Select Your Language

Notifications

webdunia
webdunia
webdunia
webdunia

ರಾಘವೇಶ್ವರ ಶ್ರೀ ಅತ್ಯಾಚಾರ ಪ್ರಕರಣ: ತೀರ್ಪನ್ನು ಕಾಯ್ದಿರಿಸಿದ ಕೋರ್ಟ್

ರಾಘವೇಶ್ವರ ಶ್ರೀ ಅತ್ಯಾಚಾರ ಪ್ರಕರಣ: ತೀರ್ಪನ್ನು ಕಾಯ್ದಿರಿಸಿದ ಕೋರ್ಟ್
ಬೆಂಗಳೂರು , ಶುಕ್ರವಾರ, 30 ಜನವರಿ 2015 (19:31 IST)
ರಾಮಕಥಾ ಗಾಯಕಿ ಪ್ರೇಮಲತಾ ಮೇಲಿನ ಅತ್ಯಾಚಾರ ಆರೋಪವನ್ನು ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ರಾಘವೇಶ್ವರ ಭಾರತೀ ಶ್ರೀಗಳು ಪ್ರಕರಣದ ತನಿಖೆಯನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ಎಲ್ಲಾ ವಿಚಾರಣೆಗಳು ಮುಗಿದಿದ್ದು, ಹೈಕೋರ್ಟ್ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ. 
 
ಇತ್ತೀಚೆಗೆ 5 ಮಂದಿ ನ್ಯಾಯಾಮೂರ್ತಿಗಳು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ನ್ಯಾಯಮೂರ್ತಿ ಆನಂದ ಬೈರಾ ರೆಡ್ಡಿ ಹಾಗೂ ನ್ಯಾ.ಎನ್‌. ಆನಂದ್‌ ಅವರಿದ್ದ ದ್ವಿ-ಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿತ್ತು. 
 
ಪ್ರಸ್ತುತ ಪ್ರಕರಣದ ಎಲ್ಲಾ ವಾದ-ವಿವಾದಗಳು ಪೂರ್ಣಗೊಂಡಿದ್ದು, ಹೈಕೋರ್ಟ್‌ನ ವಿಭಾಗೀಯ ಪೀಠ ತೀರ್ಪನ್ನು ಕಾಯ್ದಿರಿಸಿದೆ ಎಂದು ಮೂಲಗಳು ತಿಳಿವೆ. ಪ್ರಕರಣದ ಕೊನೆಯ ವಿಚಾರಣೆ ನಿನ್ನೆ ನಡೆದಿತ್ತು.

Share this Story:

Follow Webdunia kannada