Select Your Language

Notifications

webdunia
webdunia
webdunia
webdunia

ಪಿಸ್ತೂಲು ಮಾಫಿಯಾ: ಇಬ್ಬರು ಆರೋಪಿಗಳ ಸೆರೆ

ಪಿಸ್ತೂಲು ಮಾಫಿಯಾ: ಇಬ್ಬರು ಆರೋಪಿಗಳ ಸೆರೆ
ಹುಬ್ಬಳ್ಳಿ: , ಗುರುವಾರ, 12 ಮೇ 2016 (20:27 IST)
ಹುಬ್ಬಳ್ಳಿ-ಧಾರವಾಡದಲ್ಲಿ ಪಿಸ್ತೂಲು ಮಾಫಿಯಾ ರಾಜಾರೋಷವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಪಿಎಂಸಿ ಪೊಲೀಸ್ ನಿರೀಕ್ಷಕರಿಗೆ ಖಚಿತ ಮಾಹಿತಿ ಆಧಾರದ ಮೇಲೆ ಮೋಟರ್ ಸೈಕಲ್‌ವೊಂದನ್ನು ಬೆನ್ನಟ್ಟಿದಾಗ ಅವರು ತಪ್ಪಿಸಿಕೊಳ್ಳಲು ಯತ್ನಿಸಿದರು.

ಆದರೆ ಪೊಲೀಸರು ಅವರನ್ನು ಹಿಡಿದು ತಪಾಸಣೆ ಮಾಡಿದಾಗ  ಒಂದು ಪಿಸ್ತೂಲು ಮತ್ತು 3 ಗುಂಡುಗಳು ಸಿಕ್ಕಿವೆ. ಆರೋಪಿಗಳನ್ನು ಅಕ್ರಮವಾಗಿ ಪಿಸ್ತೂಲುಗಳನ್ನು ಮಾರಾಟ ಮಾಡಿ ಹಣಗಳಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಅಫ್ಸರ್ ಅಲಿ ಮತ್ತು ವಾಸಿಂ ಎಂಬ ಬಿಜಾಪುರ ವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಫ್ಸರ್ ಅಲಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕವೃತ್ತಿ ಮಾಡುತ್ತಿದ್ದಾನೆ. ಶಿಕ್ಷಕವೃತ್ತಿ ಮಾಡುತ್ತಿದ್ದ ವ್ಯಕ್ತಿ ಬೇರೇನೋ ಮಾಡಿ ಯಡವಟ್ಟು ಮಾಡಿಕೊಂಡು ಈಗ ಪೊಲೀಸರ ಅತಿಥಿಯಾಗಿರುವುದು ವಿಪರ್ಯಾಸ. 

Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯಕೀಯ ಕಾಲೇಜಿಗೆ ಪ್ರವೇಶ ಪರೀಕ್ಷೆ ಇಲ್ಲ: ಜಯಾ ಹೊಸ ಚುನಾವಣೆ ಭರವಸೆ