Select Your Language

Notifications

webdunia
webdunia
webdunia
webdunia

ಹುಬ್ಬಳ್ಳಿ ನಗರದಲ್ಲಿ ರೌಡಿಗಳ ಅಟ್ಟಹಾಸ: ತಲ್ವಾರ್, ಹಾಕಿಸ್ಟಿಕ್‌ಗಳಿಂದ ದಾಂಧಲೆ

ಹುಬ್ಬಳ್ಳಿ ನಗರದಲ್ಲಿ ರೌಡಿಗಳ ಅಟ್ಟಹಾಸ: ತಲ್ವಾರ್, ಹಾಕಿಸ್ಟಿಕ್‌ಗಳಿಂದ ದಾಂಧಲೆ
ಹುಬ್ಬಳ್ಳಿ: , ಭಾನುವಾರ, 31 ಜನವರಿ 2016 (13:51 IST)
ಹುಬ್ಬಳ್ಳಿ ನಗರದಲ್ಲಿ ಕಳೆದ ರಾತ್ರಿ ರೌಡಿಗಳ ಗ್ಯಾಂಗ್ ಅಟ್ಟಹಾಸ ಮೆರೆದಿದೆ. ಕಾಲಾ ರಫೀಕ್ ಗ್ಯಾಂಗ್  ತಲ್ವಾರ್ ಹಾಕಿಸ್ಟಿಕ್‌ಗಳಿಂದ ಶಬಾನಾ ಪುತ್ರ ಸಲ್ಮಾನ್ ಖಾನ್ ಎಂಬವರ ಮನೆ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿದರು.

ಕಳೆದ ರಾತ್ರಿ ನುಗ್ಗಿದ ಕಾಲಾ ರಫೀಕ್  ಗ್ಯಾಂಗ್ ಮನೆಯ ಕಿಟಕಿ, ಗಾಜುಗಳು ಮತ್ತು ಸಿಂಟೆಕ್ಸ್ ಟ್ಯಾಂಕ್ ಧ್ವಂಸ ಮಾಡಿ ದಾಂದಲೆ ಮಾಡಿದರು.  ಮಂಕಿ ಕ್ಯಾಪ್ ಧರಿಸಿ, ಮನೆ ಮೇಲೆ ದಾಳಿ ಮಾಡಿದ್ದಾರೆ ಶಬಾನಾ ಪುತ್ರ ಸಲ್ಮಾನ್ ಕಾಲಾ ರಫೀಕ್ ವಿರುದ್ಧ ದೂರು ನೀಡಿದ್ದಾರೆ.

ಈ ಹಿಂದೆ  ಹಣಕಾಸಿನ ವಿಚಾರವಾಗಿ ಸಲ್ಮಾನ್ ಜತೆ  ಗೂಡ್ ಶೆಡ್ ರಸ್ತೆಯಲ್ಲಿ ಗಲಾಟೆಯಾಗಿತ್ತು. ಸಲ್ಮಾನ್ ಕಾಲಾ ರಫೀಕ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಕಾಲಾ ರಫೀಕ್ ತಂಡ ರೊಚ್ಚಿಗೆದ್ದು ಸಲ್ಮಾನ್ ಮನೆಗೆ ದಾಳಿ ಮಾಡಿದೆ. 

Share this Story:

Follow Webdunia kannada