ವಿಜಾಯಪುರ: ಕೊಳವೆ ಬಾವಿಗೆ ಬಿದ್ದು ಸತತ 21ಗಂಟೆಗಳ ಕಾಲ ಕಾರ್ಯಚರಣೆ ಬಳಿಕ ಸುರಕ್ಷಿತವಾಗಿ ಬಂದಿರುವ ಮಗು ಸಾತ್ವಿಕಗೆ ಸಿದ್ಧಲಿಂಗ ಮಹಾರಾಜ ಎಂದು ತೊಟ್ಟಿಲುಶಾಸ್ತ್ರ ನೆರವೇರಿಸಲಾಯಿತು.
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಮುಜಗೊಂಡ ಕುಟುಂಬದ ಪೂಜ ಹಾಗೂ ಸತೀಶ ದಂಪತಿಯ ಸಾತ್ವಿಕ ಮಗು ಆಟವಾಡುತ್ತಿದ್ದ ವೇಳೆ ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಸತತ 21 ಗಂಟೆಗಳ ಕಾರ್ಯಚರಣೆ , ಕೋಟ್ಯಾಂತರ ಕನ್ನಡಿಗರ ಪ್ರಾರ್ಥನೆಯಿಂದ ಸಾತ್ವಿಕ್‌ನನ್ನು ಸುರಕ್ಷಿತವಾಗಿ ಹೊರತೆಗೆದರು.
ಇನ್ನೂ ಹೆತ್ತವರ ಹಾರೈಕೆಯಂತೆ ಮಗು ಸಾತ್ವಿಕ್ ಸುರಕ್ಷಿತವಾಗು ಬದುಕಿದ್ದು ಸ್ಥಳೀಯ ದೈವೀಶಕ್ತಿಯಾದ ಸಿದ್ದಲಿಂಗ ಮಹಾರಾಜರ ಪವಾಡ ಹಾಗೂ ಕೃಪೆ ಎಂದು ಮಗುವಿನ ಕುಟುಂಬದವರು ಹೇಳಿಕೊಂಡಿದ್ದರು.
ಅಂತೆಯೇ ಆತನ ಹೆಸರನ್ನು ಸಾತ್ವಿಕ ಬದಲಾಗಿ ಸಿದ್ದಲಿಂಗ ಎಂದು ಮರುನಾಮಕರಣ ಮಾಡುವುದಾಗಿ ಸಾತ್ವಿಕ ತಂದೆ ಸತೀಶ ಹಾಗೂ ಕುಟುಮಬದವರು ಹೇಳಿದ್ದರು. ಇದೀಗ ಮದುವಿಗೆ ಮರುನಾಮಕರಣ ಮಾಡಿ ಸಿದ್ಧಲಿಂಗ ಮಹಾರಾಜ ಎಂದು ತೊಟ್ಟಿಲು ಶಾಸ್ತ್ರ ನೆರವೇರಿಸಲಾಗಿದೆ.