Select Your Language

Notifications

webdunia
webdunia
webdunia
webdunia

ರಾಮಾಯಣ, ಮಹಾಭಾರತ ಅತ್ಯಾಚಾರದ ಕೂಪಗಳು: ಮಲ್ಲಿಕಾ ಘಂಟೆ

ರಾಮಾಯಣ, ಮಹಾಭಾರತ ಅತ್ಯಾಚಾರದ ಕೂಪಗಳು: ಮಲ್ಲಿಕಾ ಘಂಟೆ
ಬೆಂಗಳೂರು , ಮಂಗಳವಾರ, 29 ಜುಲೈ 2014 (15:21 IST)
ರಾಮಾಯಣ, ಮಹಾಭಾರತ ಅತ್ಯಾಚಾರದ ಕೂಪಗಳು ಎಂದು ಹಿಂದೂ ಧಾರ್ಮಿಕ ಗ್ರಂಥಗಳ ಬಗ್ಗೆ ಅವಹೇಳನಕಾರಿಯಾಗಿ ಕುವೆಂಪು ವಿವಿ ಕುಲಸಚಿವೆ ಮಲ್ಲಿಕಾ ಘಂಟಿ ಹೇಳಿದ್ದಾರೆ.  ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ ಅವರು ಹೇಳಿಕೆ ನೀಡಿದ್ದಾರೆ.  ಲೈಂಗಿಕ ದೌರ್ಜನ್ಯ ಹೆಚ್ಚಾಗಲು ಈ ಗ್ರಂಥಗಳೇ ಕಾರಣವಾಗಿದೆ ಎಂದು ಕುಲಸಚಿವೆ ಮಲ್ಲಿಕಾ ಘಂಟಿ ಹೇಳಿದ್ದಾರೆ.

ರಾಮಾಯಣದಲ್ಲಿ ಪುರುಷಪ್ರಧಾನ ಸಮಾಜವನ್ನು ಬಿಂಬಿಸುವ ಮೂಲಕ ಹೆಣ್ಣಿನ ಮೇಲೆ ದೌರ್ಜನ್ಯವಾಗಿದೆ. ಈ ಗ್ರಂಥಗಳನ್ನು ಓದುವುದರಿಂದ ಅತ್ಯಾಚಾರ ಹೆಚ್ಚುತ್ತದೆ ಎಂದು ಅವರು ಹೇಳಿದ್ದಾರೆ. ರಾಮಾಯಣದಲ್ಲಿ ರಾಮನ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳುವುದು ಮತ್ತು ಮಹಾಭಾರತದಲ್ಲಿ ದುಷ್ಟರಿಗೆ ಶಿಕ್ಷೆ, ಶಿಷ್ಟರ ರಕ್ಷಣೆಯನ್ನು ಬಿಂಬಿಸಲಾಗಿದೆ.

ಆದರೆ ಮಹಾಕಾವ್ಯಗಳೇ ಇಂದಿನ ಅತ್ಯಾಚಾರ ಪ್ರಕರಣಗಳಿಗೆ ಪ್ರೇರಣೆ ಎಂಬ ಹೇಳಿಕೆಯನ್ನು ವಿವಿಧ ಸಾಹಿತಿಗಳು ಖಂಡಿಸಿದ್ದಾರೆ. 

Share this Story:

Follow Webdunia kannada