Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಬೆಂಗಳೂರಿನಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಬೆಂಗಳೂರು , ಶುಕ್ರವಾರ, 31 ಅಕ್ಟೋಬರ್ 2014 (20:16 IST)
ಬೆಂಗಳೂರಿನಲ್ಲಿ 16 ವರ್ಷ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಮತ್ತೊಂದು ಘಟನೆ ವರದಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿ ಅತ್ಯಾಚಾರ ಮಾಡಲಾಗಿದೆಯೆಂದು ಪುಲಿಕೇಶಿ ನಗರ ಠಾಣೆಗೆ ಬಾಲಕಿಯ ಕುಟುಂಬ ದೂರು ನೀಡಿದೆ. ಪಿಎಸ್‌ಕೆ ನಾಯ್ಡು ಕಾಲೋನಿಯಲ್ಲಿ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ 21 ವರ್ಷ ವಯಸ್ಸಿನ ಗಿರೀಶ್ ಎಂಬವ ಅತ್ಯಾಚಾರ ಮಾಡಿದ್ದಾನೆಂದು ಬಾಲಕಿಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶಾಲಾ ಬಾಲಕಿಯರ ಮೇಲೆ ಅತ್ಯಾಚಾರದ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದು,  ನಾಲ್ವರು ಶಾಲಾ ಬಾಲಕಿಯರ ಮೇಲೆ ರೇಪ್ ಪ್ರಕರಣಗಳ ವಿರುದ್ಧ ಬಾಲಕಿಯರ ಪೋಷಕರು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದರು.

ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ನಡೆದ ಬೆನ್ನ ಹಿಂದೆಯೇ ಮತ್ತೊಂದು ಅತ್ಯಾಚಾರ ನಡೆದಿರುವುದು ಬೆಂಗಳೂರಿಗರು ತತ್ತರಿಸುವಂತೆ ಮಾಡಿದೆ.

Share this Story:

Follow Webdunia kannada