Select Your Language

Notifications

webdunia
webdunia
webdunia
webdunia

ಪೊಲೀಸ್‌ನಿಂದ ಮಗುವಿನ ಅತ್ಯಾಚಾರ ಯತ್ನ

ಪೊಲೀಸ್‌ನಿಂದ ಮಗುವಿನ ಅತ್ಯಾಚಾರ ಯತ್ನ
ಚಿಕ್ಕಬಳ್ಳಾಪುರ , ಗುರುವಾರ, 25 ಫೆಬ್ರವರಿ 2016 (08:56 IST)
ಇದು ಬೇಲಿಯೇ ಎದ್ದು ಹೊಲ ಮೇದ ಕಥೆ. ಸಾರ್ವಜನಿಕರ ರಕ್ಷಣೆ ಹೊಣೆ ಹೊತ್ತ ಪೊಲೀಸ್‌ ಪೇದೆಯೇ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಹೇಯ ಘಟನೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
 
10 ವರ್ಷದ  ಅಪ್ರಾಪ್ತ ಬಾಲಕಿಯನ್ನು ಚಾಕಲೇಟು ಕೊಡುವ ನೆಪದಲ್ಲಿ ವಸತಿ ಗೃಹಕ್ಕೆ ಕರೆದೊಯ್ದ ಚಿಕ್ಕಬಳ್ಳಾಪುರ ನಗರ ಸಂಚಾರಿ ಪೊಲೀಸ್ ಠಾಣೆ ಮುಖ್ಯ ಪೇದೆ ಮಂಜುನಾಥ್ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಹೆದರಿದ ಬಾಲಕಿ ಕಿರುಚಿಕೊಂಡಾಗ ಆಕೆಯ ಕೈಗೆ 500 ರೂಪಾಯಿ ಹಣ ಕೊಟ್ಟು ಯಾರಿಗೂ ಹೇಳಬೇಡ ಎಂದು ಹೇಳಿ ಕಳುಹಿಸಿದ್ದಾನೆ.
 
ಆದರೆ ಘಟನೆಯಿಂದ ಆಘಾತಗೊಂಡಿದ್ದ ಬಾಲಕಿ ಮನೆಗೆ ಮರಳಿ ತಾಯಿಯ ಬಳಿ ನಡೆದ ವಿಷಯವನ್ನು ತಿಳಿಸಿದ್ದಾಳೆ. ತಕ್ಷಣ ಚಿಕ್ಕಬಳ್ಳಾಪುರ ಎಸ್‌ಪಿಯವರನ್ನು ಭೇಟಿಯಾದ ಮಗುವಿನ ತಂದೆ-ತಾಯಿ ಈ ಕುರಿತು ದೂರು ದಾಖಲಿಸಿದ್ದಾರೆ.  
 
ಘಟನೆಯ ಮಾಹಿತಿ ಪಡೆದ ಸಾರ್ವಜನಿಕರು ಪೇದೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎಸ್‌ಪಿ ಚೈತ್ರಾ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಆರೋಪಿಯನ್ನು ಅಮಾನತುಗೊಳಿಸಿ ಬಂಧಿಸುವುದಾಗಿ ಭರವಸೆ ನೀಡಿದ ಬಳಿಕ ಜನರು ಶಾಂತರಾದರು. 

Share this Story:

Follow Webdunia kannada