Webdunia - Bharat's app for daily news and videos

Install App

ನಮ್ಮ ಸರ್ಕಾರವಿದ್ದರೂ ಕೆಲಸವಾಗ್ತಿಲ್ಲ ಎಂದು ಕಾಂಗ್ರೆಸ್ ಶಾಸಕ: ದಲಿತ ಸಿಎಂ ಎನ್ನುವುದು ನಾಟಕ ಎಂದ ಆರ್ ಅಶೋಕ್

Krishnaveni K
ಶುಕ್ರವಾರ, 13 ಮಾರ್ಚ್ 2026 (12:52 IST)
ನವದೆಹಲಿ: ನಮ್ಮ ಸರ್ಕಾರವಿದ್ದರೂ ಕೆಲಸವಾಗ್ತಿಲ್ಲ ಎಂದು ಕೈ ಶಾಸಕ ನಾರಾಯಣಸ್ವಾಮಿ ನೀಡಿರುವ ಹೇಳಿಕೆ ಉಲ್ಲೇಖಿಸಿ ವಿಪಕ್ಷ ನಾಯಕ ಆರ್ ಅಶೋಕ್ ದಲಿತ ಸಿಎಂ ಎನ್ನುವುದೆಲ್ಲಾ ನಾಟಕ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ವ್ಯಂಗ್ಯ ಮಾಡಿದ್ದಾರೆ.

ಕ್ಷೇತ್ರದ ಕೆಲಸಗಳಿಗೆ ನಾವೇ ಅಧಿಕಾರಿಗಳನ್ನು ಭೇಟಿ ಮಾಡಿದರೂ ಕೆಲಸವಾಗುತ್ತಿಲ್ಲ. ಸಮಸ್ಯೆ ಹೇಳಲು ಹೋದರೆ ಸಚಿವರೂ ಸಿಗುತ್ತಿಲ್ಲ ಎಂದು ಶಾಸಕ ನಾರಾಯಣಸ್ವಾಮಿ ಬಹಿರಂಗವಾಗಿ ಅಳಲು ತೋಡಿಕೊಂಡಿದ್ದರು.

ಇದಕ್ಕೆ ಟಾಂಗ್ ಕೊಟ್ಟಿರುವ ಆರ್ ಅಶೋಕ್ ‘ದಲಿತ ಮುಖ್ಯಮಂತ್ರಿ" ಎಂಬುದು ತಮ್ಮ ಕುರ್ಚಿಗೆ ಕಂಟಕ ಬಂದಾಗಲೆಲ್ಲ ಸಿದ್ದರಾಮಯ್ಯ ಅವರು ಉರುಳಿಸುವ ದಾಳ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?

ಮುಖ್ಯಮಂತ್ರಿ ಮಾಡುವುದು ದೂರದ ಮಾತು, ದಲಿತ ಶಾಸಕರ ಕೆಲಸಗಳೂ ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಶ್ರೀ ಎಸ್.ಎನ್.ನಾರಾಯಣಸ್ವಾಮಿ ಅವರು ಬಹಿರಂಗವಾಗಿ ತಮ್ಮ ಅಳಲು ತೋಡಿಕೊಂಡಿರುವುದು ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ಧೋರಣೆಗೆ ಸ್ಪಷ್ಟ ನಿದರ್ಶನ.

ದಲಿತರು, ಹಿಂದುಳಿದವರ ಪರವಾಗಿದ್ದೇನೆ ಎಂದು ಹೇಳಿಕೊಂಡು ಅಧಿಕಾರ ಅನುಭವಿಸುತ್ತಿರುವ ಸಿದ್ದರಾಮಯ್ಯನವರು ರಾಜ್ಯ ಕಂಡ ಅತ್ಯಂತ ದೊಡ್ಡ ದಲಿತ ವಿರೋಧಿ ಮುಖ್ಯಮಂತ್ರಿ ಎನ್ನುದರಲ್ಲಿ ಸಂಶಯವೇ ಇಲ್ಲ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾಡೋದೆಲ್ಲಾ ಮಾಡಿ ದಲಿತ ಕಾರ್ಡ್ ಬಳಸಿ ಪ್ರಕರಣ ಮುಚ್ಚಿ ಹಾಕಲು ನೋಡೋದು: ನಾಗೇಂದ್ರ ವಿರುದ್ಧ ಆರ್ ಅಶೋಕ್ ವಾಗ್ದಾಳಿ

ಜಿಮ್ ಮಾಡುತ್ತಿದ್ದಾಗಲೇ ಕುಸಿದು ಅಲ್ಲೇ ಮರಣ: ವೈರಲ್ ಆಯ್ತು ವೈದ್ಯರೊಬ್ಬರ ಕೊನೆಯ ಕ್ಷಣ Video

ತರಗತಿಯಲ್ಲಿ ವಿದ್ಯಾರ್ಥಿಗೆ ಮನಬಂದಂತೆ ಹೊಡೆದ ಶಿಕ್ಷಕ: ಕ್ರೂರ ಕೃತ್ಯದ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ Video

ಬಸ್ ಹತ್ತುವಾಗ ಜಸ್ಟ್ ಮಿಸ್: ಬಸ್ ಕ್ಲೀನರ್ ಇಲ್ಲದೇ ಇದ್ದಿದ್ದರೆ ಈ ವೃದ್ಧನ ಕತೆ ಏನಾಗ್ತಿತ್ತೋ Video

ಡೆಲಿವರಿ ಬಾಯ್ ಹೆಂಡ್ತಿ ಆಸ್ಪತ್ರೆಯಲ್ಲಿದ್ದಾಳೆ, ಡೆಲಿವರಿ ಮುಗಿಸಿ ಬರ್ತೀನಿ ಎಂದರೂ ಕರಗಲಿಲ್ಲ ಟ್ರಾಫಿಕ್ ಪೊಲೀಸ್ ಮನಸ್ಸು Video

ಮುಂದಿನ ಸುದ್ದಿ
Show comments