ಸಿಎಂ ಭೇಟಿಗೆ ಬಂದಿದ್ದ ಮಾತೆ ಗಂಗಾಂಬಿಕೆ ದೇವಿಯನ್ನ ಪೊಲೀಸರು ಒಳಬಿಟ್ಟಿಲ್ಲ.ಬಸವ ಧರ್ಮದ ಪೀಠಾಧ್ಯಕ್ಷೆಯಾದ ಮಾತೆ ಗಂಗಾಂಬಿಕೆ ಬಸವಧರ್ಮ ಪೀಠದ ಆಸ್ತಿ ವಿವಾದದಲ್ಲಿ ಸುದ್ದಿಯಾಗಿದ್ದರು.ಪೂರ್ವ ಅನುಮತಿ ಇಲ್ಲದೆ ಸಿಎಂ ಭೇಟಿ ಮಾಡಲು ಬಂದಿದ್ದ ಮಾತೆ ಗಂಗಾಂಬಿಕೆ ದೇವಿಯನ್ನ ಅನುಮತಿ ಪಡೆದಿಲ್ಲ ಅಂತ ಸಿಎಂ ಮನೆಗೆ ಪೊಲೀಸರು ಬಿಟ್ಟಿಲ್ಲ.
ಬಸವ ಧರ್ಮ ಪೀಠದ ಬಗ್ಗೆ ಮಾತುಕತೆಗೆ ಮಾತೆ ಗಂಗಬಿಕೆ ದೇವಿ ಬಂದಿದ್ದು,ಸಿಎಂ ಭೇಟಿಗೆ ಅವಕಾಶ ಸಿಗದೇ ಮಾತೆ ಗಂಗಾಂಬಿಕೆ ದೇವಿ ವಾಪಸ್ ಆಗಿದ್ದು,ಸ್ವಲ್ಪ ಹೊತ್ತಿನ ನಂತರ ಮತ್ತೆ ಸಿಎಂ ನಿವಾಸಕ್ಕೆ ಅನುನತಿಯೊಂದಿಗೆ ಮಾತೆ ಗಂಗಾಂಬಿಕೆ ಒಳಗೆ ಹೋಗಿದ್ದಾರೆ.ಎರಡನೇ ಸಲ ಅನುಮತಿ ಪಡೆದಿದ್ದ ಹಿನ್ನೆಲೆಯಲ್ಲಿ ಸಿಎಂ ನಿವಾಸದ ಒಳಗೆ ಪೊಲೀಸರು ಬಿಟ್ಟಿದ್ದಾರೆ.