Select Your Language

Notifications

webdunia
webdunia
webdunia
webdunia

ಪ್ರಧಾನಿಯಿಂದ ಮೂರು ಯೋಜನೆಗಳಿಗೆ ಚಾಲನೆ: ಸ್ಮಾರ್ಟ್ ಸಿಟಿಯಾಗಲಿವೆ ರಾಜ್ಯದ 6 ಮಹಾನಗರಗಳು

ಪ್ರಧಾನಿಯಿಂದ ಮೂರು ಯೋಜನೆಗಳಿಗೆ ಚಾಲನೆ: ಸ್ಮಾರ್ಟ್ ಸಿಟಿಯಾಗಲಿವೆ ರಾಜ್ಯದ 6 ಮಹಾನಗರಗಳು
ನವದೆಹಲಿ , ಗುರುವಾರ, 25 ಜೂನ್ 2015 (11:33 IST)
ಸ್ಮಾರ್ಟ್ ಸಿಟಿ, ಅಮೃತ್ ಮಿಷನ್ ಹಾಗೂ ಅರ್ಬನ್ ಹೌಸಿಂಗ್ ಮಿಷನ್ ಎಂಬ ಕೇಂದ್ರ ಸರ್ಕಾರದ ಮೂರು ಮಹತ್ವಾಕಾಂಕ್ಷಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಇಲ್ಲಿನ ವಿಜ್ಞಾನ ಭವನದಲ್ಲಿ ಚಾಲನೆ ನೀಡಿದರು.
 
ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ವಿಶ್ವದ ಚಿತ್ತ ಭಾರತದತ್ತ ನೆಟ್ಟಿದೆ. ಪ್ರಪಂಚವು ಅತೀ ವೇಗವಾಗಿ ಬೆಳೆಯುತ್ತಿದ್ದು, ಸುಮ್ಮನೆ ಕೂರಲು ಸಾಧ್ಯವಿಲ್ಲ. ಆದ ಕಾರಣ ನಾವು ನಮ್ಮ ಬದುಕಿನ ಹಾದಿಯನ್ನು ಬದಲಿಸಿಕೊಳ್ಳಬೇಕಿದೆ. ಬಡವರನ್ನು ಅವರು ಇರುವ ದುಸ್ಥಿತಿಯಲ್ಲಿಯೇ ಬಿಡಲು ಸಾಧ್ಯವಿಲ್ಲ. ನಗರಗಳಲ್ಲಿ ವಿಶ್ವಮಟ್ಟದ ಸೌಲಭ್ಯಗಳು ದೊರೆಯುಂತಾಗಬೇಕು. ಈ ಮೂಲಕ ಭೂಮಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದ ಅವರು, ಜಯಪ್ರಕಾಶ್ ನಾರಾಯಣ್ ಅವರು ಕಂಡ ಕನಸು ನನಸಾಗಬೇಕಿದೆ ಎನ್ನುವ ಮೂಲಕ ತುರ್ತುಪರಿಸ್ಥಿತಿಯನ್ನೂ ನೆನಪಿಸಿಕೊಂಡರು. 
 
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ದೇಶದ 100 ಮಹಾನಗರಗಳನ್ನು ವಿಶ್ವ ಮಟ್ಟದಲ್ಲಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದ್ದು, ಇದರಲ್ಲಿ ಕರ್ನಾಟಕದ ಆರು ಮಹಾನಗರಗಳೂ ಸೇರಿವೆ. ಆದರೆ ನಗರಗಳ ಹೆಸರುಗಳನ್ನು ಬಹಿರಂಗಗೊಳಿಸಲಾಗಿಲ್ಲ. ಇನ್ನು ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರವು 12 ನಗರಗಳ ಹೆಸರುಗಳನ್ನು ಶಿಫಾರಸು ಮಾಡಿತ್ತು. 
 
ಇನ್ನು ಅಮೃತ್ ಮಿಷನ್ ಅಡಿಯಲ್ಲಿ ಒಂದು ಲಕ್ಷ ಜನಸಂಖ್ಯೆಗೂ ಅಧಿಕವಾಗಿ ವಾಸಿಸುತ್ತಿರುವ 500 ನಗರಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಕರ್ನಾಟಕದ 27 ನಗರಗಳು ಸ್ಥಾನ ಪಡೆದಿವೆ. ಅಂತೆಯೇ ಅರ್ಬನ್ ಹೌಸಿಂಗ್ ಮಿಷನ್ ಅಡಿಯಲ್ಲಿ ನಗರವಾಸಿಗಳಿಗೆ ಮನೆ ವಿತರಿಸಲು ಉದ್ದೇಶಿಸಲಾಗಿದ್ದು, ಬಡವರು ತಾವೇ ಮನೆ ನಿರ್ಮಿಸಿಕೊಳ್ಳಲು 2 ಲಕ್ಷ ಹಣ ಪಾವತಿಸಲಾಗುವುದು. ಈ ಯೋಜನೆಯ ಮೂಲಕ 2022ರ ವೇಳೆ ರಾಷ್ಟ್ರದ ಎಲ್ಲಾ ಜನತೆಗೆ ಮನೆ ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ.  

Share this Story:

Follow Webdunia kannada