Select Your Language

Notifications

webdunia
webdunia
webdunia
webdunia

ಅಮೃತಸರದಲ್ಲಿ ಅಮೆರಿಕಾ ಮಹಿಳೆಯಿಂದ 25 ಸಜೀವ ಗುಂಡುಗಳ ವಶ

ಅಮೃತಸರದಲ್ಲಿ ಅಮೆರಿಕಾ ಮಹಿಳೆಯಿಂದ 25 ಸಜೀವ ಗುಂಡುಗಳ ವಶ
ಅಮೃತಸರ , ಬುಧವಾರ, 25 ಫೆಬ್ರವರಿ 2015 (13:47 IST)
ಅಮೇರಿಕಾ ಮೂಲದ ಮಹಿಳೆಯೋರ್ವಳಿಂದ ರೈಫಲ್‌ಗೆ ಅಳವಡಿಸಲಾಗುವ 25 ಸಜೀವ ಗುಂಡುಗಳನ್ನು ಇಲ್ಲಿನ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಇಂದು ವಶಕ್ಕೆ ಪಡೆದಿದ್ದು, ಮಹಿಳೆಯನ್ನು ತನಿಖೆಗೊಳಪಡಿಸಿದ್ದಾರೆ. 
 
ಮಹಿಳೆಯು ಅಮೆರಿಕಾ ಮೂಲದವರು ಎಂದಷ್ಟೇ ಮಾಹಿತಿ ನೀಡಿರುವ ಅಧಿಕಾರಿಗಳು ತನಿಖೆಯ ನಂತರ ಇತರೆ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದು, ಹೆಚ್ಚಿನ ಮಾಹಿತಿ ನೀಡಲು ಮಾಧ್ಯಮಗಳಿಂದ ಸಮಯಾವಕಾಶ ಕೋರಿದ್ದಾರೆ. ಅಲ್ಲದೆ ಮಹಿಳೆಯನ್ನು ತನಿಖೆಗೆ ಒಳಪಡಿಸಿದ್ದಾರೆ. 
 
ಈ ಗುಂಡುಗಳನ್ನು ಹೊತ್ತೊಯ್ಯುತ್ತಿದ್ದ ಮಹಿಳೆಯು ಪುಣೆ ವಿಮಾನ ನಿಲ್ದಾಣದಿಂದ ಅಮೃತಸರದಲ್ಲಿ ಇಳಿದಿದ್ದರು. ಮತ್ತೆ ಇಲ್ಲಿಂದ ದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದ್ದು, ಈ ವೇಳೆ ತಪಾಸಣೆಗೊಳಪಡಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.  

Share this Story:

Follow Webdunia kannada