ಸಚಿನ್ ಪಾಂಚಾಳ್ ಸಾವು ಪ್ರಕರಣ: ಮೋದಿ, ಶಾಗೆ ಪತ್ರ ಬರೆಯಲು ಸಹೋದರಿ ನಿರ್ಧಾರ

Sampriya
ಗುರುವಾರ, 2 ಜನವರಿ 2025 (17:22 IST)
Photo Courtesy X
ಬೀದರ್‌: ತಮ್ಮ ಆತ್ಮಹತ್ಯೆಗೆ ಶರಣಾಗಿ 8ದಿನಗಲಾದರೂ ಇದುವರೆಗೂ ಯಾರ ವಿರುದ್ಧವೂ ಕ್ರಮ ಜರುಗಿಸಿಲ್ಲ. ಇದೇ ರೀತಿ ವಿಳಂಭವಾದಲ್ಲಿ ಸಾಕ್ಷ್ಯನಾಶವಾಗುವ ಸಾಧ್ಯತೆಯಿದೆ ಎಂದು ಮೃತ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರ ಸಹೋದರಿ ಸುರೇಖಾ ಆತಂಕ ವ್ಯಕ್ತಪಡಿಸಿದ್ದಾರೆ.  

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣವನ್ನು ಸಿಐಡಿ, ಸಿಬಿಐ ಸೇರಿದಂತೆ ಯಾವುದಾದರೂ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಿ. ನಮ್ಮ ತಮ್ಮನ ಸಾವಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದರು.

ಈಗಾಗಲೇ ತನಿಖೆಯನ್ನು ವಿಳಂಭ ಮಾಡುತ್ತಿರುವುದು ಬೇಸರ ತಂದಿದೆ. ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆಯಲು ನಿರ್ಧರಿಸಿದ್ದೇವೆ ಎಂದರು.

ನನ್ನ ಸಹೋದರ ಸಾವಿನಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ. ನನ್ನ ಸಹೋದರ ಮರಣ ಪತ್ರದಲ್ಲಿ ಯಾರ್‍ಯಾರ ಹೆಸರುಗಳನ್ನು ಬರೆದಿದ್ದಾನೋ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನಿರ್ಲಕ್ಷ್ಯ ತೋರಿದ ಪೊಲೀಸ್‌ ಮೇಲಧಿಕಾರಿಗಳ ಮೇಲೆಯೂ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಬೇಡಿಕೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದು, ಡಿಕೆಶಿ ಕುರ್ಚಿ ಕಿತ್ತಾಟದ ನಡುವೆ ಈ ಸಚಿವನಿಗೆ ಸಿಎಂ ಸ್ಥಾನ ನೀಡಬೇಕೆಂದ ಮುನಿ ಸ್ವಾಮೀಜಿ

ದೆಹಲಿ ನಮ್ಮ ದೇವಸ್ಥಾನ, ಸಿಎಂ ಕುರ್ಚಿ ಕಿತ್ತಾಟದ ನಡುವೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಡಿಕೆಶಿ ಪರ ಸ್ವಾಮೀಜಿಗಳು, ಸಿದ್ದರಾಮಯ್ಯ ಪರ ಕುರುಬರ ಸಂಘ ಹೋರಾಟದ ಎಚ್ಚರಿಕೆ

ಉಡುಪಿಯಲ್ಲಿ ಪ್ರಧಾನಿ ಮೋದಿ ಕರೆಕೊಟ್ಟ 9 ಸಂಕಲ್ಪಗಳು ಯಾವುವು ನೋಡಿ

ನಾಯಕತ್ವ ಬದಲಾವಣೆ ಕಿಚ್ಚಿನ ನಡುವೆ ಡಿಕೆಶಿಯನ್ನು ಭೇಟಿಯಾದ ಶಾಸಕರು ಇವರೇ

ಮುಂದಿನ ಸುದ್ದಿ
Show comments