Webdunia - Bharat's app for daily news and videos

Install App

ಕೈ ಮುಗಿತಿನಿ ವಾಚ್‌ನಂತಹ ಪ್ರಕರಣಗಳ ಕಿತ್ತಾಟ ಕೈ ಬಿಡಿ: ಕಾಗೋಡು

Webdunia
ಶನಿವಾರ, 27 ಫೆಬ್ರವರಿ 2016 (14:10 IST)
ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದುಬಾರಿ ವಾಚ್ ಕುರಿತಂತೆ ನಡೆಯುತ್ತಿರುವ ಆರೋಪ ಪ್ರತ್ಯಾರೋಪಗಳಿಂದ ಬೇಸತ್ತ ವಿಧಾನಸಬೆಯ ಸಭಾಪತಿ ಕೈ ಮುಗಿತಿನಿ ವಾಚ್‌ನಂತಹ ಪ್ರಕರಣಗಳ ಕಿತ್ತಾಟ ಕೈ ಬಿಡಿ ಎಂದು ಅಡಳಿತರೂಢ ಮತ್ತು ವಿಪಕ್ಷಗಳ ಶಾಸಕರಿಗೆ ಮನವಿ ಮಾಡಿದ್ದಾರೆ.
 
ಬೆಂಗಳೂರಿನಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಗೋಡು ತಿಮ್ಮಪ್ಪ, ರಾಜ್ಯದ ಜನತೆ ನಿರಂತರವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 
 
ಜನತೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ,ಸಮಸ್ಯೆಗಳಿಗೆ ಪರಿಹಾರ ಒದಗಿಸಿ. ಕೈ ಮುಗಿದು ಕೇಳ್ತಿನಿ ಜನತೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಎಂದು ಮನವಿ ಮಾಡಿದರು. 
 
ಶಾಸಕರು ಕಡ್ಡಾಯವಾಗಿ ಅಧಿವೇಶನಕ್ಕೆ ಹಾಜರಾಗಬೇಕು, ಮಂತ್ರಿಗಳು, ಶಾಸಕರ ಪ್ರಶ್ನೆಗಳಿಗೆ ಕಡ್ಡಾಯವಾಗಿ ಉತ್ತರಿಸಿಬೇಕು ಎನ್ನುವುದು ಶಾಸಕರು, ಮತ್ತು ಮಂತ್ರಿಗಳಲ್ಲಿ ಇದು ನನ್ನ ಕೋರಿಕೆಯಾಗಿದೆ ಎಂದರು.
 
ಕೆಳಹಂತದಿಂದ ವಿಧಾನಸೌಧದವರೆಗೆ ಪಾರದರ್ಶಕ ವ್ಯವಸ್ಥೆ ಜಾರಿಯಾಗಬೇಕು. ಅಂದಾಗ ಮಾತ್ರ ರಾಜ್ಯದ ಜನತೆಗೆ ಉತ್ತಮ ಅಡಳಿತ ಕೊಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
 
ವಿಧಾನಸಭೆಯಲ್ಲಿ ಪ್ರಸ್ತಾವವಾದ ಉಪಲೋಕಾಯುಕ್ತ ನ್ಯಾ ಸುಭಾಷ್ ಆಡಿ ವಿರುದ್ಧ ಪದಚ್ಯುತಿ ಪ್ರಸ್ತಾವನೆ ವಿಚಾರ ಪ್ರಸ್ತಾವನೆಯನ್ನು ನಿನ್ನೆ ಹೈಕೋರ್ಟ್ ಸಿಜೆಗೆ ಕಳುಹಿಸಲಾಗಿದೆ.
 
ಫೆಬ್ರವರಿ 29 ರಿಂದ ವಿಧಾನಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿದ್ದು ಜಂಟಿ ಸದನದಲ್ಲಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಅಧಿವ್ಶನದಲ್ಲಿ ನಾಲ್ಕು ಮಸೂದೆಗಳು ಅಂಗೀಕಾರಕ್ಕೆ ಬಾಕಿ ಉಳಿದಿವೆ ಎಂದು ತಿಳಿಸಿದ್ದಾರೆ.
 
ಕಳೆದ ವರ್ಷ 60 ದಿನ ಅಧಿವೇಶನ ನಡೆದಿಲ್ಲ ಎನ್ನುವ ಕೊರಗು ಇದೆ. ಪ್ರಸಕ್ತ ವರ್ಷದಲ್ಲಿ 60 ದಿನಗಳವರೆಗೆ ಅಧಿವೇಶನ ನಡೆಯಲಿ ಎನ್ನುವುದು ನನ್ನ ಬಯಕೆಯಾಗಿದೆ ಎಂದು ಹೇಳಿದ್ದಾರೆ.
 
ಈ ಬಾರಿ ಸದನದ ಕಲಾಪ ಸುಗಮವಾಗಿ ನಡೆಯಲಿದೆ ಎಂದು ಸಭಾಪತಿ ಕಾಗೋಡು ತಿಮ್ಮಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments