Webdunia - Bharat's app for daily news and videos

Install App

ಡಿಸೆಂಬರ್ 15ರ ನಂತರ ಹೊಸ ಶಾಲೆಗಳ ಪ್ರಾರಂಭಕ್ಕೆ ಅನುಮತಿ

Webdunia
ಶುಕ್ರವಾರ, 2 ಡಿಸೆಂಬರ್ 2016 (10:04 IST)
2015ರ ಎಸ್.ಎಸ್.ಎಲ್.ಸಿ ಫಲಿತಾಂಶಕ್ಕೆ ಕೊಡುಗೆ ನೀಡಿದ ಸುಮಾರು 60 ಸಾವಿರ ಶಿಕ್ಷಕರಿಗೆ ಪ್ರಶಂಶನಾ ಪತ್ರ ನೀಡಿ ಗೌರವಿಸಲಾಗಿದೆ. ಸರ್ಕಾರ ಶಿಕ್ಷಕರಿಗೆ ಸೇವಾ ಭದ್ರತೆ ನೀಡಲು ಬದ್ಧವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವಿರ ಶೇಠ ಅವರು ಹೇಳಿದರು.
 
ಅವರು ಇಂದು ವಿಧಾನ ಪರಿಷತ್ತಿನಲ್ಲಿ ಶಾಸಕ ಪುಟ್ಟಣ್ಣ ಅವರು ಸೇಕ್ಷನ್ 72ರ ಅಡಿಯಲ್ಲಿ ಮಂಡಿಸಿದ ಗಮನ ಸೇಳೆಯು ಸೂಚನೆಗೆ ಉತ್ತರಿಸಿದರು. ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚಿ ಪ್ರೋತ್ಸಾಹ ನೀಡಲಾಗುತ್ತಿದೆ. ಡೈಸ್ ಸಂಸ್ಥೆಯ ಕಳೆದ 16 ವರ್ಷಗಳಿಂದ ತನ್ನ ವರದಿಯನ್ನು ಇಲಾಖೆಗೆ ಸಲ್ಲಿಸುತ್ತಿದ್ದು, ಈ ವರ್ಷದಿಂದ ಜಾರಿಗೊಳಿಸಲಾಗುತ್ತಿದೆ. 
 
ರಾಜ್ಯದ 2164 ಶಾಲೆಗಳಲ್ಲಿ, 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. 277 ಶಾಲೆಗಳಲ್ಲಿ ಪ್ರತಿ ಶಾಲೆಗೆ ಓರ್ವ ವಿದ್ಯಾರ್ಥಿಯಿದ್ದಾನೆ. ಸರ್ಕಾರ ಎಲ್ಲಾ ಮಕ್ಕಳಿಗೂ ಶಿಕ್ಷಣ ದೊರಕಬೇಕು ಎಂಬ ನೀತಿಯಿಂದಾಗಿ ಪ್ರೋತ್ಸಾಹ ನೀಡುತ್ತಿದೆ.
 
ರಾಜ್ಯದಲ್ಲಿ 34 ಶೈಕ್ಷಣಿಕ ಜಿಲ್ಲೆಗಳು, 234 ಶೈಕ್ಷಣಿಕ ತಾಲೂಕುಗಳು ಮತ್ತು 3600 ಕ್ಲಸ್ಟರ್‍ಗಳಿವೆ. ಈಗ ನೇಮಿಸಿರುವ ಬಿಆರ್‍ಸಿ ಮತ್ತು ಎಆರ್‍ಸಿಗಳು ಅಧಿಕಾರಿಗಳಂತೆ ವರ್ತಿಸುತ್ತಿದ್ದು, ಆದರೆ ಅವರು ಅಧಿಕಾರಿಗಳಲ್ಲ, ಅವರನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಸಂಪನ್ಮೂಲ ವ್ಯಕ್ತಿಗಳನ್ನಾಗಿ ನೇಮಿಸಲಾಗಿದೆ.
 
ಗಡಿನಾಡ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ನೇಮಿಸಿದ್ದ, ಬರಗೂರ ರಾಮಚಂದ್ರಪ್ಪ ಅವರ ಸಮಿತಿ ವರದಿಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದರು.
 
ಬರುವ ಡಿಸೆಂಬರ್ 15ರ ನಂತರ ಹೊಸ ಶಾಲೆಗಳ ಪ್ರಾರಂಭಕ್ಕೆ ಅನುಮತಿ ಕೊಡಲಾಗುವುದು. ಮತ್ತು ಈಗಿರುವ ಶಾಲೆಗಳ ಉನ್ನತಿಕರಣಕ್ಕೆ ಆದ್ಯತೆ ನೀಡಲಾಗುವುದು. ಶಿಕ್ಷಣ ಕಿರಣ ಕಾರ್ಯಕ್ರಮದ ಮೂಲಕ ಪ್ರತಿ ವಿದ್ಯಾರ್ಥಿಯ 1 ರಿಂದ 10 ನೇ ತರಗತಿಯವರಗಿನ ಶೈಕ್ಷಣಿಕ ದಾಖಲೆಗಳನ್ನು ವ್ಯವಸ್ಥಿತ ರೀತಿಯಲ್ಲಿ ದಾಖಲಿಸಲಾಗಿದೆ. ಶಾಲೆಗಳ ಅನುದಾನ ಹಿಂಪಡೆಯುವ ಸಂದರ್ಭದಲ್ಲಿ ಅದಕ್ಕಾಗಿ ಪೂರಕ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ಗಾಂಧೀಜಿ ಬಗ್ಗೆ ತಪ್ಪು ಮಾಹಿತಿ ಕೊಟ್ರಾ ರಾಹುಲ್ ಗಾಂಧಿ: ಲೆಹರ್ ಸಿಂಗ್ ಟ್ವೀಟ್ ನಲ್ಲಿ ಏನಿದೆ ನೋಡಿ

ರಕ್ತದ ಮಡುವಿನಲ್ಲಿ ನಿವೃತ್ತ ಪೊಲೀಸ್ ಓಂ ಪ್ರಕಾಶ್‌ ಮೃತದೇಹ ಪತ್ತೆ, ಮನೆಯವರೇ ಮೇಲೆ ಡೌಟ್‌

ಸಿಎಂ ಕುರ್ಚಿ ಗುದ್ದಾಟದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿ, ಧರ್ಮಾಧಿಕಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆ ಶಿವಕುಮಾರ್

Video vira: ವಿದ್ಯುತ್ ಶಾಕ್‌ನಿಂದ ಒದ್ದಾಟುತ್ತಿದ್ದ ಬಾಲಕನ ಪಾಲಿಗೆ ನಿಜವಾದ ಹೀರೋ ಆದ ಯುವಕ, ಇದಪ್ಪ ದೈರ್ಯ

ನನ್ನ ಸಾವಿಗೆ ಪತ್ನಿ, ಅತ್ತೆಯೇ ಕಾರಣ: ನ್ಯಾಯಕೊಡಿಸಲು ಸಾಧ್ಯವಾಗದಿದ್ದರೆ ಚಿತಾಭಸ್ಮ ಚರಂಡಿಗೆ ಎಸೆಯಿರಿ, ವಿಡಿಯೋ ಮಾಡಿಟ್ಟು ಟೆಕ್ಕಿ ಸಾವು

ಮುಂದಿನ ಸುದ್ದಿ
Show comments