Select Your Language

Notifications

webdunia
webdunia
webdunia
webdunia

ಆರ್‌ಟಿಐ ಕಾಯ್ದೆಗೆ ಉತ್ತರಿಸದ ಸಚಿವರ ವಿರುದ್ಧ ಕಠಿಣ ಕ್ರಮ

ಆರ್‌ಟಿಐ ಕಾಯ್ದೆಗೆ ಉತ್ತರಿಸದ ಸಚಿವರ ವಿರುದ್ಧ ಕಠಿಣ ಕ್ರಮ
ಬೆಂಗಳೂರು , ಬುಧವಾರ, 27 ಆಗಸ್ಟ್ 2014 (15:22 IST)
ಮಾಹಿತಿ ಹಕ್ಕು ಕಾಯಿದೆಯನ್ವಯ ಮಾಹಿತಿ ನೀಡದೆ ಛೀಮಾರಿ ಹಾಕಿಸಿಕೊಳ್ಳುವವರ ಸರದಿಯಲ್ಲಿ ಇದೀಗ ರಾಜ್ಯದ ಸಚಿವರೂ ನಿಂತಿದ್ದಾರೆ. ಮಾಹಿತಿ ಹಕ್ಕು ಕಾಯಿದೆ ಜಾರಿ ಮಾಡಿದ್ದನ್ನು ಸಾಧನೆಯ ರೀತಿಯಲ್ಲಿ ಹೇಳಿಕೊಳ್ಳುವ ಪಕ್ಷದ ಸಚಿವರೇ ಈ ಕಾಯಿದೆಗೆ ತೋರುತ್ತಿರುವ ಗೌರವವಿದು.
 
ಕಾಯಿದೆಯನ್ವಯ ಆರ್‌ಟಿಐ ಕಾರ್ಯಕರ್ತರೊಬ್ಬರು ಸಲ್ಲಿಸಿದ ಅರ್ಜಿಯೊಂದಕ್ಕೆ ಸಕಾಲದಲ್ಲಿ ಮಾಹಿತಿ ನೀಡದ 14 ಸಚಿವರಿಗೆ ರಾಜ್ಯ ಮಾಹಿತಿ ಆಯೋಗ ನೋಟಿಸ್ ಜಾರಿ ಮಾಡಿದ್ದು, ಆ 27ರಂದು ಆಯೋಗದ ಮುಂದೆ ಹಾಜರಾಗುವಂತೆ ಸಚಿವರ ಆಪ್ತ ಕಾರ್ಯದರ್ಶಿಗಳಿಗೆ ಸೂಚಿಸಿದೆ.
 
ಜಿಲ್ಲಾ ಹಾಗೂ ಗ್ರಾಮ ಮಟ್ಟದಲ್ಲಿ ಕಾಯಿದೆಯನ್ವಯ ಕೇಳಿದ ಮಾಹಿತಿ ನೀಡಲು ತಡ ಮಾಡುವ ಅಧಿಕಾರಿಗಳಿಗೆ ರಾಜ್ಯ ಮಾಹಿತಿ ಆಯೋಗ ನೋಟಿಸ್ ಜಾರಿ ಮಾಡಿದ ಪ್ರಕರಣಗಳು ಸಾಕಷ್ಟಿವೆ. ಆದರೆ ರಾಜ್ಯದ ಸಚಿವರಿಗೇ ಇಲಾಖೆ ಬಗ್ಗೆ ಸಾಮಾನ್ಯ ಮಾಹಿತಿ ನೀಡಲು 9 ತಿಂಗಳಾದರೂ ಸಾಧ್ಯವಾಗಿಲ್ಲ. ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳು ಮಾಡುವ ತಪ್ಪನ್ನೇ ಸಚಿವರೂ ಮಾಡಿದ್ದಾರೆ.
 
ಗೋಕಾಕದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗುಂಡಪ್ಪ ಗಡಾದ ಎಂಬುವರು 2013ರ ನವೆಂಬರ್‌ನಲ್ಲಿ 28 ಸಚಿವರಿಂದ ಮಾಹಿತಿ ಕೇಳಿದ್ದು, 14 ಸಚಿವರಿಂದ ಇನ್ನೂ ಉತ್ತರ ಬಂದಿಲ್ಲ. ಈ ಸಚಿವರಿಗೆ ಆಯೋಗ ಜು.22ರಂದು ನೋಟಿಸ್ ಜಾರಿ ಮಾಡಿದ್ದು, ಆ.27ರಂದು ಆಪ್ತ ಕಾರ್ಯದರ್ಶಿಗಳು ಆಯೋಗದ ಮುಂದೆ ಹಾಜರಾಗಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
 
ನೋಟಿಸ್ ಜಾರಿಯಾದ ಸಚಿವರು
 
ಕಾನೂನು ಸಚಿವ ಟಿ.ಬಿ.ಜಯಚಂದ್ರ, ಅಬಕಾರಿ ಸಚಿವ ಸತೀಶ ಜಾರಕಿಹೊಳಿ, ನೀರಾವರಿ ಸಚಿವ ಎಂ.ಬಿ.ಪಾಟೀಲ್, ಸಹಕಾರಿ ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್, ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ, ಗ್ರಾಮೀಣಾಭಿವೃದ್ಧಿ ಸಚಿವ ಎಚ್. ಕೆ.ಪಾಟೀಲ್, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಕೃಷಿ ಸಚಿವ ಕೃಷ್ಣ ಭೈರೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ, ಮುಜರಾಯಿ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ.

Share this Story:

Follow Webdunia kannada