ರಾಬರಿ ಎಲ್ಲಾ ಗೊತ್ತಾದ್ರೆ ತಡೆಯಬಹುದು: ಜಿ ಪರಮೇಶ್ವರ್‌

Sampriya
ಭಾನುವಾರ, 19 ಜನವರಿ 2025 (15:06 IST)
Photo Courtesy X
ಬೆಂಗಳೂರು: ಮಂಗಳೂರಿನ ಕೋಟೆಕಾರ್‌ನಲ್ಲಿ ನಡೆದ ದರೋಡೆ ಪ್ರಕರಣ ಸಂಬಂಧ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹಮಂತ್ರಿ ಜಿ ಪರಮೇಶ್ವರ್ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲ ಚೆನ್ನಾಗಿದೆ ಎಂದರು.

ಬಿಜೆಪಿಯವರು ಸುಮ್ಮನೇ ಆರೋಪ ಮಾಡುತ್ತಿದ್ದಾರೆ. ಸಮಯ ಬಂದಾಗ ಅಂಕಿ ಅಂಶ ಕೊಡುತ್ತೇನೆ ಎಂದರು.  

ಮಂಗಳೂರಿನ ಕೋಟೆಕಾರ್‌ನಲ್ಲಿ ನಡೆದ ದರೋಡೆ ಪ್ರಕರಣ ಸಂಬಂಧ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು.  ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಇದು ರಾಜ್ಯದ ಇತಿಹಾಸದಲ್ಲಿ ನಡೆದ ಅತ್ಯಂತ ದೊಡ್ಡ
ದರೋಡೆ ಪ್ರಕರಣ ಎಂದಿದ್ದರು.

ಕಾನೂನನ್ನು ನಿಭಾಯಿಸುವಲ್ಲಿ ಸೋತಿರುವ ಪರಮೇಶ್ವರ್ ಅವರು ರಾಜೀನಾಮೆ ನೀಡಿ, ಸೂಕ್ತ ವ್ಯಕ್ತಿಗೆ ಗೃಹಮಂತ್ರಿ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಿದ್ದರು. ಇದೀಗ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿ ಪರಮೇಶ್ವರ್ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ದರೋಡೆ ನಡೆಯುವುದು ಮುಂಚೆನೇ ಗೊತ್ತಾದ್ರೆ ತಡೆಯಬಹುದು.  ಮಂಗಳೂರು ದರೋಡೆ ಪ್ರಕರಣ ನಡೆದಾಗ ಅಲ್ಲಿ ಸೆಕ್ಯೂರಿಟಿ ಗಾರ್ಡ್ ಇರಲಿಲ್ಲ. ಈ ರೀತಿ ಆದಾಗ  ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬುಂದು ತಪ್ಪಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೊನ್ನಾಳಿ ಪಟ್ಟಣದಲ್ಲಿ ರಸ್ತೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ರೇಣುಕಾಚಾರ್ಯ

ನಾಗರಹಾವಿನಂತಿರುವ ನಕ್ಸಲಿಸಂ ಪದೇ ಪದೇ ಹೆಡೆ ಬಿಚ್ಚಿ ವಿಷ ಕಾರುತ್ತಿರುತ್ತದೆ: ಅಮಿತ್ ಶಾ

ಮನೆಯೊಳಗೆ ಇರುವಂತೆ ಮಾಡಿದ ರಾಷ್ಟ್ರ ರಾಜಧಾನಿ ವಾಯುಮಾಲಿನ್ಯ

ಕೇರಳದಲ್ಲಿ ಮೊದಲ ಬಾರಿಗೆ ಗೆಲುವಿಗೆ ಪ್ರಧಾನಿ ಮೋದಿಗೆ ಖುಷಿಯೋ ಖುಷಿ

ಜನವರಿ 6 ಕ್ಕೆ ಡಿಕೆ ಶಿವಕುಮಾರ್ ಸಿಎಂ: ಇಕ್ಬಾಲ್ ಹುಸೇನ್ ಮಾತಿಗೆ ಡಿಕೆಶಿ ಹೇಳಿದ್ದೇನು

ಮುಂದಿನ ಸುದ್ದಿ
Show comments