ನಾಳೆಯಿಂದ ಕೆ.ಎಂ.ಎಫ್ ನಿಂದ ಹಾಲು ಮತ್ತು ಮೊಸರಿನ ದರ ಹೆಚ್ಚಳವಾಗಲಿದೆ.ಹಾಲು ಮತ್ತು ಮೊಸರಿಗೆ ತಲಾ ಮೂರು ರೂಪಾಯಿ ಹೆಚ್ಚಳವಾಗಲಿದ್ದು,ಇಂದು ಮಧ್ಯ ರಾತ್ರಿಯಿಂದಲೇ ಹೊಸ ದರ ಜಾರಿಯಾಗಲಿದೆ.
ನಾಳೆ ಬೆಳಗ್ಗೆಯಿಂದ ಲೀಟರ್ ಹಾಲು ಮತ್ತು ಮೊಸರಿನ ಮೇಲೆ ಮೂರು ರೂಪಾಯಿ ಏರಿಕೆಯಾಗಲಿದೆ.ಕೆ.ಎಂ.ಎಫ್ ಹಾಲಿನ ದರ ಪರಿಷ್ಕರಣೆ ಮಾಡಿದೆ.ಇನ್ನೂ ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಪ್ರತಿಕ್ರಿಯಿಸಿದ್ದು ,ಹಾಲು ಮೊಸರು ದರ ನಮ್ಮ ಹೋರಾಟದಿಂದಾಗಿ ಇಂದು ಬೆಲೆ ಏರಿಕೆಯಾಗಿದೆ.ನಾವು ಗ್ರಾಹಕರ ಮೇಲೆ ಬರೆ ಹಾಕಿ ಎಂದು ಹೇಳಿಲ್ಲ.ಹಾಲು ಉತ್ಪಾದಕರಿಗೆ ಕೇವಲ 30 ರೂಪಾಯಿ ನೀಡಲಾಗುತ್ತಿದೆ .ಮತ್ತೆ ಹಾಲು ಉತ್ಪಾದಕರಿಗೆ ಮೂರು ರೂಪಾಯಿ ಹೆಚ್ಚು ಮಾಡಿ ಎಂದು ಮನವಿ ಮಾಡಿದ್ದೇವು.ನಾವು ಹೋರಾಟ ಮಾಡಿರುವುದು ಹಾಲು ಉತ್ಪಾದಕರಿಗೆ ಹೆಚ್ಚು ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿತ್ತು.
ಆದರೆ ಮತ್ತೆ ಕೆ.ಎಮ್.ಎಫ್ ಗ್ರಾಹಕರ ಮೇಲೆ ಬರೆ ಹಾಕುತ್ತಿದೆ.ಈಗಾಗಲೇ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ.ಈಗಿರುವಾಗ ಮತ್ತೆ ಹಾಲು ಮೊಸರು ಬೆಲೆಯಲ್ಲಿ ಮೂರು ರೂಪಾಯಿ ಹೆಚ್ಚಾಗಿರುವುದು ಸರಿಯಲ್ಲ ಎಂದು ಅಸಾಮಾಧಾನ ಹೊರಹಾಕಿದ್ದಾರೆ.ಆದ್ರೆ ಮೊದಲೇ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಸಾರ್ವಜನಿಕರ ಜೇಬಿಗೆ ಮತ್ತೆ ಕತ್ತರಿ ಬಿದ್ದಂತಾಗಿದೆ.