Webdunia - Bharat's app for daily news and videos

Install App

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣಗೆ ಸ್ಪೆಷಲ್ ಊಟ

Krishnaveni K
ಮಂಗಳವಾರ, 16 ಜುಲೈ 2024 (17:52 IST)
ಬೆಂಗಳೂರು: ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಸ್ಪೆಷಲ್ ಊಟ ಬಂದಿದೆ.

ಪ್ರಜ್ವಲ್ ಬಂಧನವಾಗಿ ಎರಡು ತಿಂಗಳೇ ಆಗಿವೆ. ಈ ನಡುವೆ ಮುಂದಿನ ಒಂದು ತಿಂಗಳು ಮನೆ ಊಟ ಮಾಡುವುದಕ್ಕೆ ಕೋರ್ಟ್ ನಿಂದ ಅನುಮತಿ ಪಡೆದಿದ್ದಾರೆ. ಹೀಗಾಗಿ ಇಂದು ಪ್ರಜ್ವಲ್ ಗಾಗಿ ಎರಡು ಬ್ಯಾಗ್ ಗಳಲ್ಲಿ ಮನೆ ಊಟವನ್ನು ಅವರ ಆಪ್ತರೊಬ್ಬರು ತಂದುಕೊಟ್ಟಿದ್ದಾರೆ.

ಪ್ರಜ್ವಲ್ ಜೊತೆಗೆ ಅಸಹಜ ಲೈಂಗಿಕ ಕ್ರಿಯೆ ಪ್ರಕರಣದಲ್ಲಿ ಅಣ್ಣ ಸೂರಜ್ ರೇವಣ್ಣ ಕೂಡಾ ಇದೇ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಜ್ವಲ್ ಪಕ್ಕದ ಕೊಠಡಿಯಲ್ಲೇ ಸೂರಜ್ ಕೂಡಾ ಇದ್ದಾರೆ. ಕೆಲವು ದಿನಗಳ ಹಿಂದೆ ಅಣ್ಣ-ತಮ್ಮ ಇಬ್ಬರೂ ಒಂದೇ ಕೊಠಡಿಯಲ್ಲಿದ್ದರು.

ಇದೀಗ ಅಕ್ಕ ಪಕ್ಕದ ಕೊಠಡಿಯಲ್ಲಿದ್ದರೂ ಸೂರಜ್ ಗೆ ಮನೆ ಊಟ ಮಾಡುವ ಭಾಗ್ಯವಿಲ್ಲ. ಇದೀಗ ಕೋರ್ಟ್ ಪ್ರಜ್ವಲ್ ಗೆ ಮಾತ್ರ ಮನೆ ಊಟಕ್ಕೆ ಅವಕಾಶ ನೀಡಿದೆ. ಹೀಗಾಗಿ ಸೂರಜ್ ಜೈಲೂಟವನ್ನೇ ಮಾಡಬೇಕಾಗುತ್ತದೆ. ಇನ್ನು, ಇಂದು ಸದನದಲ್ಲೂ ಪ್ರಜ್ವಲ್, ಸೂರಜ್ ಪ್ರಕರಣ ಪ್ರತಿಧ್ವನಿಸಿತು. ತಮ್ಮ ಪುತ್ರರ ಬಂಧನದ ಬಗ್ಗೆ ತಂದೆ ಎಚ್ ಡಿ ರೇವಣ್ಣ ಭಾವುಕರಾಗಿ ಮಾತನಾಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೃಷ್ಣನನ್ನು‌ ತೂಗಿದ ಸ್ಪೀಕರ್ ಯುಟಿ ಖಾದರ್ ಗೆ ನೆಟ್ಟಿಗರು ಹೀಗೇ ಹೇಳೋದಾ

ಕ್ರೀಡಾ ಸಾಮಾಗ್ರಿ ಖರೀದಿಸುವಾಗ ಎಚ್ಚರ ತಪ್ಪಿದ್ರೆ ಆಗುತ್ತೆ ಪಂಗನಾಮ

ಧರ್ಮಸ್ಥಳ ಬುರುಡೆ ರಹಸ್ಯ: ಯಾವಾಗ ಕೈ ಸೇರುತ್ತೆ ಗೊತ್ತಾ ಎಫ್‌ಎಸ್‌ಎಲ್ ವರದಿ

ಮೂಡುಬಿದಿರೆ, ಬಸ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ, ವ್ಯಕ್ತಿ ಅರೆಸ್ಟ್‌

ಧರ್ಮಸ್ಥಳ ಕೇಸ್ ರಹಸ್ಯ ಬಯಲಾಗುತ್ತಿದ್ದಂತೇ ಮಹತ್ವದ ಹೇಳಿಕೆ ಕೊಟ್ಟ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಮುಂದಿನ ಸುದ್ದಿ