ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ರಾಜ್ಯ ಸರ್ಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿದೆ. ದಸರಾ ಮಹೋತ್ಸವವನ್ನು ರಾಷ್ಟ್ರಪತಿಗಳು ಉದ್ಘಾಟಿಸುತ್ತಿರುವುದು ಇದೇ ಮೊದಲು.
ದಸರೆಯ ಕೊನೆಯ ದಿನ ನಡೆಯುವ ಜಂಬೂಸವಾರಿ ಉದ್ಘಾಟನೆಗೆ 1992 ರಲ್ಲಿ ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮ ಬಂದಿದ್ದರು. ಅತಿ ಗಣ್ಯರು ಬಂದಲ್ಲಿ ಬಂದೋಬಸ್ತ್ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿ ಇದನ್ನು ನಂತರದ ವರ್ಷಗಳಲ್ಲಿ ಕೈ ಬಿಡಲಾಯಿತು.
ದಸರೆ ಉದ್ಘಾಟನೆಗೂ ರಾಜ್ಯಪಾಲರು 1989 ರಲ್ಲಿ ಎಸ್.ಆರ್.ಬೊಮ್ಮಾಯಿ ಸರ್ಕಾರ ಉರುಳಿದ್ದರಿಂದ ಆ ವರ್ಷ ದಸರಾ ಮಹೋತ್ಸವವನ್ನು ಉದ್ಘಾಟಿಸಿದ್ದು ಅಂದಿನ ರಾಜ್ಯಪಾಲರಾಗಿದ್ದ ಪಿ. ವೆಂಕಟಸುಬ್ಬಯ್ಯ ಅವರು. ಉದ್ಘಾಟನೆಯಲ್ಲಿ ಪಾಲ್ಗೊಂಡ ಮೊದಲ ಸಿಎಂ ಎಚ್.ಡಿ. ದೇವೇಗೌಡ ದಸರಾ ಉದ್ಘಾಟನೆಯಲ್ಲಿ ಮೊದಲೆಲ್ಲಾ ಮುಖ್ಯಮಂತ್ರಿಗಳು ಪಾಲ್ಗೊಳ್ಳುತ್ತಿರಲಿಲ್ಲ. ಆದರೆ 1995 ರಲ್ಲಿ ಮೊದಲ ಬಾರಿಗೆ ಅಂದಿನ ಮುಖ್ಯಮಂತ್ರಿಎಚ್.ಡಿ. ದೇವೇಗೌಡರು ಭಾಗವಹಿಸಿದ್ದರು.
ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 2013 ರಿಂದ 2017ರವರೆಗೆ ಸತತ ಐದು ದಸರಾ ಉದ್ಘಾಟನೆ ಹಾಗೂ ಜಂಬೂ ಸವಾರಿಯಲ್ಲಿ ಭಾಗವಹಿಸಿ, ದಾಖಲೆ ಮೆರೆದರು. 2018 ರಲ್ಲಿ ಎಚ್.ಡಿ. ಕುಮಾರಸ್ವಾಮಿ, 2019, 2020 ರಲ್ಲಿ ಮತ್ತೆ ಬಿ.ಎಸ್. ಯಡಿಯೂರಪ್ಪ ಅವರು ಸತತ ಎರಡು ಬಾರಿ ಭಾಗವಹಿಸಿ, ಐದು ಬಾರಿ ಭಾಗವಹಿಸಿ, ಸಿದ್ದರಾಮಯ್ಯಅವರ ದಾಖಲೆ ಸರಿಗಟ್ಟಿದರು.