ಮೀಟೂನಲ್ಲಿ ಸಚಿವ ಡಿ.ವಿ. ಸದಾನಂದಗೌಡರ ಮೇಲೆ ಲೈಂಗಿಕ ಕಿರುಕುಳದ ಆರೋಪ

Webdunia
ಶನಿವಾರ, 20 ಅಕ್ಟೋಬರ್ 2018 (06:56 IST)
ಬೆಂಗಳೂರು : ಇತ್ತೀಚೆಗೆ ಹೆಚ್ಚಾಗಿ ಮೀಟೂ ಅಭಿಯಾನದಲ್ಲಿ ಸಿನಿಮಾ ರಂಗಕ್ಕೆ ಸಂಬಂಧಪಟ್ಟವರ ಹೆಸರು ಕೇಳಿಬರುತ್ತಿತ್ತು. ಆದರೆ ಇದೀಗ ರಾಜಕೀಯ ನಾಯಕರತ್ತ ಮುಖ ಮಾಡಿದೆ. ಇದೀಗ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ವಿರುದ್ಧ ಮೀಟೂ ನಲ್ಲಿ ಮಹಿಳೆಯಬ್ಬಳು  ಆರೋಪ ಮಾಡಿದ್ದಾರೆ.


ಹೌದು. ಈ ಹಿಂದೆ ಗುರುತಿಸಿಕೊಂಡಿದ್ದ ಮಾಧುರಿ ಎಂಬವರು ಸದಾನಂದಗೌಡರು ಸಿಎಂ ಆಗಿದ್ದಾಗ ತಮ್ಮ ಜೊತೆ ಅನುಚಿತವಾಗಿ ನಡೆದುಕೊಂಡಿದ್ದರು, ಕೋಡ್ ವರ್ಡ್‍ಗಳನ್ನು ಬಳಸಿ ತನಗೆ ಕಿರುಕುಳ ಕೊಡುತ್ತಿದ್ದರು ಎಂದು ಆರೋಪಿಸಿದ್ದಾರೆ.


ಒಬ್ಬ ಸಿಎಂ ಆಗಿದ್ದವರು ಯಾವ ರೀತಿ ವರ್ತನೆ ಮಾಡಬೇಕು ಎನ್ನುವುದು ಗೊತ್ತಿರುತ್ತದೆ. ಬಿಜೆಪಿಯಲ್ಲಿ ಹಲವು ಮಂದಿ ಅವರವರ ಸ್ಟೇಟಸ್‍ನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಷ್ಟೋ ಕೆಲಸ ಇರುತ್ತದೆ. ಆದರೆ ಅಲ್ಲಿಗೆ ಬನ್ನಿ, ಇಲ್ಲಿಗೆ ಬನ್ನಿ ಅಂತಾ ಹೇಳೋದು, ನಿಮ್ಮನ್ನು ಅಲ್ಲಿ ನೋಡಿದ್ದೀನಿ ಅಂತಾ ಹೇಳೋದು ಎಷ್ಟು ಸರಿ ಅಲ್ಲವೇ? ಕಾಲ್ ಮಾಡೋದು, ನನ್ನ ಮೈ ಮೇಲೆ ಬರೋದು, ಮೈ ಟಚ್ ಮಾಡಿ ಕೂರೋದು, ಇದೆಲ್ಲ ಪ್ರಾರಂಭವಾಯಿತು ಎಂದು ಹೇಳಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸದ ಗೌಡರು,’ ಆಕೆ ಯಾರು ಅಂತ ಗೊತ್ತಿಲ್ಲ. ಆಕೆಗೆ ನಮ್ಮ ಪಕ್ಷದಲ್ಲಿ ಜವಾಬ್ದಾರಿ ನೀಡಿರಬಹುದು. ಆ ಆರೋಪದ ಬಗ್ಗೆ ನನಗೆ ಏನೂ ಗೊತ್ತಿಲ್ಲ’ ಎಂದು ಹೇಳಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ತಾನು ಮಾಡಿದ ಪೋಸ್ಟನ್ನು ಆಕೆ ಡಿಲೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾರಿಗೆ ಅಡ್ಡ ಬಂದ ನಾಯಿ: ಕಾರು ಪಲ್ಟಿಯಾಗಿ ಜನಸ್ನೇಹಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು

ನನ್ನೊಂದಿಗೆ ಆಟವಾಡಲು ಬರಬೇಡಿ: ಕೇಂದ್ರದ ವಿರುದ್ಧ ಬ್ಯಾನರ್ಜಿ ಕಿಡಿ

ಈ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲ್ಲ: ಮಲ್ಲಿಕಾರ್ಜುನ ಖರ್ಗೆ ಹಿಂಗದಿದ್ಯಾಕೆ

ದೇಶದ ಎರಡನೇ ಅತಿದೊಡ್ಡ ಮೀನು ಉತ್ಪಾದನಾ ರಾಜ್ಯವಾಗಿ ಗುಜರಾತ್

ಶಾಸಕರ ಖರೀದಿಗೆ ಹಣವಿದೆ, ರೈತರ ಸಂಕಷ್ಟಕ್ಕಿಲ್ಲ: ಜಗದೀಶ್ ಶೆಟ್ಟರ್ ಆಕ್ರೋಶ

ಮುಂದಿನ ಸುದ್ದಿ