Select Your Language

Notifications

webdunia
webdunia
webdunia
webdunia

ಶಾಲಾಬಾಲಕಿ ಮೇಲೆ ಅತ್ಯಾಚಾರ: ಪೋಷಕರ ಆಕ್ರೋಶ

ಶಾಲಾಬಾಲಕಿ ಮೇಲೆ  ಅತ್ಯಾಚಾರ: ಪೋಷಕರ ಆಕ್ರೋಶ
ಬೆಂಗಳೂರು , ಬುಧವಾರ, 22 ಅಕ್ಟೋಬರ್ 2014 (11:53 IST)
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಆರ್ಕಿಡ್ಸ್ ಶಾಲೆಯಲ್ಲಿ ಶಾಲಾ ಬಾಲಕಿಯೊಬ್ಬಳ ಅತ್ಯಾಚಾರ ಪ್ರಕರಣದಿಂದ ಪೋಷಕರು ತೀವ್ರ ಆಕ್ರೋಶಗೊಂಡಿದ್ದು, ಶಾಲೆಯ ಮುಂದೆ ನೆರೆದು ಸಿಸಿಟಿವಿ ಫೂಟೇಜ್ ನೀಡುವಂತೆ ಒತ್ತಾಯಿಸಿದ್ದಾರೆ. ಪೊಲೀಸ್ ಆಯುಕ್ತರು ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹಸಚಿವ ಜಾರ್ಜ್ ಭರವಸೆ ನೀಡಿದ್ದಾರೆ.

ಕಾನೂನು ವ್ಯಾಪ್ತಿಯಲ್ಲಿ ಎಲ್ಲಾ ಕ್ರಮ ಕೈಗೊಳ್ಳಲು ಆದೇಶಿಸಿರುವುದಾಗಿ ಅವರು ಹೇಳಿದರು. ಎಲ್‌ಕೆಜಿ ಓದುತ್ತಿರುವ ಮಗಳನ್ನು ಮನೆಗೆ ಕರೆದು ತರಲು ತಾಯಿ ಶಾಲೆಗೆ ಹೋದ ಸಂದರ್ಭದಲ್ಲಿ ಮಗು ಹೊಟ್ಟೆ ನೋವೆಂದು ಅಳುತ್ತಿರುವುದು ಗಮನಕ್ಕೆ ಬಂದಿದೆ. ಮನೆಗೆ ಹೋದ ನಂತರ ಆಕೆಗೆ ಜ್ವರ ಕೂಡ ಬಂದಿದೆ. ಅಲ್ಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗುವಿನ ಗುಪ್ತಾಂಗದ ಮೇಲೆ ಗಾಯವಿರುವ ಗುರುತು ಪತ್ತೆಯಾಗಿದ್ದು ವೈದ್ಯರು ಲೈಂಗಿಕ ದೌರ್ಜನ್ಯವಾಗಿರುವ ಬಗ್ಗೆ ಶಂಕಿಸಿದ್ದಾರೆ.
 
ಬೆದರಿದ ತಾಯಿ ಮಗುವಿನ ತಾಯಿ ಆಕೆಯನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕೊಂಡೊಯ್ದಿದ್ದಾಳೆ. ಅಲ್ಲಿ ಆಕೆಯ ಮೇಲೆ ಲೈಂಗಿಕ ಶೋಷಣೆ ನಡೆದಿರುವುದು ಖಚಿತವಾಗಿದೆ. ಆಘಾತಕ್ಕೀಡಾದ ಪೋಷಕರು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 
 

Share this Story:

Follow Webdunia kannada