Select Your Language

Notifications

webdunia
webdunia
webdunia
webdunia

ಅತ್ಯಾಚಾರದ ಕಮೆಂಟ್ : ವಿ. ಆರ್. ಭಟ್ ವಿರುದ್ಧ ಕೇಸ್ ದಾಖಲು

ಅತ್ಯಾಚಾರದ ಕಮೆಂಟ್ : ವಿ. ಆರ್. ಭಟ್ ವಿರುದ್ಧ ಕೇಸ್ ದಾಖಲು
ಬೆಂಗಳೂರು , ಸೋಮವಾರ, 28 ಜುಲೈ 2014 (16:16 IST)
ಆರ್‌ಎಸ್‌ಎಸ್ ಮುಖಂಡ ವಿ.ಆರ್.ಭಟ್ ವಿರುದ್ಧ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ  ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ.  ಹಿಂದು ಧರ್ಮ ಪಾಲಿಸದವರ ಮೇಲೆ ಅತ್ಯಾಚಾರ ಮಾಡಬೇಕು ಎಂದು ವಿ.ಆರ್. ಭಟ್ ಕಮೆಂಟ್ ಮಾಡಿದ್ದರು. ಈ ಕುರಿತು ಯುವತಿಯೊಬ್ಬಳು ನನ್ನ ಮಾನಕ್ಕೆ ಹಾನಿಯಾಗುವ ರೀತಿಯಲ್ಲಿ ವಿ.ಆರ್. ಭಟ್ ಕಮೆಂಟ್ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಹಿಂದು ಧರ್ಮದಲ್ಲಿರುವ ಮೂಢನಂಬಿಕೆಗಳ ಬಗ್ಗೆ ಮತ್ತು ಹಿಂದು ಧರ್ಮದ ಲೋಪದೋಷಗಳು, ಹೋಮ, ಹವನಗಳ ಬಗ್ಗೆ ಯುವತಿ ಸ್ಟೇಟಸ್ ಬರೆದಿದ್ದರು. ಆದರೆ ವಿ.ಆರ್. ಭಟ್  ಫೇಸ್‌ಬುಕ್‌ನಲ್ಲಿ ಕಾಮೆಂಟ್ ಮಾಡುತ್ತಾ,  "ನಿಮ್ಮ ಮಾನವೀಯತೆ ಮುಖಕಿಷ್ಟು ಬೆಂಕಿಹಾಕ.  

ನಿಮ್ಮಂತ ಮಹಿಳೆಯರ ಜುಟ್ಟು ಹಿಡಿದು ಅತ್ಯಾಚಾರಿಗಳಿಂದ ಅತ್ಯಾಚಾರ ಮಾಡಿಸಬೇಕು, ಹಿಂದು ಧರ್ಮ ಪಾಲಿಸದ ಮಹಿಳೆಯರ ಮೇಲೆ ಅತ್ಯಾಚಾರ ಮಾಡಬೇಕು" ಎಂದು ಕಮೆಂಟ್ ಮಾಡಿದ್ದರು.  ಯುವತಿ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
 

Share this Story:

Follow Webdunia kannada