Daily Horoscope
✕

ಆರ್‌ಎಸ್‌ಎಸ್‌ ನೋಂದಣಿ ಆಗಿಲ್ಲ, ಮಾಡೋದೂ ಇಲ್ಲ: ಪ್ರಿಯಾಂಕ್‌ ಖರ್ಗೆಗೆ ಬಿ.ಎಲ್‌. ಸಂತೋಷ್ ಸವಾಲು

ಸಂಪ್ರಿಯ
ಶನಿವಾರ, 15 ಆಗಸ್ಟ್ 2026 (13:04 IST)
Photo Courtesy X
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್)  ನೋಂದಣಿ ಮಾಡಿಲ್ಲ, ಮಾಡೋದೂ ಇಲ್ಲ, ರಿಜಿಸ್ಟ್ರೇಷನ್ ಮಾಡಿಸಿಕೊಂಡ ಸಂಘಟನೆಗಳು ಏನೇನ್ ಮಾಡುತ್ತಿವೆ ಎಂದು ನಮಗೆ ಗೊತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿದರು.

ಬೆಂಗಳೂರಿನ ಬನ್ನಪ್ಪ ಪಾರ್ಕ್‌ನಲ್ಲಿ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಇದೇ ವೇಳೆ ಆರ್‌ಎಸ್‌ಎಸ್‌ ನೋಂದಣಿ ಕುರಿತು ಮಾತಾಡಿದ ಬಿ ಎಲ್ ಸಂತೋಷ್  ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ್ದಾರೆ. ದೇಶದ ಇತಿಹಾಸ ಹಾಗೂ ಆರ್‌ಎಸ್‌ಎಸ್ ಕೊಡುಗೆಗಳೇನು ದೇಶದ ಅಭಿಮಾನಿಗಳಿಗೆ ಗೊತ್ತಿದೆ. ಆರ್‌ಎಸ್‌ ನೋಂದಣಿ ಮಾಡಿಲ್ಲ, ಮಾಡೋದೂ ಇಲ್ಲ ಎಂದು ಸವಾಲು ಹಾಕಿದರು.

ನಾನೊಬ್ಬ ಬಿಜೆಪಿ ಕಾರ್ಯಕರ್ತ, ನಾನು ಇಲ್ಲಿ ರಾಜಕೀಯ ಮಾತಾಡಲು ಬಂದಿಲ್ಲ, ಆದರೆ ಇವತ್ತು ಬೆಂಗಳೂರಿನ ಶಿವಾಜಿನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇಪ್ಪತ್ತು ವರ್ಷದಿಂದ ಹಿಂದೂ ಪ್ರತಿನಿಧಿಯನ್ನು ಶಾಸಕನಾಗಿ ಮಾಡಲು ಆಗಿಲ್ಲ. ನಾನು ಚಾಲೆಂಜ್ ಮಾಡ್ತೀನಿ, ಈ ಎರಡು ಕ್ಷೇತ್ರದಲ್ಲಿ ಹಿಂದೂ ನಾಯಕನನ್ನು ಕಾಂಗ್ರೆಸ್‌ನಿಂದ ಎಲೆಕ್ಷನ್​​ಗೆ ನಿಲ್ಲಿಸಿ, ಗೆಲ್ಲಿಸಿ ನೋಡೋಣ ಎಂದು ಸವಾಲೆಸಿದಿದ್ದಾರೆ.

ಪ್ರಿಯಾಂಕ ಖರ್ಗೆ ಅವರೇ  ನೋಂದಣಿ ಎಲ್ಲದಕ್ಕೂ ಮಾನದಂಡ ಅಲ್ಲ. ನಿಮ್ಮ ಕುಟುಂಬ, ಗುಲ್ಬರ್ಗಕ್ಕೆ ಓಡಿ ಬಂದು ಜೀವನ ಕಟ್ಕೊಂಡಿದೆ. ನೀವು ನಿಮ್ಮ ಕುಟುಂಬ ಇಲ್ಲಿ ನೆಮ್ಮದಿ ವಾಸ ಮಾಡೋಕೆ ಹಿಂದೂಗಳು ಕಾರಣ. ಅವತ್ತು ನೀವು ಓಡಿ ಬಂದ ದಿನ ರಜಾಕರ ವಿರುದ್ಧ ನಿಂತಿದ್ದು ಇದೇ ಆರ್‌ಎಸ್‌. ಆಗ ನಿಮ್ಮ ಪೋಲಿಸರು ಬಂದಿಲ್ಲ. ನಿಮ್ಮ ರಾಜಕಾರಣಿಗಳು ಬಂದಿಲ್ಲ. ಇದೇ ಆರ್‌ಎಸ್ಎಸ್‌ ಹುಡುಗರು ರಸ್ತೆಗಳಲ್ಲಿ ನಿಂತಿದ್ದರು. ಇದನ್ನು ನೀವೂ ನೆನಪಿಟ್ಟುಕೊಳ್ಳಬೇಕು ಎಂದು ಸಂತೋಷ್​ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ, ಗೃಹ ಸಚಿವರ ರಾಜೀನಾಮೆಗೆ ಎ.ನಾರಾಯಣಸ್ವಾಮಿ ಆಗ್ರಹ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ತೀವ್ರ ನೋವಿನಲ್ಲಿ ನರಳುತ್ತಿದ್ದಾಗ ನನಗೆ ಶಕ್ತಿ ನೀಡಿದ್ದು ಈ ಸ್ತೋತ್ರ: ಪ್ರಧಾನಿ ಮೋದಿ ಬಳಿ ಅಚ್ಚರಿಯ ವಿಷಯ ಬಿಚ್ಚಿಟ್ಟ ಪೈಲಟ್ ಸ್ಮಿತ್

ಎಸ್‍ಐಆರ್ ಬಗ್ಗೆ ಕಾಂಗ್ರೆಸ್‍ಗೆ ಭೀತಿ ಏಕೆ: ಸಿ.ಟಿ.ರವಿ ಪ್ರಶ್ನೆ

ನಿಮ್ಮಿಂದ ಇಡೀ ದೇಶವೇ ಹೆಮ್ಮೆಪಡುತ್ತಿದೆ: ವಿಮಾನ ಅಪಘಾತ ತಪ್ಪಿಸಿದ ಸಾಹಸಿ ಪೈಲಟ್‌ಗೆ ಕರೆ ಮಾಡಿ ಪ್ರಶಂಸಿಸಿದ ಪ್ರಧಾನಿ ಮೋದಿ Video

ಮುಂದಿನ ಸುದ್ದಿ
Show comments