Daily Horoscope
✕

ಸಿದ್ದರಾಮಯ್ಯನವರೇ ನಿಮಗೆ ತಿಲಕ, ಕೇಸರಿ ಪೇಟ ಕಂಡರೆ ಯಾಕೆ ನಡುಕ: ಆರ್ ಅಶೋಕ್

ಕೃಷ್ಣವೇಣಿ ಕೆ
ಶುಕ್ರವಾರ, 15 ಮೇ 2026 (11:29 IST)
ಬೆಂಗಳೂರು: ಕೇಸರಿ ಪೇಟ ಧರಿಸಲು ಅವಕಾಶವಿಲ್ಲ ಎಂದ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿರುವ ವಿಪಕ್ಷ ನಾಯಕ ಆರ್ ಅಶೋಕ್ ನಿಮಗೆ ಕೇಸರಿ ಶಾಲು, ಪೇಟ ಕಂಡರೆ ಯಾಕೆ ನಡುಕ ಎಂದು ವ್ಯಂಗ್ಯ ಮಾಡಿದ್ದಾರೆ.

ರಾಜ್ಯದಲ್ಲಿ ಮತ್ತೆ ಹಿಜಾಬ್ ವಿವಾದ ಭುಗಿಲೆದ್ದಿದೆ. ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವುದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಕಾಂಗ್ರೆಸ್ ಓಲೈಕೆ ರಾಜಕಾರಣ ಎಂದು ಬಿಜೆಪಿ ಟೀಕೆ ಮಾಡಿದೆ.

ಇದರ ನಡುವೆ ಕೇಸರಿ ಶಾಲು, ಪೇಟ ಧರಿಸಲು ಅವಕಾಶವಿಲ್ಲ, ಹಿಜಾಬ್ ಗೆ ಮಾತ್ರ ಅವಕಾಶ ನೀಡಿದ್ದೇವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಆರ್ ಅಶೋಕ್ ಟಾಂಗ್ ಕೊಟ್ಟಿದ್ದಾರೆ. ‘ನಿಮಗೆ ತಿಲಕ ಕಂಡರೆ ನಡುಕ, ಕೇಸರಿ ಕಂಡರೆ ಮೈಯೆಲ್ಲ ಉರಿ, ಹನುಮ ಧ್ವಜ ಕಂಡರೆ ತಳಮಳ, ರಾಮಮಂದಿರ ಎಂದರೆ ಕಿರಿಕಿರಿ.

ಆದರೆ ಅನ್ಯ ಮತೀಯ ಸಂಭ್ರಮಗಳಲ್ಲಿ ಮಾತ್ರ ಗಮಗಮಿಸುವ ಸೆಂಟು ಹೊಡೆದುಕೊಂಡು, ಟೋಪಿ ಹಾಕಿಕೊಂಡು, ನವ ಮದುಮಗನಂತೆ ಸಿಂಗಾರಗೊಳ್ಳುತ್ತೀರಿ.

ಹಿಂದೂಗಳೆಂದರೆ, ಹಿಂದೂಗಳ ನಂಬಿಕೆಗಳೆಂದರೆ, ಹಿಂದೂಗಳ ಆಚರಣೆಗಳೆಂದರೆ, ಹಿಂದೂಗಳ ಧಾರ್ಮಿಕ ಚಿಹ್ನೆಗಳೆಂದರೆ ನಿಮಗೆ ಯಾಕಿಷ್ಟು ಅಸಹನೆ ಸ್ವಾಮಿ, ಯಾಕಿಷ್ಟು ದ್ವೇಷ? ನೀವು ಬರೀ ಅಲ್ಪಸಂಖ್ಯಾತರಿಗೆ ಮಾತ್ರ ಮುಖ್ಯಮಂತ್ರಿ ಅಲ್ಲ ಸ್ವಾಮಿ, ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಅನ್ನೋದನ್ನ ಮರೆಯಬೇಡಿ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ಮಾತ್ರವಲ್ಲ, ಅವರಪ್ಪನೂ ಹೋಗ್ತಾರೆ: ಮೋದಿ ಎಂದು ಕೂಗಿದ ವ್ಯಕ್ತಿಯ ಮುಂದೆ ಅಬ್ಬರಿಸಿದ ಮಲ್ಲಿಕಾರ್ಜುನ ಖರ್ಗೆ Video

ಕುಟುಂಬದಲ್ಲಿ ಗೃಹಹಿಂಸೆ ಸಹಿಸಬೇಡಿ: ಮಹಿಳೆಯರ ರಕ್ಷಣೆಗಾಗಿ ಇರುವ ಹಕ್ಕುಗಳು ಮತ್ತು ತುರ್ತು ಸಹಾಯವಾಣಿ ಮಾಹಿತಿ

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗದಿದ್ದರೆ ಈ ಘಟನೆಯನ್ನು ಯಾರೂ ನಂಬುತ್ತಿರಲಿಲ್ಲ video

Karnataka Weather: ನಿಮ್ಮ ಜಿಲ್ಲೆಯಲ್ಲಿ ಮಳೆಯಾಗಲಿದೆಯೇ, ಹವಾಮಾನ ಇಲಾಖೆಯ ಹೊಸ ಮುನ್ಸೂಚನೆ

ಸ್ಟಿಂಗ್ ಅಂತ ಮಂಗ ಮಾಡುವವರು: ಆರ್.ಅಶೋಕ್ ಟೀಕೆ

ಮುಂದಿನ ಸುದ್ದಿ
Show comments