Select Your Language

Notifications

webdunia
webdunia
webdunia
webdunia

ವೇಶ್ಯಾವಾಟಿಕೆ: ಅಕ್ಕ- ತಂಗಿಯರ ಬಂಧನ

ವೇಶ್ಯಾವಾಟಿಕೆ: ಅಕ್ಕ- ತಂಗಿಯರ ಬಂಧನ
ಬೆಂಗಳೂರು , ಭಾನುವಾರ, 28 ಡಿಸೆಂಬರ್ 2014 (13:35 IST)
ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಬೆಂಗಳೂರಿನ ಸಹೋದರಿಯರಿಬ್ಬರೀಗ ಸಿಸಿಬಿ ಪೊಲೀಸರ ಆತಿಥ್ಯದಲ್ಲಿದ್ದಾರೆ. 

 
ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ದ್ವಾರಕಾನಗರ 3ನೇ ತಿರುವು, ಬನಶಂಕರಿ 3ನೇ ಹಂತದಲ್ಲಿರುವ ಮನೆಯೊಂದರಲ್ಲಿ ಈ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ದೊರಕಿತ್ತು. ದೂರಿನ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 
 
ಸಹೋದರಿಯರಿಬ್ಬರನ್ನು ಕಾವ್ಯ(26) ಹಾಗೂ ಶಿಲ್ಪಾ(25) ಎಂದು ಗುರುತಿಸಲಾಗಿದೆ.
 
ಬಂಧಿತರಿಂದ ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada