ತೀವ್ರ ವಿಚಾರಣೆ ನಂತರ ದೇವರಾಜೇಗೌಡರನ್ನು ಬಂಧಿಸಿದ ಪೊಲೀಸರು

Sampriya
ಶನಿವಾರ, 11 ಮೇ 2024 (18:19 IST)
Photo Courtesy X
ಬೆಂಗಳೂರು:  ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ನಿನ್ನೆ ವಶಕ್ಕೆ ಪಡೆದಿದ್ದ ವಕೀಲ, ಬಿಜೆಪಿ ನಾಯಕ ದೇವರಾಜೇಗೌಡ ಅವರನ್ನು ಇಂದು ಪೊಲೀಸರು ಬಂಧಿಸಿದ್ದಾರೆ.

ಹಾಸನ ಜೆಡಿಎಸ್ ಸಂಸದ ಪ್ರಜ್ವಲ್​ ರೇವಣ್ಣ ಅವರು ವಿರುದ್ಧ ಸಾಲು ಸಾಲು ಆರೋಪ ಮಾಡಿ ಪ್ರಕರಣ ಸಂಬಂಧ ಸುದ್ದಿಯಲ್ಲಿದ್ದರು. ನಿನ್ನೆ ಅವರನ್ನು ಮಹಿಳೆಯೊಬ್ಬರು ಅವರ ವಿರುದ್ಧ ನೀಡಿದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ವಶಕ್ಕೆ ಪಡೆದು ಇಂದು ತೀವ್ರ ವಿಚಾರಣೆ ನಡೆಸಿದರು.

ಹೊಳೆ ನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಎರಡು ಕೇಸ್ ಗಳ ಸಂಬಂಧ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಸತತ ಮೂರು ಗಂಟೆಗಳ ವಿಚಾರಣೆ ನಂತರ ಇದೀಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ನಿನ್ನೆ ಚಿತ್ರದುರ್ಗ ಬಳಿಯ ಕೆ.ಆರ್. ಹಳ್ಳಿ ಗೇಟ್ ಬಳಿ ಹಿರಿಯೂರು ಗ್ರಾಮಾಂತರ ಪೊಲೀಸರು ದೇವರಾಜೇಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ತಂದೆ ಮತ್ತು ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ವಿರುದ್ಧ ಸ್ಪರ್ಧಿಸಿದ್ದ ದೇವರಾಜೇಗೌಡ, ಲೈಂಗಿಕ ಕಿರುಕುಳದ ವೀಡಿಯೊಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ರಾಜ್ಯದ ಕಾಂಗ್ರೆಸ್ ನಾಯಕರನ್ನು ದೂಷಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವೋಟ್ ಚೋರಿ ಚರಿತ್ರೆಯನ್ನೇ ಹೊಂದಿರುವ ಕಾಂಗ್ರೆಸ್ ಗೆ ಬಿಜೆಪಿ ಮೇಲೆ ಆರೋಪಿಸಲು ನೈತಿಕತೆಯಿಲ್ಲ: ಸಿಟಿ ರವಿ

ಹಿಂದೂಗಳ ಪವಿತ್ರ ಕಾರ್ತಿಕ ದೀಪಕ್ಕೆ ಅನುಮತಿ ನೀಡಿದ ಜಡ್ಜ್ ವಿರುದ್ಧ ಸಹಿ ಹಾಕಿದ ರಾಜ್ಯದ ಮೂವರು ಕೈ ಸಂಸದರು ಇವರೇ

ಡಿನ್ನರ್ ಮೀಟಿಂಗ್ ನಡುವೆ ಸಿಎಂ, ಡಿಸಿಎಂಗೆ ದೆಹಲಿ ಬುಲಾವ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ