Select Your Language

Notifications

webdunia
webdunia
webdunia
webdunia

ಮರಳು ಅಡ್ಡೆ ಮೇಲೆ ದಾಳಿ: ಶುದ್ಧೀಕರಣ ಯಂತ್ರಗಳ ನಾಶ

ಮರಳು ಅಡ್ಡೆ ಮೇಲೆ ದಾಳಿ: ಶುದ್ಧೀಕರಣ ಯಂತ್ರಗಳ ನಾಶ
ಬೆಳಗಾವಿ , ಮಂಗಳವಾರ, 31 ಮಾರ್ಚ್ 2015 (18:32 IST)
ಇಲ್ಲಿನ ಅಕ್ರಮವಾಗಿ ನಡೆಯುತ್ತಿದ್ದ ಮರಳು ದಂಧೆಯ ಅಡ್ಡೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಮರಳು ಫಿಲ್ಟರ್ ಮಾಡಲು ಬಳಸುತ್ತಿದ್ದ ಯಂತ್ರಗಳನ್ನು ನಾಶಗೊಳಿಸಿದ್ದಾರೆ. ಅಲ್ಲದೆ ದಂಧೆಯಲ್ಲಿ ಪಾಲುದಾರರಾಗಿದ್ದವರನ್ನು ವಶಕ್ಕೆ ಪಡೆದಿದ್ದಾರೆ. 
 
ಈ ಕಾರ್ಯಾಚರಣೆಯು ಬೈಲಹೊಂಗಲ ಎಸಿ ವಿಜಯ್ ಕುಮಾರ್ ಹೊಣಕೇರಿ ಅವರ ನೇತೃತ್ವದಲ್ಲಿ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಿಮಿವಲ್ ಮೊಕದ್ದಮೆ ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ. 
 
ಕಂದಾಯ ಇಲಾಖೆ, ಪರಿಸರ ಇಲಾಖೆ ಹಾಗೂ ಲೋಖೋಪಯೋಗಿ ಇಲಾಖೆಯ ಎಲ್ಲಾ ಅಧಿಕಾರಿಗಳು ಒಗ್ಗೂಡಿ ಜಂಟಿ ಕಾರ್ಯಾಚರಣೆ ನಡೆಸಿದ ಪರಿಣಾಮ ದಂಧೆಯಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  
 
ಜಿಲ್ಲೆಯ ತೋರಣಹಟ್ಟಿ ಗ್ರಾಮದ ಬಳಿ ನಡೆಯುತ್ತಿದ್ದ ಮೂರು ಹಾಗೂ ಕಡಿಕೋಳ ಗ್ರಾಮದ ಬಳಿ ನಡೆಯುತ್ತಿದ್ದ ಎರಡು ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ತಪ್ಪಿತಸ್ಥರನ್ನು ವಶಕ್ಕೆ ಪಡೆದು ಮರಳು ಶುದ್ಧೀಕರಣಕ್ಕೆ ಬಳಸಲಾಗುತ್ತಿದ್ದ ಯಂತ್ರಗಳನ್ನು ನಾಶಗೊಳಿಸಿದ್ದಾರೆ. 

Share this Story:

Follow Webdunia kannada