Select Your Language

Notifications

webdunia
webdunia
webdunia
webdunia

ಉದ್ಯಾನನಗರಿಗೆ ಆಗಮಿಸಿದ ಪ್ರಧಾನಿ ಮೋದಿ, ಏಂಜೆಲ್: ಸಿದ್ದು, ವಾಲಾರಿಂದ ಸ್ವಾಗತ

ಉದ್ಯಾನನಗರಿಗೆ ಆಗಮಿಸಿದ ಪ್ರಧಾನಿ ಮೋದಿ, ಏಂಜೆಲ್: ಸಿದ್ದು, ವಾಲಾರಿಂದ ಸ್ವಾಗತ
ಬೆಂಗಳೂರು , ಮಂಗಳವಾರ, 6 ಅಕ್ಟೋಬರ್ 2015 (12:26 IST)
ನಗರದ ಆಡುಗೋಡಿಯಲ್ಲಿನ ಬಾಷ್ ಕಂಪನಿಗೆ ಭೇಟಿ ನೀಡುವ ಸಲುವಾಗಿ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಜರ್ಮನ್ ಚಾನ್ಸೆಲರ್ ಏಂಜಲಾ ಮಾರ್ಕೆಲ್ ಅವರನ್ನು ಹೆಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೂಗುಚ್ಛವನ್ನು ನೀಡಿ ಸ್ವಾಗತಿಸಿದರು. 
ಈ ವೇಳೆ ಬಿಜೆಪಿ ಮುಖಂಡರಾದ ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಮೇಯರ್ ಮಂಜುನಾಥ ರೆಡ್ಡಿ ಸೇರಿದಂತೆ ಇನ್ನಿತರರೂ ಕೂಡ ಬರಮಾಡಿಕೊಂಡರು. 
 
ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಆಗಮಿಸಿದ ಮೋದಿ ಹಾಗೂ ಏಂಜೆಲಾ ಮಾರ್ಕೆಲ್ ಬಳಿಕ ನಗರದ ಲೀಲಾ ಪ್ಯಾಲೇಸ್‌ಗೆ ತೆರಳಿ ನಾಸ್ಕಾಂ ಆಯೋಜಿಸಿರುವ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮಧ್ಯಾಹ್ನ 2.30ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ದೆಹಲಿಗೆ ವಾಪಾಸಾಗಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 
 
ಇನ್ನು ಪ್ರಧಾನಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ 23 ಪ್ರಮುಖ ರಸ್ತೆಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಖಾಸಗಿ ವಾಹಿನಗಳಿಗೆ ಪ್ರವೇಶ ನಿಷೇಧ ಹೇರಲಾಗಿದೆ. ಇದರ ಜೊತೆಗೆ ಸ್ಥಳೀಯ ಖಾಸಗಿ ವಾಹಿನಿಗಳಿಗೆ ವರದಿ ಮಾಡಲೂ ಕೂಡ ಅವಕಾಶ ನೀಡಲಾಗಿಲ್ಲ. ಪ್ರಧಾನಿ ಕಾರ್ಯಾಲಯದ ಸೂಚನೆ ಮೇರೆಗೆ ಕೇವಲ ರಾಷ್ಟ್ರೀಯ ಸುದ್ದಿವಾಹಿನಿಗಳಿಗೆ ಮಾತ್ರ ವರದಿ ಮಾಡಲು ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ. 
 
ಇನ್ನು ಕನ್ನಡದ ಸುದ್ದಿವಾಹಿನಿಗಳಿಗೂ ಕೂಡ ಪಾಸ್ ನಿರಾಕರಿಸಲಾಗಿದ್ದು, ಪ್ರಧಾನಿ ಕಾರ್ಯಾಲಯದ ವರ್ತನೆಗೆ ಸ್ಥಳೀಯ ವಾಹಿನಿಗಳ ಮಾಧ್ಯಮ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿಯೂ ಮೋದಿ ಕಾರ್ಯಕ್ರಮಕ್ಕೆ ಸ್ಥಳೀಯ ಮಾಧ್ಯಮಗಳಿಗೆ ಅನುಮತಿ ನೀಡದೆ ತಾರತಮ್ಯವೆಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Share this Story:

Follow Webdunia kannada