Webdunia - Bharat's app for daily news and videos

Install App

ಸ್ವಪಕ್ಷದವರ ವಿರುದ್ದ ಮತ್ತೆ ಮುಂದುವರಿದ ರೇಣುಕಾಚಾರ್ಯ ವಾಗ್ದಾಳಿ

Webdunia
ಗುರುವಾರ, 29 ಜೂನ್ 2023 (14:31 IST)
ನಾನು ಯಾವತ್ತಿಗೂ ಬಿಜೆಪಿ ವಿರುದ್ಧ ಮಾತಾಡಿಲ್ಲ.ಬಿಜೆಪಿ ನನಗೆ ಒಂದು ತಾಯಿಯ ಸಮಾನ.ಆದರೆ ಕೆಲವು ದೌರ್ಭಾಗ್ಯ ಗಳನ್ನು ಅನಿವಾರ್ಯ ವಾಗಿ ಮಾತಾಡಬೇಕಾಗುತ್ತದೆ.ಮಾಧ್ಯಮಗಳ ಮುಂದೆ ಮಾತಾಡೋದು ತಪ್ಪು ಹೌದು.ಯಾರಿಗೋ ಅಪಮಾನ, ಅವಮಾನ ಮಾಡುವ ಅವಶ್ಯಕತೆ ನನಗಿಲ್ಲ.ಅಧಿಕಾರದಲ್ಲಿ ಇದ್ದಾಗ ಯಡಿಯೂರಪ್ಪ ಇಳಿಯುವ ವರೆಗೂ ಮಾತಾಡಿದ್ರಲ್ಲ.ಶಾಸಕರ ಅಭಿಪ್ರಾಯ ಯಾಕೆ ಸಂಗ್ರಹ ಮಾಡಬೇಕಿತ್ತು.ಯಡಿಯೂರಪ್ಪ ರನ್ನು ಇಳಿಸಲೇಬೇಕೆಂದು ಕೆಲವರನ್ನು ಮಾತಾಡಿಸೋಕೆ ಬಿಟ್ರು.ಯಡಿಯೂರಪ್ಪ ರನ್ನು ಯಾವ ಪುರುಷಾರ್ಥಕ್ಮಾಗಿ ಇಳಿಸಿದ್ರಿ..?ಮತ ಕೇಳೋಕೆ ಯಡಿಯೂರಪ್ಪರ ಮುಖ ಬೇಕು.ಅಧಿಕಾರದ ಎಂಜಾಯ್ ಮಾಡಲು ಯಡಿಯೂರಪ್ಪ ಬೇಕು.ಮೇ‌ ೬ರಂದು ಬಿಜೆಪಿ ಕಚೇರಿ ಯಿಂದ ಒಬ್ಬರು ಫೋನ್ ಮಾಡ್ತಾರೆ.ಆಯನೂರರಲ್ಲಿ 25 ಸಾವಿರ ಜನರನ್ನು ಸೇರಿಸಬೇಕು ಅಂತಾ.ಹೊನ್ಮಾಳಿಗೆ ಮೋದಿ ಬರಲಿ ನಾನು ಬೇಕಿದ್ರೆ ಲಕ್ಷ ಜನರನ್ನು ಸೇರಿಸ್ರೀನಿ.ಆದರೆ ಅಲ್ಲಿಗೆ ನಾನು ಯಾಕೆ ಕರೆದುಕೊಂಡು ಬರಲಿ.ನಾನು ಹೇಳಿದ್ದೆ ಬರಲ್ಲ ಅಂತಾ, ಅಮೇಲೆ ಅವ್ರು ಮೋದಿ ಪಕ್ಕದಲ್ಲಿ ಸೀಟು ಇದೆ ಬನ್ನಿ ಅಂದ್ರು ಎಂದು ಬೆಂಗಳೂರಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಸ್ವಪಕ್ಷದ ಪರ ವಾಗ್ದಾಳಿ ನಡೆಸಿದ್ದಾರೆ.
 
ಆದರೆ ನಾನು ಬರಲ್ಲ ಅಂದೆ, ಮೋದಿ ಯಡಿಯೂರಪ್ಪ ಮುಖ ತೋರಿಸಿ ಮತ ಕೇಳಬೇಕು ಇವರಿಗೆ ಅಷ್ಟೇ,ಯಡಿಯೂರಪ್ಪ ಸೈಕಲ್ ಓಡಿಸಿ, ಸ್ಕೂಟರ್ ಓಡಿಸಿ ಪಕ್ಷವನ್ನು ಅಧಿಕಾರಕ್ಕೆ ತಂದ್ರು.ನಾನು ಎತ್ತ ತಾಯಿ ಆಣೆಗೂ ಯಡಿಯೂರಪ್ಪ ನನಗೇನೂ ಹೇಳಿಕೊಟ್ಟಿಲ್ಲ.ಹಿಂದೆ ನನಗೂ ಅವರ ನಡುವೆ ತುಂಬಾ ಘರ್ಷಣೆಗಳು ಆಗಿವೆ.ಯಡಿಯೂರಪ್ಪ ಅಧಿಕಾರದಿಂದ ಇಳಿದೆ ಇದ್ದಿದ್ದೆ ನಾವು ನಮ್ಮಪ್ಪಾರಣೆಗೂ ಅಧಿಕಾರದಿಂದ ಇಳಿಯೋಕೆ ಆಗ್ತಿರಲಿಲ್ಲ.ಅಣ್ಣ ಮಲೈ ರನ್ನು ಕರೆದುಕೊಂಡು ರಾಜ್ಯದ ಉಸ್ತುವಾರಿ ಮಾಡ್ತೀರಲ್ಲ.ಈಶ್ವರಪ್ಪ, ಜಗದೀಶ್ ಶೆಟ್ಟರ್ ರನ್ನು ಎಲ್ಲರನ್ನು ಮುಗಿಸಿಬಿಟ್ರಲ್ಲ.ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ರು.ಆದರೆ ಅವರ ಕೈಗಳ ಎರಡನ್ನು ಕಟ್ಟಿ ಹಾಕಿದ್ರು.ಸ್ವಪಕ್ಷದವರ ವಿರುದ್ಧವೇ ರೇಣುಕಾಚಾರ್ಯ ಗುಟಿರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments