Select Your Language

Notifications

webdunia
webdunia
webdunia
webdunia

ಡಿ.ಕೆ ರವಿಯವರದು ಆತ್ಮಹತ್ಯೆ: ಸಿಬಿಐ ಪ್ರಾಥಮಿಕ ವರದಿ

ಡಿ.ಕೆ ರವಿಯವರದು ಆತ್ಮಹತ್ಯೆ: ಸಿಬಿಐ ಪ್ರಾಥಮಿಕ ವರದಿ
ಬೆಂಗಳೂರು , ಗುರುವಾರ, 21 ಮೇ 2015 (15:25 IST)
ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ ರವಿ ಸಾವು ಕೊಲೆಯಲ್ಲ ಅದೊಂದು ಆತ್ಮಹತ್ಯೆ ಎಂದು ಸಿಬಿಐ ತನ್ನ ಪ್ರಾಥಮಿಕ ವರದಿಯಲ್ಲಿ ತಿಳಿಸಿದೆ.

ಹಲವು ಅನುಮಾನಗಳನ್ನು ಹುಟ್ಟಿಹಾಕಿದ್ದ ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವು ಆತ್ಮಹತ್ಯೆ ಎಂಬುದನ್ನು ಸಿಬಿಐನ ಪ್ರಾಥಮಿಕ ವಿಚಾರಣೆ ದೃಢಪಡಿಸಿದೆ. ಆದರೆ ಸಾಯುವ ಮುನ್ನ ಸ್ನೇಹಿತೆಗೆ ಅವರು ಅನೇಕ ಬಾರಿ ಕರೆ ಮಾಡಿದ್ದರು ಎಂಬುದು ಸುಳ್ಳು. ಅವರು ಕರೆ ಮಾಡಿದ್ದು ಒಂದೇ ಬಾರಿ. ರವಿಯವರನ್ನು ಅಪನಿಂದನೆಗೆ ಒಳಪಡಿಸಲು ಈ ರೀತಿಯಲ್ಲಿ ಮಾಧ್ಯಮಗಳಲ್ಲಿ ಸುದ್ದಿ ಹರಡುವಂತೆ ರಾಜ್ಯದ ಕೆಲ ಪ್ರಮುಖ ವ್ಯಕ್ತಿಗಳೇ ವ್ಯವಸ್ಥಿತ ಯೋಜನೆ ರೂಪಿಸಿದರು ಎಂದು ವರದಿಯಲ್ಲಿ ಬಹಿರಂಗ ಪಡಿಸಲಾಗಿದೆ.
 
ನಿಷ್ಠ ಐಎಎಸ್ ಅಧಿಕಾರಿ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದ ನಂತರ ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಎದ್ದಿದ್ದವು. ಘಟನೆ ನಡೆದ ಸ್ಥಳದಲ್ಲಿ  ಡೆತ್ ನೋಟ್ ಸಹ ಸಿಕ್ಕಿರಲಿಲ್ಲ. 
 
ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದರಲ್ಲಿ ಬಂದಿರುವ ವರದಿಯ ಪ್ರಕಾರ ಸಿಬಿಐ ರವಿಯವರದು ಕೊಲೆ ಅಥವಾ ಆತ್ಮಹತ್ಯೆಗೆ ಕುಮ್ಮಕ್ಕು ಎಂಬುದನ್ನು ತಳ್ಳಿಹಾಕಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿನ ವಿಫಲತೆಯೇ ಆತ್ಮಹತ್ಯೆಗೆ ಕಾರಣವಾಗಿರಬಹುದೆಂದು ಸಿಬಿಐ ಶಂಕೆ ವ್ಯಕ್ತಪಡಿಸಿದೆ.
 
ಆರ್ ಅಂಡ್ ಎಚ್ ಪ್ರಾಪರ್ಟೀಸ್ ಹೆಸರಿನಲ್ಲಿ ರವಿ ಮತ್ತು ಅವರ ಸ್ನೇಹಿತ ಹರಿ ಸೇರಿಕೊಂಡು ಚಿಕ್ಕಬಳ್ಳಾಪುರದಲ್ಲಿ ಜಮೀನು ಖರೀದಿ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಹಲವರ ಬಳಿ ಆರ್ಥಿಕ ಸಹಾಯ ಪಡೆದು 5.5 ಕೋಟಿ ಹಣವನ್ನು ಸಂಗ್ರಹಿಸಿದ್ದರು. ಈ ಭೂಮಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸೇರಿದ್ದೆಂದು ತಿಳಿದ ಮೇಲೆ ಹೂಡಿಕೆದಾರರು ಹಣವನ್ನು ಹಿಂತಿರುಗಿಸುವಂತೆ ರವಿಯವರಿಗೆ ಒತ್ತಡ ಹೇರಿದ್ದರು ಎಂದು ತನಿಖಾಧಿಕಾರಿಗಳಿಗೆ ಮಾಹಿತಿ ಲಭಿಸಿದೆ. 
 
ಸಾವಿಗೆ ಎರಡು ದಿನ ಮೊದಲು ರವಿಯವರು ತಮ್ಮ ಸ್ನೇಹಿತನಿಗೆ ಕರೆ ಮಾಡಿ ಕಂಪನಿಯ ಬ್ಯಾಂಕ್ ಖಾತೆಯಿಂದ 2 ಕೋಟಿ ಹಣವನ್ನು ಡ್ರಾ ಮಾಡಿ ಪತ್ನಿಗೆ ನೀಡುವಂತೆ ಹೇಳಿದ್ದರು. ಅಲ್ಲದೇ ಅವರ ಸ್ನೇಹಿತೆ, ಮಹಿಳಾ ಐಎಸ್ ಅಧಿಕಾರಿಯವರಿಂದ 10 ಕೋಟಿ ರೂಪಾಯಿಯನ್ನು ತಮ್ಮ ಖಾತೆಗೆ ಡಿಪಾಸಿಟ್ ಮಾಡಿಸಿಕೊಂಡಿದ್ದರು ಎಂದು ತನಿಖೆಯಿಂದ ಬಯಲಾಗಿದೆ. 

Share this Story:

Follow Webdunia kannada