ಕಲಬುರಗಿಯಲ್ಲಿ ಮಳೆ ಹಾನಿ: ಸಭೆಯಲ್ಲಿ ಪ್ರಿಯಾಂಕ್ ಖರ್ಗೆ ಕೈಗೊಂಡ ಕ್ರಮಗಳು ಇಂತಿವೆ

Sampriya
ಮಂಗಳವಾರ, 23 ಸೆಪ್ಟಂಬರ್ 2025 (20:20 IST)
ಕಲಬುರಗಿ: ಜಿಲ್ಲೆಯಲ್ಲಿನ ಅತಿವೃಷ್ಟಿ ಹಾನಿಯ ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಳೆ ಹಾನಿಯ ಮಾಹಿತಿ ಪಡೆದು ಸಮರೋಪಾಧಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.  

ಜಿಲ್ಲೆಯ 7 ತಾಲ್ಲೂಕುಗಳ ಜಂಟಿ ಸಮೀಕ್ಷೆ ವರದಿ ಸಿದ್ದವಾಗಿದ್ದು ಇನ್ನೂ 4 ತಾಲ್ಲೂಕಿನ ವರದಿ ಸಿದ್ದಗೊಳ್ಳುತ್ತಿದೆ.

ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ 50% ಹೆಚ್ಚು ಮಳೆಯಾಗಿದೆ, ಅಲ್ಲದೆ ಕಳೆದ ನಾಲ್ಕೈದು ದಿನಗಳಲ್ಲಿ ಹೆಚ್ಚಿನ ಮಳೆ ಸುರಿದಿದೆ, ಈ ಅನಿರೀಕ್ಷಿತ ಅತಿವೃಷ್ಟಿಯನ್ನು ಎದುರಿಸುವ ಕುರಿತಾದ ಸಭೆಯಲ್ಲಿ ನೀಡಲಾದ ಮುಖ್ಯವಾದ ಸಲಹೆ ಸೂಚನೆಗಳು.

ಕಾಳಜಿ ಕೇಂದ್ರಗಳನ್ನು ತೆರೆದು, ಅಗತ್ಯ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಬೇಕು, ಮನೆಗಳು ಅಪಾಯದ ಸ್ಥಿತಿಯಲ್ಲಿರುವವರನ್ನೂ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಬೇಕು.

ಜಾನುವಾರುಗಳಲ್ಲಿ ಉಂಟಾಗುವ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.

ನದಿ ದಂಡೆಗಳಲ್ಲಿನ ಧಾರ್ಮಿಕ ಶ್ರದ್ದಾ ಕೇಂದ್ರಗಳಲ್ಲಿ ಎಚ್ಚರಿಕಾ ಕ್ರಮ ಮತ್ತು ಜಾಗೃತಿ ಕೈಗೊಳ್ಳಬೇಕು.

ಟಾರ್ಪಲ್, ಆಹಾರ ಪೊಟ್ಟಣ, ಇತ್ಯಾದಿ ಅಗತ್ಯ ವಸ್ತುಗಳ ಬಗ್ಗೆ ಮಾಹಿತಿ ನೀಡಬೇಕು, ಅವುಗಳನ್ನು ಪೂರೈಸಲು ಕ್ರಮ ವಹಿಸಲಾಗುವುದು.

ಬೆಳೆ ಹಾನಿಯ ಕುರಿತು ಪರಿಹಾರ ಪೋರ್ಟಲ್ ನಲ್ಲಿ ಕರಾರುವಾಕ್ ಆಗಿ ದಾಖಲಾಗುವಂತೆ ನೋಡಿಕೊಳ್ಳಬೇಕು.

ಅಧಿಕಾರಿಗಳು ನಿರಂತರವಾಗಿ ಜನರ ಸಂಪರ್ಕದಲ್ಲಿ ಇರಬೇಕು ಹಾಗೂ ಹಾನಿ ಪ್ರದೇಶಕ್ಕೆ ಸತತ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.

ಜನರ ಜೀವ ಹಾನಿಗೆ, ಮನೆಗಳ ಹಾನಿಗೆ ತಕ್ಷಣ ಪರಿಹಾರ ಒದಗಿಸಬೇಕು.

ಸಂಕಷ್ಟದಲ್ಲಿರುವ ಜನತೆಗೆ ಉದಾರ ಮನೋಭಾವದೊಂದಿಗೆ ಸ್ಪಂದಿಸಬೇಕು.

ಹಾನಿಗೋಳಗಾದ ರಸ್ತೆ, ಸೇತುವೆ ಮುಂತಾದ ಮೂಲಭೂತ ಸೌಕರ್ಯಗಳ ದುರಸ್ತಿ ಮತ್ತು ಮರುನಿರ್ಮಾಣಕ್ಕೆ NDRF, STRF ನಿಧಿಗಳನ್ನು ಹೊಂದಿಸಿ ಬಳಕೆ ಮಾಡಿಕೊಳ್ಳಬೇಕು.

ಶಿಥಿಲಗೊಂಡಿರುವ ಶಾಲೆ, ಅಂಗನವಾಡಿ ಕಟ್ಟಡಗಳ ಬಗ್ಗೆ ಗಮನಹರಿಸಿ ಅವುಗಳ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು.

ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು: ಇನ್ನೇನೂ ಮದುವೆಗೆ ಎರಡು ದಿನವಿರುವಾಗ ನಾಪತ್ತೆಯಾದ ಹುಡುಗು, ಕೊನೆಗೂ ಪತ್ತೆ

ಅಕ್ರಮವಾಗಿ ಭಾರತಕ್ಕೆ ಬಂದಿದ್ದ 10 ಬಾಂಗ್ಲಾದೇಶಿ ಪ್ರಜೆಗಳಿಗೆ 2 ವರ್ಷ ಜೈಲು

ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು, ನಿರ್ದೇಶಿಸುತ್ತಿದೆ: ರಾಹುಲ್ ಗಾಂಧಿ

ಆರ್ ಅಶೋಕ್ ಎದುರೇ ನಾನೇ ವಿರೋಧ ಪಕ್ಷದ ನಾಯಕನೆಂದ ಬಸನಗೌಡ ಪಾಟೀಲ್ ಯತ್ನಾಳ್

ತಮನ್ನಾ ಭಾಟಿಯಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments