Select Your Language

Notifications

webdunia
webdunia
webdunia
webdunia

ಶೂಟ್‌ಔಟ್ ಪ್ರಕರಣವನ್ನು ಸಿಬಿಐಗೆ ವಹಿಸಲು ಪೂಜಾರಿ ಆಗ್ರಹ

ಶೂಟ್‌ಔಟ್ ಪ್ರಕರಣವನ್ನು ಸಿಬಿಐಗೆ ವಹಿಸಲು ಪೂಜಾರಿ ಆಗ್ರಹ
, ಸೋಮವಾರ, 21 ಏಪ್ರಿಲ್ 2014 (18:54 IST)
ಮಂಗಳೂರು: ಮೇಲ್ನೋಟಕ್ಕೆ ತನಿಕೋಡುವಿನ ಚೆಕ್‌ಪೋಸ್ಟ್‌ನಲ್ಲಿ ಎಎನ್‌ಎಫ್ ಶೂಟ್ ಔಟ್ ಹಾಡುಹಗಲೇ ನಡೆದ ಹತ್ಯೆ ಎಂದು ಜನರು ಭಾವಿಸಿದ್ದರೂ ಕಾಂಗ್ರೆಸ್ ಸರ್ಕಾರ ಸಿಬಿಐಗೆ ಪ್ರಕರಣವನ್ನು ವಹಿಸಲು ಹಿಂದೇಟು ಹಾಕುತ್ತಿದೆ ಎಂದು ಜನಾರ್ದನ ಪೂಜಾರಿ ಟೀಕಿಸಿದ್ದಾರೆ.ಕೋಮು ಸ್ವರೂಪವನ್ನು ಪಡೆಯುತ್ತಿರುವ ಕಬೀರ್ ಸಾವಿನ ಘಟನೆಯನ್ನು ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಗೆ ಒಪ್ಪಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ವರದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಾ ತಿಳಿಸಿದರು.

ಆಡಳಿತದಲ್ಲಿ ನಂಬಿಕೆ ಬಲಪಡಿಸಲು ಜನರ ನಡುವೆ ವಿಶ್ವಾಸ ಬಲಪಡಿಸುವ ಕೆಲಸವನ್ನು ರಾಜ್ಯಸರ್ಕಾರ ಮಾಡಬೇಕು ಎಂದು ಹೇಳಿದರು. ಗೃಹಸಚಿವ ಕೆ.ಜೆ. ಜಾರ್ಜ್ ವಿರುದ್ಧ ವಾಗ್ದಾಳಿ ಮಾಡಿದ ಅವರು, ಸಿಐಡಿ ತನಿಖೆಯಲ್ಲಿ ಜನರಿಗೆ ನಂಬಿಕೆಯಿಲ್ಲದಿರುವುದರಿಂದ ಸಿಬಿಐಗೆ ಪ್ರಕರಣವನ್ನು ವಹಿಸಬೇಕು ಎಂದು ನುಡಿದರು.ಇದು ಎನ್‌ಕೌಂಟರ್ ಅಲ್ಲವೆಂದು ಹೇಳಿದ ಅವರು  ಹತ್ಯೆಯ ಸ್ಪಷ್ಟ ಪ್ರಕರಣ.

ಹತ್ಯೆಯ ಬಗ್ಗೆ ಅನೇಕ ಸಾಕ್ಷ್ಯಾಧಾರಗಳು ಲಭ್ಯವಿದ್ದರೂ, ಗೃಹಸಚಿವಾಲಯ ಕಬೀರ್ ಹತ್ಯೆಗೆ ಸಂಬಂಧಿಸಿ ಮೌನವಹಿಸಿದೆ ಎಂದು ನುಡಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೈವಾಡದ ಬಗ್ಗೆ ಆಮೂಲಾಗ್ರ ತನಿಖೆ ನಡೆಸಬೇಕು. ಜನರ ಮನಸ್ಸಿನಲ್ಲಿ ಅದು ಭಯವನ್ನು ಹುಟ್ಟಿಸುತ್ತಿದೆ ಎಂದು ಪೂಜಾರಿ ಹೇಳಿದರು.

Share this Story:

Follow Webdunia kannada