Select Your Language

Notifications

webdunia
webdunia
webdunia
webdunia

ಸದಾನಂದಗೌಡ ಪುತ್ರ ಕಾರ್ತಿಕ್ ಈಗಾಗಲೇ ನನ್ನನ್ನು ವಿವಾಹವಾಗಿದ್ದಾನೆ: ಮೈತ್ರೇಯಿ ಗೌಡ

ಸದಾನಂದಗೌಡ ಪುತ್ರ ಕಾರ್ತಿಕ್ ಈಗಾಗಲೇ ನನ್ನನ್ನು ವಿವಾಹವಾಗಿದ್ದಾನೆ: ಮೈತ್ರೇಯಿ ಗೌಡ
ಮಡಿಕೇರಿ , ಬುಧವಾರ, 27 ಆಗಸ್ಟ್ 2014 (16:15 IST)
ಇಂದು ಮಡಿಕೇರಿಯ ಕುಶಾಲನಗರದಲ್ಲಿ ಕೇಂದ್ರ ರೈಲ್ವೆ ಸಚಿವ ಡಿ.ವಿ ಸದಾನಂದ ಗೌಡರ ಪುತ್ರ ಕಾರ್ತಿಕ್​ ಎಂಗೇಜ್​ಮೆಂಟ್​ ಸಂಭ್ರಮ. ಉದ್ಯಮಿಯ ಪುತ್ರಿ ಸ್ವಾತಿ ಜೊತೆ ಕಾರ್ತಿಕ್ ನಿಶ್ಚಿತಾರ್ಥ ನೆರವೇರಿಸಿಕೊಂಡರು. 
 
ಆದರೆ, ಇದೀಗ ನಿಶ್ಚಿತಾರ್ಥದ ಮನೆಯಲ್ಲಿ ಗಲಿಬಿಲಿ ಶುರುವಾಗಿದೆ. ಕಾರಣ ಕಾರ್ತಿಕ್​ಗೆ ಈ ಮೊದಲೇ ನನ್ನ ಜೊತೆ ಮದುವೆಯಾಗಿದೆ ಅಂತಾ ನಟಿ ಮೈತ್ರಿಯಾ ಗೌಡ ಹೇಳಿಕೆ ನೀಡಿದ್ದಾರೆ.
 
2014 ಜೂನ್​ 5 ರಂದು ಮಂಗಳೂರಿನಲ್ಲಿ ನಮ್ಮಿಬ್ಬರ ಮದುವೆಯಾಗಿತ್ತು. ಆದರೆ, ನನಗೆ ವಿಷಯ ತಿಳಿಸದೇ ಕಾರ್ತಿಕ್ ಇನ್ನೊಂದು ಮದುವೆಯಾಗಲು ಹೊರಟಿದ್ದಾರೆ ಅಂತಾ ಟೋಪಿವಾಲಾ ಚಿತ್ರದಲ್ಲಿ ನಟಿಸಿದ ನಟಿ ಮೈತ್ರಿಯಾ ಗೌಡ ಆರೋಪಿಸಿದ್ದಾರೆ. ಅಲ್ಲದೇ, ಪೊಲೀಸರಿಗೆ ಶೀಘ್ರದಲ್ಲೇ ದೂರು ನೀಡುವುದಾಗಿಯೂ ನಟಿ ಮೈತ್ರಿಯಾ ತಿಳಿಸಿದ್ದಾರೆ.
 
ನಮ್ಮ ಅಪ್ಪನಿಗೆ ಮಾನ ಮರ್ಯಾದೆ ಅಂತ ಇದೆ. ನಮ್ಮ ಅಪ್ಪನ ಮುಖಕ್ಕೆ ಮಸಿ ಬಳಿಯುವ ಷಡ್ಯಂತ್ಯ್ರವಾಗಿದೆ ಎಂದು ಡಿವಿಎಸ್ ಪುತ್ರ ಕಾರ್ತಿಕ ಆರೋಪವನ್ನು ಅಲ್ಲಗಳೆದಿದ್ದಾರೆ.  
 
ಕ್ರಾಪ್‌ ಮಾಡಿ ನನ್ನ ಫೋಟೋಗಳನ್ನು ಬಳಸಿರಬಹುದು. ನಾನು ಆಫೀಸ್‌ನಿಂದ ಮನೆಗೆ ಮನೆಯಿಂದ ಆಫೀಸ್‌ಗೆ ಮಾತ್ರ ತೆರಳುವುದು . ಮೈತ್ರೇಯಿ ಜತೆ ನನಗೆ ಯಾವುದೇ ರೀತಿಯ ಸಂಬಂಧವಿಲ್ಲ. ಮೈತ್ರೇಯಿ ಆರೋಪದ ಹಿಂದೆ ದೊಡ್ಡ ತಂತ್ರವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
 
 

Share this Story:

Follow Webdunia kannada