ಪುನೀತ್ 'ಜಾಕಿ' ಸಿನಿಮಾ ರಿರಿಲೀಸ್‌: 1 ಕೋಟಿ ಕಲೆಕ್ಷನ್‌ನೊಂದಿಗೆ ಹೌಸ್‌ಫುಲ್‌ ಪ್ರದರ್ಶನ

Sampriya
ಶನಿವಾರ, 16 ಮಾರ್ಚ್ 2024 (20:14 IST)
Photo Courtesy Facebook
ಬೆಂಗಳೂರು: ಡಾ. ಪುನೀತ್ ರಾಜಕುಮಾರ್ ಅವರ 49ನೇ ಹುಟ್ಟು ಹಬ್ಬದ ಹಿನ್ನೆಲೆ ಅವರ ನಟನೆಯ ಜಾಕಿ ಸಿನಿಮಾವನ್ನು ಶುಕ್ರವಾರ ರಿರಿಲೀಸ್ ಮಾಡಲಾಯಿತು. ಇದೀಗ ಒಂದೇ ದಿನಕ್ಕೆ 1 ಕೋಟಿ ಕಲೆಕ್ಷನ್ ಮಾಡಿ, ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡು ಹೊಸ ದಾಖಲೆಯನ್ನು ಸೃಷ್ಟಿಸಿದೆ. 
 
ನಗುವಿನ ಸರದಾರ, ಯುವರತ್ನ, ಕನ್ನಡಿಗರ ಪ್ರೀತಿಯ ಡಾ.ಪುನೀತ್ ರಾಜಕುಮಾರ್ ಅವರು ನಮ್ಮನ್ನಗಲಿ ಎರಡೂವರೆ ವರ್ಷಗಳು ಕಳೆದವೂ. ಆದರೆ ಇಂದಿಗೂ ಕನ್ನಡದ ಅಭಿಮಾನಿಗಳು ಅವರನ್ನು ಪ್ರತಿ ದಿನವೂ ಕೊಂಡಾಡುತ್ತಾ, ಅವರ ಸಿನಿಮಾ, ಒಳ್ಳೆಯ ಕೆಲಸಗಳನ್ನು ಸ್ಮರಿಸುತ್ತಾ ಹೃದಯದಲ್ಲಿಟ್ಟು ಪೂಜಿಸುತ್ತಿದ್ದಾರೆ.  
 
ನಾಳೆ ಯುವರತ್ನನ 49ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಕನ್ನಡದ ಹಬ್ಬದಂತೆ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ಅವರ ಅಭಿಮಾನಿಗಳಿಗೆ ಪುನೀತ್ ಇಲ್ಲವೆಂಬ ನೋವನ್ನು ಮರೆಸಲು ಸಲುವಾಗಿ ಅವರ ನಟನೆಯ ಹಿಟ್ ಸಿನಿಮಾಗಳಲ್ಲಿ ಒಂದಾಗಿರುವ ಜಾಕಿ ಸಿನಿಮಾವನ್ನು ಶುಕ್ರವಾರ ಮತ್ತೇ ಸಿನಿಮಾ ಸಂಸ್ಥೆ ರಿರಿಲೀಸ್ ಮಾಡಿತ್ತು. ದಾಖಲೆಯಂತೆ ರಿಲೀಸ್ ಆದ ಒಂದೇ ದಿನಕ್ಕೆ 1 ಕೋಟಿ ಕಲೆಕ್ಷೆನ್ ಮಾಡಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ. 
 
ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ಜಾಕಿ ಸಿನಿಮಾವನ್ನು ಅವರ ಅಭಿಮಾನಿಗಳು ರಾಜ್ಯಾದ್ಯಂತ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಥಿಯೇಟರ್ ಮುಂದೆ ಆಳೆತ್ತರದ ಕಟೌಟ್ ಹಾಕಿ ಪುನೀತ್‌ರನ್ನು ಸಂಭ್ರಮಿಸಿದ್ದಾರೆ. ಇನ್ನೂ ನಾಳೆ ಪುನೀತ್ ಹುಟ್ಟಿದ ಹಬ್ಬದ ಸಂಭ್ರಮಕ್ಕೆ ರಾಜ್ಯದಾದ್ಯಂತ ಅದ್ಧೂರಿ ತಯಾರಿ ನಡೆಸಲಾಗುತ್ತಿದೆ. 
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಲಸ ಹುಡುಕಿ ನಗರಕ್ಕೆ ಬಂದಿದ್ದ ಯುವಕ ಅನುಮಾನಸ್ಪದ ಸಾವು

ಬೆಳಗಾವಿ: ಮನೆಯಿಂದ ಕೊಳೆತ ವಾಸನೆ, ಬಾಗಿಲು ತೆರೆದಾಗ ಮಾಜಿ ಪತಿ ಪೊಲೀಸಪ್ಪನ ಕೃತ್ಯ ಬಟಾಬಯಲು

ರಾಜ್ಯಸಭಾ ಸದಸ್ಯರ ಅಪಾರ್ಟ್‌ಮೆಂಟ್‌ನಲ್ಲಿ ಭಾರೀ ಬೆಂಕಿ ಅವಘಡ, ನಿವಾಸಿ ಹೇಳಿದ್ದೇನು

ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಹಾನಗಲ್ ತಹಶೀಲ್ದಾರ್ ಕಚೇರಿ ಶಿರಸ್ತೆದಾರ, ಮತ್ತಿಬ್ಬರ ಬಂಧನ

ಮೊದಲ ಬಾರಿ ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಪತ್ನಿ

ಮುಂದಿನ ಸುದ್ದಿ
Show comments