Webdunia - Bharat's app for daily news and videos

Install App

ಭಗವಾನ್ ವಿರುದ್ಧ ಸರಣಿ ದೂರುಗಳು ದಾಖಲು!

Webdunia
ಶುಕ್ರವಾರ, 28 ಡಿಸೆಂಬರ್ 2018 (16:07 IST)
ಶ್ರೀರಾಮನ ಬಗ್ಗೆ ವಿವಾದಾತ್ಮಕವಾಗಿ ಹೇಳಿಕೆ ನೀಡಿರುವ ಸಾಹಿತಿ ವಿರುದ್ಧ ರಾಜ್ಯದೆಲ್ಲೆಡೆ ಸರಣಿ ದೂರುಗಳು ದಾಖಲು ಆಗುತ್ತಿವೆ.

ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರು, ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ‌ವಿಚಾರಕ್ಕೆ ಸಂಬಂಧಿಸಿದಂತೆ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಸರಣಿ ದೂರುಗಳು ದಾಖಲಾಗುತ್ತಿವೆ. ಮೈಸೂರಿನಲ್ಲಿ ಮತ್ತೊಂದು ಕೇಸ್ ದಾಖಲಾಗಿದೆ.

ಸಂಜಯ್ ಎಂಬುವರಿಂದ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ. ದೂರುದಾರ ಸಂಜಯ್ ವಿದ್ಯಾರಣ್ಯಪುರಂ‌ ನಿವಾಸಿ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಕಲಂ ಅಡಿ ದೂರು ದಾಖಲು ಮಾಡಿದ್ದಾರೆ. ಪ್ರೊ.ಭಗವಾನ್ ರನ್ನು ಬಂಧಿಸಿ ಗುಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ‌ ದೂರಿನಲ್ಲಿ ಆಗ್ರಹ ಮಾಡಲಾಗಿದೆ.

2015 ರಲ್ಲಿ ಭಗವಾನ್ ವಿರುದ್ಧ ಇದೇ ರೀತಿ ದೂರು ದಾಖಲಾಗಿತ್ತು. ಆ ಪ್ರಕರಣದಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಜಾಮೀನು ರದ್ದು ಪಡಿಸಬೇಕು ಎಂದು ದೂರುದಾರ‌ ಸಂಜಯ್ ಆಗ್ರಹ ಮಾಡಿದ್ದಾರೆ.

ಈಗಾಗಲೇ ಮಂಡ್ಯ, ಕೊಡಗು, ಬೆಳಗಾವಿ ಜಿಲ್ಲೆಗಳಲ್ಲಿ ಇದೇ ವಿಚಾರವಾಗಿ ದೂರುಗಳು ದಾಖಲಾಗಿವೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಿವಿಕೆ ನೇತೃತ್ವದ ಮೈತ್ರಿಗೆ 'ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಮೈತ್ರಿಕೂಟ' ಹೆಸರು

ಮಳೆಯ ಕೊರತೆ: ರಾಜ್ಯದಲ್ಲಿ ಬರಗಾಲದ ಸ್ಥಿತಿ ನಿರ್ಮಾಣ

SIR, ರಾಜ್ಯದಲ್ಲಿ 43.81ಲಕ್ಷ ಮತದಾರರಿಗೆ ಚುನಾವಣಾ ನೋಟಿಸ್‌

BRICSನ ಕಳೆದ ಮೂರು ಸಭೆಗಳಿಂದ ಫಲಿತಾಂಶ ಕಂಡಿಲ್ಲ: ಚಿದಂಬರಂ ಅಸಮಾಧಾನ

ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ಕಾಲ್ನಡಿಗೆ ಯಶಸ್ವಿ: ವಿಜಯೇಂದ್ರ

ಮುಂದಿನ ಸುದ್ದಿ
Show comments