ಹೌದು, ಇಲ್ಲಿನ ಚೌಡೇಶ್ವರಿ ದೇವಸ್ತಾನದಲ್ಲಿ ಏಪ್ರಿಲ್ 13ರಿಂದ 19ರವರೆಗೆ ಅಮ್ಮನವರ ಪಾದಾರ್ಪಣಾ ಸಮಾರಂಭ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೇವಸ್ತಾನದ ಭಕ್ತ ಸಮೂಹ, ದಲಿತಪರ ಸಂಘಟನೆಗಳು ಹಾಗೂ ಕೆಲ ಸಾರ್ವಜನಿಕರು ಶ್ರೀಗಳ ಆಗಮನಕ್ಕೆ ಪ್ರತಿಭಟನೆಯ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಮಾಧ್ಯಮಗಲೊಂದಿಗೆ ಪ್ರತಿಕ್ರಿಯಿಸಿರುವ ಪ್ರತಿಭಟನಾನಿರತ ಭಕ್ತರು, ಅತ್ಯಾಚಾರ ಆರೋಪವನ್ನು ಎದುರಿಸುತ್ತಿರುವ ಕಳಂಕಿತ, ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಗ್ರಾಮಕ್ಕೆ ಕಾಲಿಡಲೇ ಬಾರದು ಎಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಇದನ್ನರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಪ್ರತಿಭಟನಾಕಾರರಲ್ಲಿ ಕೊರಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದಿರುವ ಪ್ರತಿಭಟನಾಕಾರರು, ಒಂದು ವೇಳೆ ಕಾರ್ಯಕ್ರಮಕ್ಕೆ ಶ್ರೀಗಳು ವಿರೋಧದ ನಡುವೆಯೂ ಆಗಮಿಸಿದಲ್ಲಿ ನಾವು ಮತ್ತೆ ಪ್ರತಿಭಟನೆ ಮುಂದುವರಿಸುತ್ತೇವೆ ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ವಿರೋಧಕ್ಕೆ ಕಾರಣವೇನು:
ತಮ್ಮ ರಾಮಚಂದ್ರಾಪುರ ಮಠದಲ್ಲಿ ರಾಮಕಥಾ ಗಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರೇಮಲತಾ ಅವರ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಶ್ರೀಗಳ ಮೇಲಿದ್ದು, ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೊಳಪಟ್ಟಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರು ಕಳಂಕಿತರಾಗಿದ್ದು, ಅವರು ಸಮಾರಂಭಕ್ಕೆ ಆಗಮಿಸಬಾರದು ಎಂಬುದು ಪ್ರತಿಭಟನಾಕಾರರ ವಾದವಾಗಿದೆ.
ದೇವಸ್ಥಾನದ ಮಂಡಳಿ ಅಭಿಪ್ರಾಯ:
ಈ ಪ್ರತಿಭಟನೆ ಸಂಬಂಧ ಚೌಡೇಶ್ವರಿ ದೇವಸ್ತಾನದ ಆಡಳಿತ ಮಂಡಳಿ ಪ್ರತಿಕ್ರಿಯಿಸಿದ್ದು, ಶ್ರೀಗಳ ವಿರುದ್ಧ ಕೇವಲ ಆರೋಪವಷ್ಟೇ ಇದ್ದು, ಅದು ಸಾಭೀತಾಗಿಲ್ಲ. ಅಲ್ಲದೆ ಅವರು ಕಳೆದ 16 ವರ್ಷಗಳಿಂದ ಮಠಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕಾರ್ಯಕ್ರಮಕ್ಕೆ ಈ ಭಾರಿ ಕೂಡ ಆಗಮಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ವಿರೋಧದ ಉದ್ಭವ ಹೇಗೆ ?:
ಸಮಾರಂಭದ ಆರಂಭದ ದಿನವಾದ ಏಪ್ರಿಲ್ 13 ರಂದು ಅದ್ದೂರಿ ಸಮಾರಂಭ ಆಯೋಜಿಸಲಾಗಿದ್ದು, ಮೊದಲ ದಿನದ ಸಮಾರಂಭದಲ್ಲಿ ಶ್ರೀಗಳು ಭಾಗವಹಿಸಲಿದ್ದಾರೆ. ಅಲ್ಲದೆ ಅಂದಿನ ಸಾನಿಧ್ಯನವನ್ನು ಅವರೇ ವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಭಿತ್ತಿ ಪತ್ರಿಕೆಯಲ್ಲಿ ದೇವಸ್ತಾನದ ಆಡಳಿತ ಮಂಡಳಿ ಪ್ರಕಟಿಸುವ ಮೂಲಕ ಖಚಿತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರೀಗಳ ಆಗಮನಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಶ್ರೀಗಳ ಆಗಮನ ಸಂಬಂಧ ಪ್ರಸ್ತುತ ಪರ ವಿರೋಧದ ಅಭಿಪ್ರಾಯಗಲು ವ್ಯಕ್ತವಾಗುತ್ತಿದ್ದು, ಈ ವಿಷಯ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಸಾರ್ವಜನಿಕರಲ್ಲಿಯೂ ಕೂಡ ಕುತೂಹಲ ಮೂಡಿಸಿದೆ.