಕ್ ಕೀ ಕೊಡು ಎಂದಿದ್ದಕ್ಕೆ ತಿಲಕ್ ನಿಂಗ್ಯಾಕೆ ಕೊಡ್ಬೇಕು ಕೀ ಕೊಡಲ್ಲ ಅಂತಾ  ವಾದ ಮಾಡಿದ್ದಾನೆ. ಸುಮಾರು‌10 ನಿಮಿಷಗಳ. ಜಗಳ ಮಾಡಿಕೊಂಡಿದ್ದಾರೆ.
ರೂಮ್ ನಲ್ಲಿರೋರು ಜಗಳ ಬಿಡಿಸೋಕೆ ತುಂಬಾ ಯತ್ನಿಸಿದ್ರೂ ಸಾಧ್ಯವಾಗಲಿಲ್ಲ, ಇಬ್ಬರ ಮಧ್ಯೆಯೂ ಜಗಳ ಜೋರಾಗಿದ್ದು ರೂಮ್ ನಲ್ಲಿದ್ದ ಚಾಕು ಕೈಗೆತ್ತುಕೊಂಡಿದ್ದ ಸಿದ್ದರಾಜು, ತಿಲಕ್ ಎದೆ ಭಾಗಗಳಿಗೆ ಇರಿದು ಕೊಲೆ ಮಾಡಿದ್ದಾನೆ.

ಚಾಕು ಇರಿತಕ್ಕೆ ಒಳಗಾದ  ತಿಲಕ್    ಗೆ ರಕ್ತಸ್ರಾವ ಹೆಚ್ಚಾಗಿದೆ. ಈ ವೇಳೆ ಗಾಯಕ್ಕೆ ಅರಿಷಿಣ ಹಾಕಿ ಬ್ಲೀಡಿಂಗ್ ಕಮ್ಮಿ ಮಾಡಿ ಆಸ್ಪತ್ರೆಗೆ ಸಾಗಿಸೋಕೆ ಆರೋಪಿ ಟ್ರೈ ಮಾಡಿದ್ದಾನೆ. ಆದ್ರೆ ಅಷ್ಟರಲ್ಲೇ ತಿಲಕ್ ಜೀವ ಬಿಟ್ಟಿದ್ದ. ನಂತರ ಭಯ ಬಿದ್ದಿದ್ದ ಸಿದ್ದರಾಜು ಮಧ್ಯರಾತ್ರಿ ಒಂದುಗಂಟೆಗೆ ಸೀದಾ ಗಿರಿನಗರ ಠಾಣೆಗೆ ಬಂದು ಸರೆಂಡರ್ ಆಗಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿರೋ ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾಚ್ ಪ್ರಶ್ನೆಯೆತ್ತಿದ ನಾರಾಯಣಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ ಪ್ರತಿಕ್ರಿಯೆ

ಸರ್ದಾರ್ ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಧನ ಕದಿಯುತ್ತಿದ್ದ ಇಬ್ಬರ ಬಂಧನ

ಭಾರತಕ್ಕೆ ಬಂದಿಳಿದ ಪುಟಿನ್,ಅಪ್ಪುಗೆಯೊಂದಿಗೆ ಸ್ವಾಗತಿಸಿದ ನರೇಂದ್ರ ಮೋದಿ

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಪತಿ ಸ್ವರಾಜ್ ಕೌಶಲ್ ನಿಧನ, ಪುತ್ರಿ ಭಾವನಾತ್ಮಕ ಪೋಸ್ಟ್‌

ನಿಮ್ಮ ಸಮಯ ಸರಿ ಇದ್ದರೆ ವಾಚ್ ವಿಷಯ ಬರುತ್ತಿರಲಿಲ್ಲ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಮುಂದಿನ ಸುದ್ದಿ
Show comments