Webdunia - Bharat's app for daily news and videos

Install App

ಪ್ರಧಾನಿ ಮೋದಿಗೆ ವಿಶ್ವಸಂಸ್ಥೆಯ ಅತಿದೊಡ್ಡ ಪ್ರಶಸ್ತಿ: ಈ ಪ್ರಶಸ್ತಿ ಸಿಕ್ಕಿದ್ದು ಯಾಕೆ?

Webdunia
ಗುರುವಾರ, 27 ಸೆಪ್ಟಂಬರ್ 2018 (14:48 IST)
ವಿಶ್ವಸಂಸ್ಥೆಯ ಅತಿದೊಡ್ಡ ಪ್ರಶಸ್ತಿ ಎನಿಸಿಕೊಂಡಿರುವ ಚಾಂಪಿಯನ್ಸ್ ಆಫ್ ಅರ್ತ್ ಪ್ರಶಸ್ತಿಯ ಗೌರವಕ್ಕೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ.

ಈ ಗೌರವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಅವರ ಜೊತೆ ಪಾಲಿಸಿ ಆಫ್ ಲೀಡರ್‍ಶಿಪ್ ವಿಭಾಗದಲ್ಲಿ ಮೋದಿ ಅವರಿಗೆ ಈ ಗೌರವ ಸಿಕ್ಕಿದೆ.

ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಕ್ಕಾಗಿ ಮೋದಿಗೆ ಈ ಗೌರವ ನೀಡಲಾಗಿದೆ. ಇದೇ ವೇಳೆ 2022ಕ್ಕೆ ಸಂಪೂರ್ಣ ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ ವಾಗ್ದಾನವನ್ನು ಕೂಡ ಗೌರವವನ್ನು ಘೋಷಿಸುವಾಗ ವಿಶೇಷವಾಗಿ ಉಲ್ಲೇಖಿಸಲಾಗಿದೆ. 

ಇದೇ ವೇಳೆ ಇತರ ಬೇರೆ ಬೇರೆ ವಿಭಾಗದಲ್ಲಿ 4 ಜನ ಪರಿಸರ ತಜ್ಞರಿಗೆ ಪ್ರಶಸ್ತಿ ಸಿಕ್ಕಿದೆ. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಜಾಗತಿಕ ಪರಿಸರ ಒಪ್ಪಂದದ ಮುಂಚೂಣಿ ಸ್ಥಾನ ವಹಿಸಿದ್ದಕ್ಕಾಗಿ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಕೇರಳದ ಕೊಚ್ಚಿ ವಿಮಾನ ನಿಲ್ದಾಣ ಕೂಡ ಇತರ ನಾಲ್ವರಲ್ಲಿ ಪ್ರಶಸ್ತಿಯನ್ನು ಪಡೆದಿರುವುದು ವಿಶೇಷವಾಗಿದೆ. ಸುಸ್ಥಿರ ಇಂಧನ ಬಳಕೆಗೆ ಮುಂದಾಳತ್ವ ವಹಿಸಿರುವುದು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಪ್ರಶಸ್ತಿ ಬರಲು ಕಾರಣವಾಗಿದೆ.

ಏನಿದು ಸೌರ ಒಕ್ಕೂಟ?
 ಅತಿ ಹೆಚ್ಚು ಸೂರ್ಯನ ಬೆಳಕನ್ನು ಪಡೆಯುವ ದೇಶಗಳ ಒಕ್ಕೂಟವನ್ನು ಸ್ಥಾಪಿಸಿ, ಸೌರ ವಿದ್ಯುತ್ ಬಳಕೆಯ ತಂತ್ರಜ್ಞಾನ, ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಬಗ್ಗೆ 2015ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡಿನ ಲಂಡನ್ ನಲ್ಲಿರುವ ವೆಂಬ್ಲೆ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು. ಈ ದೇಶಗಳನ್ನು ಸೂರ್ಯನ ಮಕ್ಕಳು ಎಂದು ಮೋದಿ ಉಲ್ಲೇಖಿಸಿದ್ದರು. 2016ರಲ್ಲಿ ಈ ಬಗ್ಗೆ ರೂಪುರೇಷೆ ಸಿದ್ಧವಾಗಿದ್ದು, ಈ ಒಪ್ಪಂದಕ್ಕೆ ಒಳಪಡಲು ಅಂದಿನಿಂದ 121 ದೇಶಗಳು ಸಹಿ ಹಾಕಿವೆ. 2018ರ ಮಾರ್ಚ್ ನಲ್ಲಿ ನವದೆಹಲಿಯಲ್ಲಿ ಮೊದಲ ಸಮ್ಮೇಳನ ಆಯೋಜನೆಗೊಂಡಿತ್ತು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ