ಸ್ಯಾಂಡಲ್​ವುಡ್​ ಹೀರೋ ಅರೆಸ್ಟ್

Webdunia
ಮಂಗಳವಾರ, 17 ಜನವರಿ 2023 (19:53 IST)
ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಬಂದು ಹೆಣ್ಣುಮಕ್ಕಳ ದಂಧೆಗೆ ಇಳಿದ ಸ್ಯಾಂಡಲ್​ವುಡ್ ಹೀರೋ ಮಂಜುನಾಥ್ ಅಲಿಯಾಸ್ ಸಂಜು ಈಗ ಅರೆಸ್ಟ್ ಆಗಿದ್ದಾನೆ. ಮಂಜುನಾಥ್ ಹೆಸರಿನ ಹೀರೋ ಲೊಕ್ಯಾಂಟೋ ಆ್ಯಪ್​​​ನ ಹಿಂದೆ ಬಿದ್ದಿದ್ದ. ಈ ಆ್ಯಪ್ ಮೂಲಕ ಸುಲಿಗೆಗೆ ಇಳಿದಿದ್ದ. ಹೆಣ್ಣು ಮಕ್ಕಳ ಫೊಟೋ ಬಳಸಿ ನಕಲಿ ಪ್ರೊಫೈಲ್ ಸೃಷ್ಟಿ ಮಾಡುತ್ತಿದ್ದ. ಈ ದಂಧೆಯಲ್ಲಿ ಮಂಜುನಾಥ್ ಪ್ರಮುಖ ಆರೋಪಿ ಆಗಿದ್ದಾನೆ. ಸದ್ಯ, ಬೆಂಗಳೂರಿನ ಸುದ್ದುಗುಂಟೆಪಾಳ್ಯದ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. 2019ರಲ್ಲಿ ಬಿಡುಗಡೆಯಾಗಿದ್ದ ಸೈಕಲಾಜಿಕಲ್​ ಥ್ರಿಲ್ಲರ್ ‘ನ್ಯೂರಾನ್’ ಹೆಸರಿನ ಚಿತ್ರದಲ್ಲಿ ಮಂಜುನಾಥ್ ನಟಿಸಿದ್ದ. ನಂತರ ನಟನೆ ಬಿಟ್ಟು ಹೆಣ್ಣುಮಕ್ಕಳ ದಂಧೆಗೆ ಇಳಿದಿದ್ದ. ಯುವ ಎಂಬ ಹೆಸರಿನಲ್ಲಿ ಈತ ಪರಿಚಯಿಸಿಕೊಂಡಿದ್ದ. ಇದೇ ಹೆಸರಿನಲ್ಲಿ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದ. ದುಷ್ಕೃತ್ಯಕ್ಕೆ ಲೊಕ್ಯಾಂಟೋ ಆ್ಯಪ್​​ ಬಳಕೆ ಆಗುತ್ತಿದೆ. ಈ ಆ್ಯಪ್​​ನಲ್ಲಿ ಹುಡುಗಿಯರ ಫೋಟೊ ಬಳಸಿ ಗ್ರಾಹಕರನ್ನ ಸೆಳೆದು ಗ್ಯಾಂಗ್ ಒಂದು ಸುಲಿಗೆ ಮಾಡುತ್ತಿತ್ತು. ಆನ್​​ಲೈನ್ ಹಾಗು ನೇರವಾಗಿ ಸಂಪರ್ಕಿಸಿ ಹಣ ಪೀಕುತ್ತಿತ್ತು. ಈ ಸಂಬಂಧ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತನಿಖೆಗಿಳಿದಾಗ ಪೊಲೀಸರಿಗೆ ಶಾಕಿಂಗ್ ವಿಚಾರ ಬೆಳಕಿಗೆ ಬಂದಿತ್ತು. ಈ ಗ್ಯಾಂಗ್​ನಲ್ಲಿ ಸ್ಯಾಂಡಲ್​ವುಡ್ ಹೀರೋ ಇರುವ ವಿಚಾರ ಗೊತ್ತಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣವನ್ನು ಮತ್ತಷ್ಟು ಆಳವಾಗಿ ತನಿಖೆ ನಡೆಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಸಿಎಂ‌ ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ ಕೈ‌ ನಾಯಕಿ, ಹೇಳಿದ್ದೇನೂ

ಬ್ರಾಹ್ಮಣರ‌ ವಿರುದ್ದ ಅವಹೇಳನಕಾರಿ‌ ಹೇಳಿಕೆ, ಸಿಗಂದೂರು ಧರ್ಮದರ್ಶಿಗೆ ಕಂಟಕವಾಗುತ್ತಾ ಹೇಳಿಕೆ

ಎನ್‌ಡಿಎಗೆ ಜೆಡಿಎಸ್‌ ಕೊಡುವ ಶಕ್ತಿಯನ್ನು ಮೋದಿ ಗುರತಿಸ್ತಾರೆ: ದೇವೇಗೌಡ

ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಫೆವಿಕಲ್ ಹಾಕಿ ಅಂಟಿಸಿಕೊಂಡಿದ್ದಾರೆ: ಆರ್‌ ಅಶೋಕ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ಹೆಚ್ಚುತ್ತಿರುವ ಚಿರತೆ ಓಡಾಟ, ಜನರಲ್ಲಿ ಆತಂಕ

ಮುಂದಿನ ಸುದ್ದಿ
Show comments