Select Your Language

Notifications

webdunia
webdunia
webdunia
webdunia

ಹೊಸ ತಿರುವು ಪಡೆದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ

ಹೊಸ ತಿರುವು ಪಡೆದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ
ಹಾವೇರಿ , ಸೋಮವಾರ, 28 ಜುಲೈ 2014 (18:15 IST)
ಹಾವೇರಿಯ ಬಸವೇಶ್ವರನಗರದಲ್ಲಿ 12 ವರ್ಷದ ಬಾಲಕಿಯ ಮೇಲೆ ತಂದೆ  ಇಮಾಂ ಹುಸೇನ್ ನಿರಂತರ ಒಂದು ವರ್ಷಕಾಲ ಅತ್ಯಾಚಾರ ನಡೆಸಿದ ಘಟನೆ ಹೊಸ ತಿರುವು ಪಡೆದಿದೆ. ಪೊಲೀಸರಿಗೆ ಬಾಲಕಿಯ ತಾಯಿ ನೀಡಿದ ಹೇಳಿಕೆಯಲ್ಲಿ ಆರೋಪಿಯ ಹೆಸರನ್ನು ಬಸಯ್ಯ ಚಿಕ್ಮಠ ಎಂದು ಹೇಳಿದ್ದರು.

ಆದರೆ ಬಸಯ್ಯ ಚಿಕ್ಮಠ ಮೊದಲ ಪತಿಯಾಗಿದ್ದು, ಅವನು 12 ವರ್ಷಗಳ ಹಿಂದೆಯ ಬಾಲಕಿಯ ತಾಯಿಯನ್ನು ಬಿಟ್ಟುಹೋಗಿದ್ದ. ಆದರೆ ಬಸಯ್ಯ ಚಿಕ್ಮಠನ ಹೆಸರನ್ನು ಬಾಲಕಿಯ ತಾಯಿ ಉಲ್ಲೇಖಿಸುವ ಮೂಲಕ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದರು.

ಆದರೆ ಪೊಲೀಸರ ತನಿಖೆಯಿಂದ ಆರೋಪಿಯ ಹೆಸರು ಇಮಾಂ ಹುಸೇನ್ ಎಂದು ಗುರುತಿಸಲಾಗಿದೆ. ಮೊದಲ ಪತಿ ಬಿಟ್ಟುಹೋದ ಬಳಿಕ ಬಾಲಕಿಯ ತಾಯಿ ಇಮಾಂ ಹುಸೇನ್‌ನನ್ನು ವರಿಸಿದ್ದಳು. ಆದರೆ ಇಮಾಂ ಹುಸೇನ್ ತನ್ನ ಪುತ್ರಿಯ ಮೇಲೆ ನಿರಂತರ ಅತ್ಯಾಚಾರವೆಸಗುವ ಮೂಲಕ ಕಾಮುಕತನ ಪ್ರದರ್ಶಿಸಿದ್ದ. ಪೊಲೀಸರು ಇಮಾಂ ಸಾಬ್‌ನನ್ನು ಬಂಧಿಸಿದ್ದು, ಕೇಸು ದಾಖಲಿಸಿದ್ದಾರೆ. 

Share this Story:

Follow Webdunia kannada