Webdunia - Bharat's app for daily news and videos

Install App

ಖಾರದ ಪುಡಿ ಎರಚಿ ಚಿನ್ನ ದೋಚಿದ ಕಳ್ಳಿಯರು

Webdunia
ಶನಿವಾರ, 30 ಜುಲೈ 2016 (06:55 IST)
ಚಿನ್ನ ಖರೀದಿಸುವ ನೆಪದಲ್ಲಿ ಬಂದ ಕಳ್ಳಿಯರಿಬ್ಬರು ಮಾಲೀಕನ ಕಣ್ಣಿಗೆ ಮೆಣಸಿನಪುಡಿ ಎರಚಿ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ. ಆರೋಪಿಗಳಿಬ್ಬರನ್ನು ಕೆಲಸಮಯದಲ್ಲೇ ಬಂಧಿಸುವಲ್ಲಿ ಕುಮಾರಸ್ವಾಮಿ  ಲೇ ಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಮಾಗಡಿ ಮೂಲದ ವಸಂತಮ್ಮ (45) ಮತ್ತು ಹೇಮಾವತಿ(25) ಎಂದು ಗುರುತಿಸಲಾಗಿದ್ದು ಗುರುವಾರ ರಾತ್ರಿ ಕೋಣನಕುಂಟೆ ಕ್ರಾಸ್‌ನ ಮಹಾವೀರ್ ಗೋಲ್ಡ್ ಪ್ಯಾಲೇಸ್‌ಗೆ ಚಿನ್ನಾಭರಣ ಖರೀದಿಸುವ ನೆಪದಲ್ಲಿ ಬಂದಿದ್ದ ಅವರಿಬ್ಬರು ಮಾಲೀಕ ಲೋಕೇಶ್ ಆಭರಣಗಳನ್ನು ತೋರಿಸುತ್ತಿದ್ದಂತೆ ಆತನ ಮುಖಕ್ಕೆ ಖಾರದ ಪುಡಿ ಎರಚಿ ಪರಾರಿಯಾಗಿದ್ದಾರೆ.

ಕೂಡಲೇ ಲೋಕೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಕಳ್ಳಿಯರನ್ನು ಬಂಧಿಸಲು ಕಾರ್ಯಾಚರಣೆಗಿಳಿದ ಪೋಲೀಸರು ಅವರಿಬ್ಬರನ್ನು ಬಂಧಿಸಿ100 ಗ್ರಾಂ ತೂಕದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ರಾಜ್ಯದ ಈ ಪ್ರದೇಶಗಳಲ್ಲಿ ಇಂದು ಮಳೆ ಬರುವುದು ಪಕ್ಕಾ

ಸಿಂಹಾದ್ರಿ ಅಪ್ಪಣ್ಣಸ್ವಾಮಿ ದೇವಸ್ಥಾನದಲ್ಲಿ ಚಂದನೋತ್ಸವಂ ವೇಳೆ ಗೋಡೆ ಕುಸಿದು ಎಂಟು ಭಕ್ತರು ಸಾವು

ಮಂಗಳೂರಿನಲ್ಲಿ ಸಾಮೂಹಿಕ ಹಲ್ಲೆ, ಕೊಲೆ ಪ್ರಕರಣ: ಮೃತನ ಗುರುತು ಪತ್ತೆ, 15 ಮಂದಿ ಬಂಧನ

ಭಾರತದ 52ನೇ ಸಿಜೆಐ ಆಗಿ ನೇಮಕಗೊಂಡ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಹಿನ್ನಲೆ ಇಲ್ಲಿದೆ

Prajwal Revanna: ವಕೀಲರನ್ನೂ ನೇಮಿಸಿಕೊಂಡಿಲ್ಲ: ಪ್ರಜ್ವಲ್ ರೇವಣ್ಣ ಪರಿಸ್ಥಿತಿ ಏನಾಗಿದೆ ನೋಡಿ

ಮುಂದಿನ ಸುದ್ದಿ
Show comments