Select Your Language

Notifications

webdunia
webdunia
webdunia
webdunia

ಪೊಲೀಸ್ ಜೀಪು-ಬೈಕ್ ನಡು ವೆ ಅಪಘಾತ: ಬೈಕ್ ಸವಾರ ಸಾವು

ಪೊಲೀಸ್ ಜೀಪು-ಬೈಕ್ ನಡು ವೆ ಅಪಘಾತ: ಬೈಕ್ ಸವಾರ ಸಾವು
ಧಾರವಾಡ , ಬುಧವಾರ, 21 ಜನವರಿ 2015 (12:44 IST)
ಪೊಲೀಸ್ ವಾಹನವೊಂದು ಎದುರಿಗೆ ಬರುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡಿರುವ ಘಟನೆ ನಗರದ ಕಲಘಟಗಿ ಕ್ರಾಸ್ ಬಳಿ ನಡೆದಿದೆ.

ಮೃತನನ್ನು ಸಿದ್ದು ಅಜ್ಜುನವರ(25) ಎಂದು ಹೇಳಲಾಗಿದ್ದು, ಈತ ಇಲ್ಲಿನ ತಕಟನಹಳ್ಳಿ ನಿವಾಸಿ ಎಂದು ತಿಳಿದು ಬಂದಿದೆ. ಬೈಕ್‌ನಲ್ಲಿ ತಮ್ಮ ಸ್ನೇಹಿತನೊಂದಿಗೆ ಕಲಘಟಗಿ ನಗರದಿಂದ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು. ಇದೇ ಸಂದರ್ಭದಲ್ಲಿ ಎದುರಿಗೆ ಬರುತ್ತಿದ್ದ ಕಲಘಟಗಿ ವಲಯ ಸಿಪಿಐ ಸಿದ್ದನಗೌಡ ಪಾಟೀಲ್ ಅವರಿದ್ದ ಸರ್ಕಾರಿ ಜೀಪು ಸಿದ್ದು ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಸಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಹಿಂಬದಿ ಕುಳಿತಿದ್ದ ಆತನ ಸ್ನೇಹಿತನೋರ್ವ ಗಾಯಗೊಂಡಿದ್ದಾನೆ. ಗಾಯಾಳುವನ್ನು ಇಲ್ಲಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳವನ್ನು ಪರಿಶೀಲಿಸಿರುವ ಕಲಘಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada