Select Your Language

Notifications

webdunia
webdunia
webdunia
webdunia

ಯದುವೀರರಿಗೆ ಪಟ್ಟಾಭಿಷೇಕ: ಗಜೇಂದ್ರನ ಸ್ಥಾನ ಯಾರಿಗೆ

ಯದುವೀರರಿಗೆ ಪಟ್ಟಾಭಿಷೇಕ: ಗಜೇಂದ್ರನ ಸ್ಥಾನ ಯಾರಿಗೆ
ಮೈಸೂರು , ಭಾನುವಾರ, 24 ಮೇ 2015 (13:41 IST)
ಮೈಸೂರು ಅರಮನೆಯ ರಾಜವಂಶಸ್ಥರ ನೂತನ ಉತ್ತರಾಧಿಕಾರಿ ನೇಮಕಗೊಂಡಿರುವ ಯದುವೀರ್ ಅವರ  ಪಟ್ಟಾಭಿಷೇಕಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆದಿದ್ದು, ಇನ್ನು ಕೇವಲ ಮೂರೇ ಮೂರು ದಿನ ಉಳಿದಿದೆ. ಆದರೆ ಪ್ರಸ್ತುತದ ಪ್ರಶ್ನೆ ಪಟ್ಟಾಭಿಷೇಕದ ವೇಳೆ ಬಳಸುವ ಪಟ್ಟದ ಆನೆ ಯಾವುದು ಎಂಬುದು. 
 
ಇಲ್ಲಿಯವರೆಗೂ ಪಟ್ಟದ ಆನೆಯ ಸಾರಥ್ಯವನ್ನು ವಹಿಸಿದ್ದ ಗಜೇಂದ್ರ ತನ್ನ ಆಪ್ತ ಸ್ನೇಹಿತ ಶ್ರೀರಾಮ ಆನೆ ಹಾಗೂ ಮಾವುತನನ್ನೇ ಕೊಲೆಗೈದಿರುವ ಮದದಲ್ಲಿದೆ. ಇತಂಹ ಸ್ಥಿತಿಯಲ್ಲಿ ಅದನ್ನು ನಿಯಂತ್ರಿಸುವುದೇ ಕಷ್ಟ. ಆದ್ದರಿಂದ ಅವನನ್ನು ಅರಮನೆ ಪಟ್ಟಾಭಿಷೇಕಕ್ಕೆಂದು ಕರೆತರುವುದು ಅಸಾಧ್ಯದ ಮಾತು.
 
ಹೀಗಿರುವಾಗ ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರು ಮತ್ತಿಗೋಡು ಶಿಬಿರದಲ್ಲಿರುವ 12 ಅಂಬಾರಿಯನ್ನು ಹೊತ್ತು ಯಶಸ್ವಿ ದಸರಾಗೆ ಸಹಕರಿಸಿದ ಶಾಂತ ಸ್ವಭಾವದ ಬಲರಾಮನನ್ನೇ ಕಳುಹಿಸುವಂತೆ ಜಿಲ್ಲಾಧಿಕಾರಿ ಸಿ. ಶಿಖಾ ಹಾಗೂ ಅರಣ್ಯ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಪ್ರಸ್ತುತ ಬಲರಾಮನಿಗೂ ಕೂಡ ಮದವೇರಿದ್ದು ಅವನನ್ನು ನಿಯಂತ್ರಿಸುವುದೂ ಅರಣ್ಯ ಇಲಾಖೆಗೆ ತಲೆನೋವಾಗಿದೆ. 
 
ಮಹಾರಾಜರ ಪಟ್ಟಾಭಿಷೇಕಕ್ಕೆ ಇನ್ನೂ ಮೂರೇ ದಿನಗಳು ಮಾತ್ರ ಇದ್ದು, ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಒಂಟೆ ಎಲ್ಲವೂ ಸಿದ್ಧವಾಗಿವೆ. ಆದರೆ, ಪಟ್ಟದ ಆನೆ ಯಾವುದೆಂಬುದೇ ಎಲ್ಲರಿಗೂ ತಲೆನೋವಾಗಿ ಪರಿಣಮಿಸಿರುವ ವಿಷಯ. 

Share this Story:

Follow Webdunia kannada