Select Your Language

Notifications

webdunia
webdunia
webdunia
webdunia

ಬಯೋಕಾನ್‌ನ ನಾಲ್ಕು ಲಾರಿ ವಶ: ಎಫ್ಐಆರ್ ದಾಖಲು

ಬಯೋಕಾನ್‌ನ ನಾಲ್ಕು ಲಾರಿ ವಶ: ಎಫ್ಐಆರ್ ದಾಖಲು
ಬೆಂಗಳೂರು , ಸೋಮವಾರ, 6 ಜುಲೈ 2015 (16:00 IST)
ಗ್ರಾಮಾಂತರ: ಅನಧಿಕೃತವಾಗಿ ರಾಸಾಯನಿಕವನ್ನು ತಂದು ಸುರಿಯಲಾಗುತ್ತಿದೆ ಎಂದು ಆರೋಪಿಸಿ ದೊಡ್ಡಬಳ್ಳಾಪುರ ತಾಲೂಕಿನ ಗುಂಡ್ಲಹಳ್ಳಿ ಗ್ರಾಮಸ್ಥರು, ಬಯೋಕಾನ್ ಕಂಪನಿಗೆ ಸೇರಿದ ನಾಲ್ಕು ಲಾರಿಗಳನ್ನು ಪೊಲೀಸರಿಂದ ಜಪ್ತಿ ಮಾಡಿಸಿದ್ದು, ಈ ಸಂಬಂಧ ಆರು ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. 
 
ಏನಿದು ಪ್ರಕರಣ?:
ನಗರದ ಹೊಸೂರು ಗೇಟ್‌ ಬಳಿಯ ಜಿಗಣಿಯಲ್ಲಿರುವ ಬಯೋಕಾನ್ ಕಂಪನಿಯ ಅಪ್ರಯೋಜಕ ರಾಸಾಯನಿಕವನ್ನು ಟ್ಯಾಂಕರ್‌ಗಳ ಮೂಲಕ ತಂದು ಗುಂಡ್ಲಹಳ್ಳಿಯಲ್ಲಿ ಸುರಿಯಲಾಗುತ್ತಿದೆ. ಇದರಿಂದ ಗ್ರಾಮಸ್ಥರು ವಾಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕುಪಿತಗೊಂಡಿದ್ದ ಗ್ರಾಮಸ್ಥರು, ನಿನ್ನೆ ರಾಸಾಯನಿಕವನ್ನು ಸುರಿಯಲು ಆಗಮಿಸಿದ್ದ 4 ಟ್ಯಾಂಕರ್‌ಗಳಿಗೆ ಮುತ್ತಿಗೆ ಹಾಕಿ ಅವುಗಳನ್ನು ಪೊಲೀಸರಿಗೊಪ್ಪಿಸಿದ್ದಾರೆ. 
 
ಇನ್ನು ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರರು, ಲಾರಿ ಮಾಲೀಕರು ಹಾಗೂ ಬಯೋಕಾನ್ ಕಂಪನಿ ಸೇರಿದಂತೆ ಒಟ್ಟು ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.  
 
ಈ ಹಿಂದೆ ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಗ್ರಾಮಸ್ಥರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಕೇವಲ ಕಸವನ್ನು ಮಾತ್ರ ವಿಲೇವಾರಿ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸಿದ್ದ ಗ್ರಾಮಸ್ಥರು, ಅನುಮತಿ ನೀಡಿದ್ದರು. ಆದರೆ ಕಸದ ಬದಲಾಗಿ ರಾಸಾಯನಿಕ ಸುರಿಯಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.   

Share this Story:

Follow Webdunia kannada