ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಮೇಲೆ ನಿರಂತರವಾಗಿ ಆಕ್ರಮಣ ಮಾಡಲಾಗಿದೆ. ಆಕ್ರಮಣ, ದೌರ್ಜನ್ಯ ಸಹಿಸಿಕೊಂಡಿದ್ದೇನೆ. ಆದರೆ, ಮಠದ ಮೇಲಿನ ದೌರ್ಜನ್ಯ ಸಹಿಸುವುದಿಲ್ಲ ಎಂದು ರಾಮಚಂದ್ರಾಪುರ ಮಠದ ಮಠಾಧೀಶರಾದ ರಾಘವೇಶ್ವರ್ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರಕಾರ ವಿನಾಕಾರಣ ಮಠದ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ. ಎಲ್ಲಾ ಮಠಗಳನ್ನು ಬಿಟ್ಟು ಸರಕಾರದ ಕಣ್ಣಿಗೆ ನಮ್ಮ ಮಠ ಮಾತ್ರ ಕಂಡುಬರುತ್ತಿದೆ. ರಾಮಚಂದ್ರಾಪುರ ಮಠದಲ್ಲಿ ಲೆಕ್ಕಪತ್ರಗಳ ಪಾರದರ್ಶಕವಾಗಿವೆ. ಸರಕಾರಕ್ಕೆ ಸಂದೇಹವಿದ್ದರೇ ಭಕ್ತರ ಅಭಿಪ್ರಾಯ ಪಡೆಯಲಿ ಎಂದು ಹೇಳಿದರು.
ರಾಜ್ಯ ಸರಕಾರಕ್ಕೆ ವಿಪಕ್ಷಗಳು ಅಷ್ಟು ಕಿರುಕುಳ ನೀಡುತ್ತಿಲ್ಲ. ಅಷ್ಟು ಕಿರುಕುಳ ಸರಕಾರ ನಮಗೆ ನೀಡುತ್ತಿದೆ. ಈ ಕೂಡಲೇ ರಾಜ್ಯ ಸರಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಶ್ರೀಗಳು ಆಗ್ರಹಿಸಿದ್ದಾರೆ.
ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರವನ್ನು ಖಂಡಿಸಿ ಶಿವಮೊಗ್ಗ ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ರಾಘವೇಶ್ವರ್ ಶ್ರೀಗಳ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ. ಧರಣಿಯಲ್ಲಿ ನೂರಾರು ಭಕ್ತರ ಪಾಲ್ಗೊಂಡಿದ್ದು, ಇಂದು ಸಂಜೆಯವರೆಗೂ ಮೌನ ಧರಣಿ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ