Select Your Language

Notifications

webdunia
webdunia
webdunia
webdunia

ಪೊಲೀಸರ ಕರ್ತವ್ಯಕ್ಕೆ ಅಡ್ಡಿ: 40 ಮಂದಿ ವಿರುದ್ಧ ದೂರು ದಾಖಲಿಸಿದ ಪಿಎಸ್ಐ ಅಗ್ನಿ

ಪೊಲೀಸರ ಕರ್ತವ್ಯಕ್ಕೆ ಅಡ್ಡಿ: 40 ಮಂದಿ ವಿರುದ್ಧ ದೂರು ದಾಖಲಿಸಿದ ಪಿಎಸ್ಐ ಅಗ್ನಿ
ರಾಯಚೂರು , ಗುರುವಾರ, 1 ಅಕ್ಟೋಬರ್ 2015 (17:56 IST)
ಐಐಟಿಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪೊಲೀಸರ ಸರ್ಕಾರಿ ಕೆಲಸಕ್ಕೆ ಅಡಿಡಪಡಿಸಲಾಗಿದೆ ಎಂಬ ಕಾರಣದಿಂದ ನಗರದ ಪಶ್ಚಿಮ ಠಾಣೆಯ ಪಿಎಸ್‌ಐ ಅಗ್ನಿ ಅವರು 40 ಮಂದಿ ಪ್ರತಿಭಟನಾನಿರತರ ವಿರುದ್ಧ ದೂರು ದಾಖಲಿಸಿದ್ದಾರೆ. 
 
ಹೌದು, ನಗರದ ಅಗ್ನಿ ಎಂಬ ಪಿಎಸ್ಐ ಅಧಿಕಾರಿ ಪ್ರತಿಭಟನಾನಿರತ 40 ಮಂದಿ ವಿರುದ್ಧ ದೂರು ದಾಖಲಿಸಿದ್ದು, ಭಾರತೀಯ ದಂಡ ಸಂಹಿತೆ 353ರ ಅಡಿಯಲ್ಲಿ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಹಿನ್ನಲೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. 
 
ಘಟನೆಯ ವಿವರ: ಐಐಟಿ ಕೇಂದ್ರವನ್ನು ರಾಯಚೂರಿನಲ್ಲಿಯೇ ಸ್ಥಾಪಿಸಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಲಾಗುತ್ತಿತ್ತು. ಇದಕ್ಕೆ ಲಾರಿ ಮಾಲೀಕರೂ ಕೂಡ ಸಾಥ್ ನೀಡಿದ್ದ ಕಾರಣ ಲಾರಿಗಳನ್ನು ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕರೂ ಕೂಡ ಪ್ರತಿಭಟನೆಯಲ್ಲಿ ಬಾಗಿಯಾಗಿದ್ದರು. ಈ ವೇಳೆ ಲಾರಿ ಚಾಲಕನ ಮೇಲೆ ಪೊಲೀಸ್ ಸಿಬ್ಬಂದಿಯೋರ್ವರು ಹಲ್ಲೆ ನಡೆಸಿದ್ದಾರೆ. ಇದರಿಂದ ಕುಪಿತಗೊಂಡ ಪ್ರತಿಭಟನಾಕಾರರು ಪೊಲೀಸರ ವರ್ತನೆ ವಿರುದ್ಧ ತಿರುಗಿ ಬಿದ್ದಿದ್ದು, ವಾಗ್ವಾದಕ್ಕಿಳಿದಿದ್ದಾರೆ. ಆದ್ದರಿಂದ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿರುವ ಪೊಲೀಸರು, 40 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. 
 
ಇನ್ನು ಪ್ರತಿಭಟನಾಕಾರರನ್ನು ಚದುರಿಸುವ ಸಲುವಾಗಿ ಪಿಎಸ್ಐ ಅಗ್ನಿ ಅವರು ಪಿಸ್ತೂಲನ್ನು ಹೊರ ತೆಗೆದು ಸಾರ್ವಜನಿಕರನ್ನು ಭಯಭೀತಗೊಳಿಸಿದ್ದಾರೆ. ಅವರ ಈ ವರ್ತನೆ ಮಾಧ್ಯಮಗಳ ಕ್ಯಾಮರಾಗಳಲ್ಲಿ ಸೆರೆಯಾಗಿದೆ.  

Share this Story:

Follow Webdunia kannada