Select Your Language

Notifications

webdunia
webdunia
webdunia
webdunia

ಖ್ಯಾತ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಅನಂತಮೂರ್ತಿ ಇನ್ನಿಲ್ಲ

ಖ್ಯಾತ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಅನಂತಮೂರ್ತಿ ಇನ್ನಿಲ್ಲ
ಬೆಂಗಳೂರು , ಶುಕ್ರವಾರ, 22 ಆಗಸ್ಟ್ 2014 (19:26 IST)
ಖ್ಯಾತ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್. ಅನಂತಮೂರ್ತಿ ಅವರು ಬೆಂಗಳೂರಿನ ಮಣಿಪಾಲದಲ್ಲಿ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.  ಕಿಡ್ನಿ ವೈಫಲ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೇರಿದ್ದ ಅನಂತಮೂರ್ತಿ ಅವರನ್ನು ಮಣಿಪಾಲದ ಐಸಿಯುನಲ್ಲಿ ವೆಂಟಿಲೇಟರ್ ಚಿಕಿತ್ಸೆ ನೀಡಲಾಗುತ್ತಿತ್ತು.

 "ಅನಂತಮೂರ್ತಿ ಅವರನ್ನು ಉಳಿಸಿಕೊಳ್ಳಲು ನಾವು ಕೊನೆಗಳಿಗೆವರೆಗೆ ಪ್ರಯತ್ನ ನಡೆಸಿದೆವು. ಇಂದು ಲಘು ಹೃದಯಾಘಾತವಾದ ಬಳಿಕ ಅವರ ಸ್ಥಿತಿ ವಿಷಮಿಸಿ ಕೊನೆಯುಸಿರು ಎಳೆದಿದ್ದಾರೆ" ಎಂದು  ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸುದರ್ಶನ್ ಬಲ್ಲಾಳ್ ತಿಳಿಸಿದ್ದಾರೆ. ಅನಂತಮೂರ್ತಿ ಅವರ ಹೃದಯ ಬಡಿತವನ್ನು ಸುಸ್ಥಿತಿಯಲ್ಲಿಡಲು ತೀವ್ರ ಪ್ರಯತ್ನವನ್ನು ವೈದ್ಯರು ನಡೆಸಿದ್ದರು. ಆದರೆ ವೈದ್ಯರ ಪ್ರಯತ್ನ ಫಲ ನೀಡದೇ ವಿಧಿವಶರಾಗಿದ್ದಾರೆ.

ಅನಂತಮೂರ್ತಿ ಅವರು ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಕಿಡ್ನಿ ವೈಫಲ್ಯವೂ ಅವರನ್ನು ಕಾಡಿದ್ದು, ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು. ಅನಂತಮೂರ್ತಿ ನಿಧನಕ್ಕೆ ನಾಳೆ ಶಾಲಾ, ಕಾಲೇಜುಗಳಿಗೆ ಮತ್ತು ಸರ್ಕಾರಿ ಇಲಾಖೆಗಳಿಗೆ ರಜೆ ಘೋಷಿಸಲಾಗಿದೆ.  (ಮುಂದಿನ ಪುಟ ನೋಡಿ) 

ಅನಂತಮೂರ್ತಿ ಕಥಾಸಾಹಿತ್ಯಕ್ಕೆ ಹೊಸ ತಿರುವು ನೀಡಿದ ಶ್ರೇಷ್ಠ ಕತೆಗಾರರಾಗಿದ್ದರು. ವಿಶಿಷ್ಟ ಬಗೆಯ ಕಥಾ ಶೈಲಿಯನ್ನು ಅವರ ಕತೆಗಳಲ್ಲಿ ಮತ್ತು ಕಾದಂಬರಿಗಳಲ್ಲಿ ನಾವು ಕಾಣಬಹುದು. 1932ರ ಡಿಸೆಂಬರ್ 22ರಂದು ಅನಂತಮೂರ್ತಿ ಜನನ. ಮೈಸೂರು ವಿವಿಯಲ್ಲಿ ಇಂಗ್ಲೀಷ್ ಸ್ನಾತಕೋತ್ತರ ಪದವಿ ಪಡೆದು ಬರ್ಮಿಂಗ್‌ಹ್ಯಾಮ್ ವಿವಿಯಲ್ಲಿ ಪಿಎಚ್‌ಡಿ ಗಳಿಸಿದ್ದರು. ನಂತರ ಮೈಸೂರು ವಿವಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.

ಕೊಟ್ಟಾಯಂ  ಗಾಂಧಿ ವಿವಿಯಲ್ಲಿ ಉಪಕುಲಪತಿಯಾಗಿ ಅವರು ಸೇವೆ ಸಲ್ಲಿಸಿದ್ದರು.  ಅನಂತಮೂರ್ತಿ ಅವರು 1956ರಲ್ಲಿ ಯೆಸ್ತರ್ ಜೊತೆ ವಿವಾಹವಾಗಿದ್ದರು.  1984 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅವರು ಪಾತ್ರರಾಗಿದ್ದರು.  ಸಂಸ್ಕಾರ, ಘಟಶ್ರಾದ್ಧ, ಮುಂತಾದ ಕಾದಂಬರಿಗಳನ್ನು ಮತ್ತು ಎಂದೆಂದೂ ಮುಗಿಯದ ಕಥೆ,  ಮೌನಿ ಮುಂತಾದ ಕಥಾಸಂಕಲನವನ್ನು ಬರೆದರು. ಆವಾಹನೆ ಎಂಬ ನಾಟಕವನ್ನು ಅನಂತಮೂರ್ತಿ ಬರೆದಿದ್ದರು.

ಸಾಹಿತ್ಯದಲ್ಲಿ ಪ್ರಾಪಂಚಿಕ ಅರಿವನ್ನು ಮೂಡಿಸಿದವರಾಗಿದ್ದರು. ಅನಂತಮೂರ್ತಿ ತೆರೆದ ಮನಸ್ಸಿನ ವ್ಯಕ್ತಿಯಾಗಿದ್ದರು. ನಂಬಿದ ವಿಷಯವನ್ನು ಯಾವುದೇ ಭಯವಿಲ್ಲದೇ ಹೇಳುತ್ತಿದ್ದರು.  ಅನಂತಮೂರ್ತಿ ಸಮಾಜವಾದಿ ಚಿಂತನೆಯಿಂದ ಬೆಳೆದುಬಂದವರು. ಅವರು ಜಾತ್ಯತೀತ ನಿಲುವು ಹೊಂದಿದ್ದು, ಕೋಮುವಾದಿ ನಿಲುವನ್ನು ಉಗ್ರವಾಗಿ ಖಂಡಿಸುತ್ತಿದ್ದರು. ನರೇಂದ್ರಮೋದಿ ಪ್ರದಾನಿಯಾದರೆ ತಾವು ಈ ದೇಶದಲ್ಲೇ ಇರುವುದಿಲ್ಲ ಎಂದು ಹೇಳುವ ಮೂಲಕ ಅನಂತಮೂರ್ತಿ ವಿವಾದಕ್ಕೆ ಗುರಿಯಾಗಿದ್ದರು. ಅನಂತಮೂರ್ತಿ ಈಗ ಜಗತ್ತನ್ನೇ ಬಿಟ್ಟು ಹೋಗಿದ್ದಾರೆ.   ದಿಗ್ಗಜ ಅನಂತಮೂರ್ತಿ ಅವರ ನಿಧನಕ್ಕೆ ಇಡೀ ಸಾಹಿತ್ಯ ಲೋಕ ದುಃಖತಪ್ತವಾಗಿದೆ. ನಾಡಿನ ಗಣ್ಯ ವ್ಯಕ್ತಿಗಳು ಅನಂತಮೂರ್ತಿ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. 

Share this Story:

Follow Webdunia kannada