Daily Horoscope
✕

ಅಪ್ಪ, ಮಗ ಇಬ್ರೂ ಸರಿಯಿಲ್ಲ, ಖರ್ಗೆ ಬಾಯಿ ಫಿನಾಯಿಲ್ ಹಾಕಿ ತೊಳೆಯಬೇಕು: ಆರ್ ಅಶೋಕ್ ವಾಗ್ದಾಳಿ

ಕೃಷ್ಣವೇಣಿ ಕೆ
ಸೋಮವಾರ, 26 ಅಕ್ಟೋಬರ್ 2026 (15:33 IST)
ಬೆಂಗಳೂರು: ಕಾಂಗ್ರೆಸ್ ದೇಶ ಮತ್ತು ರಾಜ್ಯದಲ್ಲಿ ಸರ್ವನಾಶವಾಗಲು ಅಪ್ಪ ಮತ್ತು ಮಗ ಸಾಕು. ಅಲ್ಲಿ ಅಪ್ಪ ಮಲ್ಲಿಕಾರ್ಜುನ ಖರ್ಗೆ ಇಲ್ಲಿ ಮಗ ಮರಿ ಖರ್ಗೆ ಸಾಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವ್ಯಂಗ್ಯವಾಡಿದ್ದಾರೆ. 
 
ಪ್ರಧಾನಿ ನರೇಂದ್ರ ಮೋದಿಜಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ ಎಲ್ಲೂ ಕಾಂಗ್ರೆಸ್ ಇಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೈಯ್ಯಲು ಎಲ್ಲಾದರೂ ಕಾಂಗ್ರೆಸ್ ಇರುತ್ತದೆ ಎಂದುಕೊಂಡಿದ್ದೆವು. ಆದರೆ ಇವರಿಬ್ಬರಿಂದ ಕಾಂಗ್ರೆಸ್ ಸರ್ವನಾಶ ಆಗುತ್ತಿದೆ. ಅರಳು ಮರಳಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಜಪ ಮಾಡಿಕೊಂಡು ಇರಬೇಕಾಗಿತ್ತು. ಆದರೆ ಇವರು ದಿನಾ ಮೋದಿಜಿ ಅವರ ಜಪ ಮಾಡುತ್ತಾರೆ. ಇವರು ಇಷ್ಟು ಕೀಳುಮಟ್ಟಕ್ಕೆ ಹೋಗಬಾರದಿತ್ತು ಎಂದು ಟೀಕಿಸಿದರು.
 
 ಖರ್ಗೆ ಅವರಿಗೆ ನಡೆಯಲು ಆಗುತ್ತಿಲ್ಲ. ಅದೇ ರೀತಿ ಕಾಂಗ್ರೆಸ್ ಪಕ್ಷಕ್ಕೂ ಸಹ ನಡೆಯಲು ಆಗ್ತ ಇಲ್ಲ. ನಡೆಯಲಾಗದ ಕಾಂಗ್ರೆಸ್ ಕಾಕ್ರೋಚ್ ಪಕ್ಷದ ಜೊತೆ ಹೋಗುತ್ತಿದೆ. ಇಷ್ಟು ಹೊಲಸಾಗಿ ರಾಷ್ಟ್ರೀಯ ಅಧ್ಯಕ್ಷರು ಮಾತನಾಡಿದ್ದೇ ಇಲ್ಲ. ಮೋದಿ ಜೀ ಅವರು ಟೀ ಮಾರುತ್ತ ಇದ್ದರು ಎಂದು ಖರ್ಗೆ ಹೇಳಿದ್ದರು. ದೇಶದ ಜನ ಉಗಿದು ಉಪ್ಪು ಹಾಕಿದ್ದರಿಂದ ಅದನ್ನು ಬಿಟ್ಟರು. ಮೋದಿ ಅವರನ್ನು ಏನೂ ಮಾಡಲು ಆಗಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರೇ ಹೇಳಿದ್ದಾರೆ ಎಂದು ವಿವರಿಸಿದರು. 
 
ಪುರಂದರ ದಾಸರು ಹೇಳಿದಂತೆ ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆʼ ಎಂಬಂತೆ ಇವರದು ಪರರ ದೂಷಣೆ ಆಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಆಡಿರುವ ಮಾತುಗಳು ಕಾಂಗ್ರೆಸ್ ಪಕ್ಷದ ಹೀನ ಸಂಸ್ಕತಿ ತೋರಿಸುತ್ತದೆ. ಒಂದು ವೇಳೆ ಬಿಜೆಪಿಯವರು ನಿಮ್ಮ ಅಪ್ಪನ ಬಗ್ಗೆ ಹೇಳಿದ್ದರೆ ನೀವು ಏನು ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದರು. 
 
ಉತ್ತರ ಪ್ರದೇಶದಲ್ಲಿ ಖರ್ಗೆ ಅವರು ಭಾಷಣ ಮಾಡಿದ ಸ್ಥಳ ಶುದ್ಧಗೊಳಿಸಿದ್ದು ಸುದ್ದಿಯಾಗಿತ್ತು. ಹಾಗಾದರೆ ಖರ್ಗೆ ಅವರ ಬಾಯಿಯನ್ನು ಈಗ ಯಾವುದರಲ್ಲಿ ಸ್ವಚ್ಛಗೊಳಿಸಬೇಕು. ಗೋಮೂತ್ರ ಬದಲು ಫಿನಾಯಿಲ್, ಹಿಟ್, ಹಾರ್ಪಿಕ್ ಹಾಕಬೇಕು. ಮೋದಿ ನಾಲ್ಕನೇ ಬಾರಿ ಪ್ರಧಾನಿ ಆಗ್ತಾ ಇದ್ದಾರೆ ಎಂದು ಅವರ ಮೇಲೆ ನಿಮಗೆ ಕೋಪವಿದೆ, ಹೊಟ್ಟ ಉರಿ ಇದೆ. ಅದಕ್ಕೆ ಸಹಿಸುತ್ತಿಲ್ಲ. ನೀವು ಐವತ್ತು ವರ್ಷ ಅಧಿಕಾರದಲ್ಲಿದ್ದರೂ ನಾವು ಕೇಳಿಲ್ಲ ಎಂದು ತಿಳಿಸಿದರು. 
 
ದೇಶದ ಮುಂದೆ ಕಾಂಗ್ರೆಸ್ ಬೆತ್ತಲೆಯಾಗಿದೆ. ರಾಹುಲ್ ಗಾಂಧಿ ಅವರು ದೇಶದಲ್ಲಿ ಇರುವುದಕ್ಕಿಂತ ವಿದೇಶದಲ್ಲಿಯೇ ಇರುತ್ತಾರೆ. ಇಲ್ಲಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನವರು ಓಡಾಡಲು ಬಿಡುತ್ತಿಲ್ಲ. ಸ್ಟಿಂಗ್ ಆಗಿದ್ದು ನಿಜ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಸ್ಟಿಂಗ್ ವಿಷಯದಲ್ಲಿ ಸತ್ಯ ಹೊರಗೆ ಬರಲಿ ಎಂದು ಬಿಜೆಪಿ ಬಯಸಿದೆ. ಪಕ್ಷದ ನಿಲುವು ತಿಳಿಸಿದ್ದೇವೆ. ಬರಗಾಲ ಬಂದರೂ ಮಾತನಾಡುತ್ತಿಲ್ಲ ಎಂದು ಹೇಳಿದರು. 
 
ಮಲ್ಲಿಕಾರ್ಜುನ ಖರ್ಗೆ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಈ ಕಾಂಗ್ರೆಸ್ ದೇಶವಿರೋಧಿಯಾಗಿದೆ. ಮುಂದೆ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಇಲ್ಲದಿರುವ ಸ್ಥಿತಿ ನಿರ್ಮಾಣವಾಗಲಿದೆ. ರಾಜಕಾರಣದಲ್ಲಿ ಹೇಗಿರಬೇಕು ಎಂದು ಬಿಜೆಪಿ ಕಲಿಸಲಿದೆ. ಮಾನ, ಮರ್ಯಾದೆ ಇದ್ದರೆ ಖರ್ಗೆ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
 

Related News

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಚಟುವಟಿಕೆಗಳನ್ನು ರಾಹುಲ್ ಗಾಂಧಿಯವರು ಮಾಡುತ್ತಿದ್ದಾರೆ: ಛಲವಾದಿ

ನಾಗರಹೊಳೆ ಅಭಯಾರಣ್ಯದಲ್ಲಿ ಹುಚ್ಚಾಟ ಮಾಡಿದ ಬೈಕ್ ಸವಾರರಿಗೆ ತಕ್ಕ ಶಾಸ್ತಿ ಮಾಡಿದ ಸಚಿವ ರಾಮಲಿಂಗಾ ರೆಡ್ಡಿ Video

ತಂದೆ ತಾಯಿ ತೊಡೆ ಮೇಲೆ ಕೂತಿರುತ್ತಿದ್ದರು ಹೇಳಿಕೆ ಸಮರ್ಥಿಸಿಕೊಂಡ ರಾಹುಲ್ ಗಾಂಧಿ: ಹಳೇಬೀಡು ಶಿಲ್ಪದ ಇತಿಹಾಸ ಗೊತ್ತಾ ಎಂದ ಬಿಜೆಪಿ

Gold Price: ಬೆಂಗಳೂರು ಮತ್ತು ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಬೆಲೆ

ಗಾಂಜಾ ಕೇಸ್ ಹಾಕಿ… ಹೋಟೆಲ್ ನಲ್ಲಿ ರೊಮ್ಯಾಂಟಿಕ್ ಮೂಡ್ ನಲ್ಲಿದ್ದ ಯುವ ಜೋಡಿಗೆ ಪೊಲೀಸರ ದರ್ಪ Video

ಮುಂದಿನ ಸುದ್ದಿ
Show comments