ಬೆಂಗಳೂರು: ಡಿಕೆ ಶಿವಕುಮಾರ್ ಬಿಜೆಪಿ ಸೇರ್ಪಡೆ ವದಂತಿ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು ನಾನು ಕೊಟ್ಟ ಮುಹೂರ್ತದ ಪರಿಣಾಮವೇ ಇದು ಎಂದಿದ್ದಾರೆ.
ಇತ್ತೀಚೆಗೆ ಕುಂಭಮೇಳಕ್ಕೆ ಹೋಗಿ ಅಲ್ಲಿನ ಆಯೋಜನೆ ಬಗ್ಗೆ ಡಿಕೆ ಶಿವಕುಮಾರ್ ಹೊಗಳಿದ್ದಾರೆ. ನಾನು ಹಿಂದೂ ಧರ್ಮವನ್ನು ಪಾಲಿಸುತ್ತೇನೆ ಎಂದಿದ್ದರು. ನಿನ್ನೆಯಷ್ಟೇ ಅಮಿತ್ ಶಾ ಜೊತೆಗೂ ವೇದಿಕೆ ಹಂಚಿಕೊಂಡಿದ್ದರು.
ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಬಿಜೆಪಿ ಸೇರ್ಪಡೆ ವದಂತಿಗಳು ಹಬ್ಬಿವೆ. ಇದರ ಬಗ್ಗೆ ಇಂದು ಆರ್ ಅಶೋಕ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಡಿಕೆ ಶಿವಕುಮಾರ್ ಭವಿಷ್ಯ ಹೇಳುವಷ್ಟು ದೊಡ್ಡವನಲ್ಲ. ನಾನು ಸತ್ಯ ಹೇಳುತ್ತೇನೆ ಅಷ್ಟೇ. ನವಂಬರ್ 16 ಕ್ಕೆ ಸಿಎಂ ಬದಲಾವಣೆ ಬಗ್ಗೆ ಈ ಮೊದಲೇ ಮುಹೂರ್ತ ಇಟ್ಟಿದ್ದೆ. ಇದೆಲ್ಲವೂ ಅದರ ಮುನ್ನುಡಿ ಅಷ್ಟೇ ಎಂದಿದ್ದಾರೆ.
ಹಾಗಿದ್ದರೆ ಡಿಕೆ ಶಿವಕುಮಾರ್ ಬಿಜೆಪಿಗೆ ಬಂದರೆ ಸ್ವಾಗತಿಸುತ್ತೀರಾ ಎಂದು ಅಶೋಕ್ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಅವರು ನೋಡೋಣ. ಮೊದಲು ಅವರನ್ನು ಕಾಂಗ್ರೆಸ್ ನವರು ಹೊರಗೆ ಹಾಕಲಿ. ಆಗ ನೋಡೋಣ ಎಂದಿದ್ದಾರೆ.